ಕೃಷ್ಣನು ಕೇಶವನಾದ ಬಗೆ
ಹಿಂದೆ ಕೃಷ್ಣನು ಗೋಕುಲದಲ್ಲಿ ಬೆಳೆಯುತ್ತಿದ್ದಾಗ ಆತನೇ ತನ್ನ ಮೃತ್ಯು ಎಂದು ಅರಿತ ಕಂಸ ಕೃಷ್ಣನನ್ನು ಕೊಲ್ಲಲು ತನ್ನ ಬಂಟರಾದ ರಾಕ್ಷಸರನ್ನು ಕಳುಹಿಸುತ್ತಾನೆ.ಹಾಗೆಯೇ ಕಂಸ ಕೇಶಿ ಎಂಬ ರಾಕ್ಷಸನನ್ನು ಕೃಷ್ಣ ಸಂಹಾರಕ್ಕಾಗಿ ಕಳುಹಿಸುತ್ತಾನೆ.ಕೇಶಿ ರಾಕ್ಷಸನಿಗೆ ಉದ್ದವಾದ ಕೂದಲು ಇರುವುದರಿಂದ ಆತನಿಗೆ ಆ ಹೆಸರು ಬಂದಿದೆ.
ಕೇಶಿ ರಾಕ್ಷಸನು ಕುದುರೆಯ ರೂಪದಲ್ಲಿ ಗೋಕುಲಕ್ಕೆ ಬರುತ್ತಾನೆ.ಕೃಷ್ಣನು ಇನ್ನು ಬಾಲಕ.ಆತನಿಗೆ ಇದು ಕುದುರೆಯ ವೇಷದಲ್ಲಿ ಬಂದ ರಾಕ್ಷಸ ಎಂಬುದರ ಅರಿವಾಗುತ್ತದೆ.ಕೃಷ್ಣನು ಆ ಕುದುರೆಯನ್ನು ಕೊಲ್ಲುತ್ತಾನೆ.ಅಂತೆಯೇ ಕೇಶಿ ರಾಕ್ಷಸನನ್ನು ಸಹ.ಹೀಗಾಗಿ ಕೃಷ್ಣನಿಗೆ "ಕೇಶವ" ಎಂಬ ಹೆಸರು ಬಂತು.
No comments:
Post a Comment