ಮೂಕಾಸುರ ವಧೆ
ಹಿಂದೆ ಅರ್ಜುನ ಪರಶಿವನನ್ನು ಪಾಶುಪತಾಸ್ತ್ರ ಕ್ಕಾಗಿ ತಪಸ್ಸು ಮಾಡುತ್ತಿದ್ದ.ಮೂಕಾಸುರ ಎನ್ನುವವನು ಕೌರವರ ಸ್ನೇಹಿತ.ಆತ ಅರ್ಜುನನ ತಪ ಭಂಗ ಉಂಟುಮಾಡಲು ಕರಡಿಯ ವೇಷದಲ್ಲಿ ಬಂದು ಅರ್ಜುನನ ಮೇಲೆ ಆಕ್ರಮಣ ಮಾಡುತ್ತಾನೆ.ಅದೇ ಸಮಯಕ್ಕೆ ಪರಶಿವನೂ ಅರ್ಜುನನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾಗುತ್ತಾನೆ.
ಆಗ ಮೂಕಾಸುರನು ಅರ್ಜುನನ ಮೇಲೆ ಧಾಳಿ ಮಾಡಲು ಬರುವುದನ್ನು ಗಮನಿಸಿದ ಪರಶಿವ ತಾನು ಬೇಡರ ವೇಷ ಹಾಕುತ್ತಾನೆ.ಅರ್ಜುನನೂ ಕರಡಿಗೆ ಬಾಣ ಹೊಡೆಯುತ್ತಾನೆ ಅಂತೆಯೇ ಪರಶಿವನು ಸಹ.ಮೂಕಾಸುರ ಹತನಾಗುತ್ತಾನೆ.ಆಗ ಕರಡಿಯನ್ನು ಕೊಂದವರು ಯಾರು ಎಂದು ಅರ್ಜುನ ಮತ್ತು ಪರಶಿವನ ನಡುವೆ ಜಗಳ ಪ್ರಾರಂಭವಾಗಿ ಅದು ಯುದ್ಧಕ್ಕೆ ತಿರುಗುತ್ತದೆ.
ಅರ್ಜುನನ ಯುದ್ಧ ಕೌಶಲ್ಯ ದಿಂದ ಸುಪ್ರೀತನಾದ ಪರಶಿವ ತನ್ನ ನಿಜರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ ಮತ್ತು ಆತನಿಗೆ ಪಾಶುಪತಾಸ್ತ್ರ ವನ್ನೂ ದಯಪಾಲಿಸುತ್ತಾನೆ.
ಹೀಗೆಂದು ಮಹಾಭಾರತ ದಲ್ಲಿ ಬರುವ ಕಥೆ ತಿಳಿಸುತ್ತದೆ.
No comments:
Post a Comment