ತಾರಕಾಸುರ ವಧೆ
ತಾರಕಾಸುರ ಎನ್ನುವ ರಾಕ್ಷಸನು ದೇವತೆಗಳಿಗೆ ಕಂಟಕ ಪ್ರಾಯನಾಗಿದ್ದನು.ಆತ ತುಂಬಾ ಸಲ ದೇವತೆಗಳ ಮೇಲೆ ಧಾಳಿ ಮಾಡಿ ಅವರ ಸೋಲಿಗೂ ಕಾರಣನಾಗಿದ್ದ.ಆತನಿಗೆ ಇದ್ದ ಒಂದು ವರದ ಸಹಾಯದಿಂದ ಆತ ಇಷ್ಟೆಲ್ಲಾ ಅನಾಹುತಕ್ಕೆ ಕಾರಣನಾಗಿದ್ದ.ಆ ವರವೇನೆಂದರೆ ಆಜನ್ಮ ಬ್ರಹ್ಮಚಾರಿಯಾದ ಶಿವನ ಮಗನಿಂದಲೇ ತನ್ನ ಸಾವು ಬರಬೇಕು ಎಂಬುದು.
ಆದರೆ ಆತನ ಉಪಟಳ ಸಹಿಸಲಾರದ ದೇವತೆಗಳು ಮನ್ಮಥನ ಸಹಾಯವನ್ನು ಪಡೆದು ಪಾರ್ವತಿಯ ಮನವೊಲಿಸಿದರು.ಪಾರ್ವತಿಯು ಶಿವನ ತಪೋಭಂಗ ಉಂಟುಮಾಡಲು ತೆರಳಿದಳು.ಮನ್ಮಥನು ತನ್ನ ಹೂಬಾಣಗಳನ್ನು ಶಿವನ ಮೇಲೆ ಪ್ರಯೋಗಿಸಿದನು.ಶಿವನಿಗೆ ತನ್ನ ಧ್ಯಾನದಿಂದ ಎಚ್ಚರವಾಗಿ ಆತನು ಕೋಪದಿಂದ ಮನ್ಮಥನನ್ನು ನೋಡಲು ಶಿವನ ತಪಶ್ಶಕ್ತಿಯಿಂದ ಮನ್ಮಥನು ಸುಟ್ಟು ಬೂದಿಯಾಗುತ್ತಾನೆ.
ಆದರೆ ಪಾರ್ವತಿಯು ಶಿವನ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾಳೆ.ಅವರಿಂದಾಗಿ ಕಾರ್ತಿಕೇಯ ನ ಜನನವಾಗುತ್ತದೆ.ಕಾರ್ತಿಕೇಯನು ತಾರಕಾಸುರನ ಜೊತೆ ಯುದ್ಧ ಮಾಡಿ ಅವನ ಸಂಹಾರ ಮಾಡುತ್ತಾನೆ.
ಹೀಗೆ ಶಿವನ ಮಗನಾದ ಕಾರ್ತಿಕೇಯನಿಂದ ತಾರಕಾಸುರನ ಸಂಹಾರವಾಗುತ್ತದೆ.
No comments:
Post a Comment