ಲವಣಾಸುರ ವಧೆ
ರಾಮನು ಪಟ್ಟಕ್ಕೆ ಬಂದ ಮೇಲೆ ಆತನ ರಾಜ್ಯದಲ್ಲಿ ಎಲ್ಲೆಲೂ ಶಾಂತಿ ನೆಲೆಸಿತ್ತು.ಆದರೆ ಲವಣಾಸುರ ಎಂಬ ರಾಕ್ಷಸನು ರಾಮರಾಜ್ಯದಲ್ಲಿ ಪ್ರಜೆಗಳಿಗೆ ಕಿರುಕುಳ ನೀಡುತ್ತಿದ್ದ.ಅಷ್ಟೇ ಅಲ್ಲದೆ ಸಾಧುಗಳು ಯಾಗ ಮಾಡುವಾಗ ಅದಕ್ಕೆ ಅಡ್ಡಿ ಉಂಟು ಮಾಡುವುದು,ಪ್ರಶ್ನಿಸಿದರೆ ಅವರನ್ನೇ ತಿನ್ನುವುದು ಹೀಗೆಲ್ಲ ಮಾಡುತ್ತಿದ್ದ.ಇದರಿಂದ ನೊಂದ ಸಾಧುಗಳು ರಾಮನ ಬಳಿ ಬಂದು ಸಹಾಯಕ್ಕಾಗಿ ಮೊರೆ ಇಟ್ಟರು. ಮತ್ತು ರಾಮ ಅವರಿಗೆ ಅಭಯವನ್ನಿತ್ತ.
ಲವಣಾಸುರ ನು ಮಧು ಎಂಬ ಅಸುರ ರಾಜನ ಮಗ.ಈ ಮಧುವು ತನ್ನ ಒಳ್ಳೆ ಗುಣದಿಂದ ದೇವತೆಗಳ ಮಿತ್ರನಾಗಿದ್ದ.ಅವನ ಒಳ್ಳೆ ಗುಣಕ್ಕೆ ಮೆಚ್ಚಿ ಸಾಕ್ಷಾತ್ ಪರಶಿವನೇ ತನ್ನ ತ್ರಿಶೂಲವನ್ನು ಅವನಿಗೆ ನೀಡಿದ್ದ.ಆದರೆ ಆತನ ಮಗನಾದ ಲವಣ ನು ಆತನ ವಿರುದ್ಧ ಗುಣಗಳನ್ನು ಹೊಂದಿದ್ದ.ಚಿಕ್ಕವನಿರುವಾಗಲೇ ಲವಣ ನು ತನ್ನ ಸಹಪಾಥಿಗಳನ್ನು ಕೊಂದು ತಿನ್ನುತ್ತಿದ್ದ.ಮತ್ತು ಎಲ್ಲರಿಗೂ ಭೀತಿ ಉಂಟು ಮಾಡುತ್ತಾ ಬೆಳೆದ.
ಇದೆ ಕೊರಗಿನಲ್ಲಿ ಮಧುವು ಕೊನೆ ಉಸಿರೆಳೆಯುತ್ತಾನೆ.ಆಮೇಲೆ ಲವಣ ನು ಪಟ್ಟಕ್ಕೆ ಬರುತ್ತಾನೆ ಮತ್ತು ತನ್ನ ತಂದೆಯು ಶಿವನಿಂದ ಉಡುಗೊರೆಯಾಗಿ ಪಡೆದಿದ್ದ ತ್ರಿಶೂಲವನ್ನು ತನ್ನದಾಗಿ ಮಾಡಿಕೊಂಡು ಎಲ್ಲ ರಾಜರನ್ನು ಸೋಲಿಸುತ್ತ ಬರುತ್ತಾನೆ.ಇದನ್ನರಿತ ರಾಮನು ಲವಣ ನ ಜೊತೆ ಯುದ್ಧಕ್ಕೆ ಭರತ ನನ್ನು ಕಳುಹಿಸಲು ಯೋಚಿಸುತ್ತಾನೆ.ಇದನ್ನರಿತ ರಾಮನ ಇನ್ನೋರ್ವ ತಮ್ಮ ಶತ್ರುಘ್ನ ತನಗೂ ರಾಮ ಸೇವೆ ಮಾಡಲು ಅವಕಾಶ ಮಾಡಿ ಕೊಡಲು ಪ್ರಾರ್ಥಿಸುತ್ತಾನೆ.ಮತ್ತು ಅದಕ್ಕೆ ರಾಮ ಒಪ್ಪುತ್ತಾನೆ.
ಹೀಗೆ ಶತ್ರುಘ್ನ ಲವಣಾಸುರ ನ ಜೊತೆ ಯುದ್ಧ ಮಾಡಲು ತೆರಳುತ್ತಾನೆ.ಲವಣಾಸುರ ಬೇಟೆಯಿಂದ ವಾಪಸ್ಸಾಗುವ ಸಮಯದಲ್ಲಿ ಶತ್ರುಘ್ನ ಲವಣಾಸುರ ನ ಮೇಲೆ ಯುದ್ಧ ಸಾರುತ್ತಾನೆ.ತನ್ನ ಬಳಿ ಇರುವ ತ್ರಿಶೂಲದಿಂದ ಕೊಬ್ಬಿದ ಲವಣ ಯುದ್ಧಕ್ಕೆ ಬರುತ್ತಾನೆ.ಆಗ ವಿಷ್ಣುವೇ ದಯಪಾಲಿಸಿದ ಒಂದು ಬಾಣ ವನ್ನು ಉಪಯೋಗಿಸಿ ಶತ್ರುಘ್ನ ಲವಣಾಸುರ ನನ್ನು ಕೊಲ್ಲುತ್ತಾನೆ.
ಆ ನಂತರ ರಾಮನು ಶತ್ರುಘ್ನ ನನ್ನು ಲವಣಾಸುರ ನ ರಾಜ್ಯಕ್ಕೆ ಅಧಿಪತಿಯಾಗಿ ಮಾಡುತ್ತಾನೆ.
No comments:
Post a Comment