ಸೇಬಿನ ಹಲ್ವಾ ಮಾಡುವುದು ಹೇಗೆ?
ಇವತ್ತು ಸೇಬು ಹಣ್ಣಿನಿಂದ ಹಲ್ವಾ ಮಾಡುವುದನ್ನು ತಿಳಿದುಕೊಳ್ಳೋಣ
ಬೇಕಾಗುವ ಸಾಮಗ್ರಿಗಳು:
ತುಂಡು ಮಾಡಿದ ಸೇಬು ಹಣ್ಣುಗಳು-೪
ಪಾಕ ಮಾಡಲು ಬೆಲ್ಲ
ಹುರಿದ ಚಿರೋಟಿ ರವೆ-೧ ಕಪ್
ಕಾಯಿಸಿ ತಣಿಸಿದ ಹಾಲು-೧ ಕಪ್
ಸ್ವಲ್ಪ ಏಲಕ್ಕಿ ಪುಡಿ
ಸ್ವಲ್ಪ ತುಪ್ಪ
ಸ್ವಲ್ಪ ಗೋಡಂಬಿ
ಮಾಡುವ ವಿಧಾನ
ಮೊದಲು ಕುದಿಯುತ್ತಿರುವ ನೀರಿಗೆ ತುಂಡು ಮಾಡಿದ ಸೇಬು ಹಣ್ಣುಗಳನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಲು ಬಿಡಿ.ನಂತರ ಹೀಗೆ ಬೆಂದ ಸೇಬು ಹಣ್ಣುಗಳನ್ನು ಒಂದು ಪಾತ್ರೆಗೆ ಹಾಕಿ ನೀರಿನ ಅಂಶ ಎಲ್ಲಾ ತೆಗೆದು ಸರಿಯಾಗಿ ಮ್ಯಾಶ್ ಮಾಡಿ.ನಂತರ ಬೆಲ್ಲದ ಪಾಕ(ಬೆಲ್ಲದ ಪರಿಮಳ ಬರುವವರೆಗೆ)ತಯಾರಿಸಿ.
ಈಗ ಮ್ಯಾಶ್ ಮಾಡಿದ ಸೇಬು ಹಣ್ಣುಗಳನ್ನು ಈ ಬೆಲ್ಲದ ಪಾಕಕ್ಕೆ ಸೇರಿಸಿ.ನಂತರ ಕೈ ಆಡಿಸುತ್ತಲೇ ಇದಕ್ಕೆ ಮೊದಲೇ ಹುರಿದ ರವೆ.ಹಾಲು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.ಈಗ ಅದನ್ನು ಹಲ್ವಾ ಪಾತ್ರೆ ಬಿಟ್ಟು ಬರುವವರೆಗೆ ಕುದಿಸಿ.ಹಲ್ವಾ ಪಾತ್ರೆಯ ಅಂಚು ಬಿಡುತ್ತಿರುವಾಗ ಅದಕ್ಕೆ ತುಪ್ಪ ಮತ್ತು ಹಸಿ ಗೋಡಂಬಿಯನ್ನು ಸೇರಿಸಿ.
ನಂತರ ಒಂದು ಪ್ಲೇಟ್ ಗೆ ತುಪ್ಪ ಸವರಿ ಅದರಲ್ಲಿ ತಯಾರಾದ ಸೇಬಿನ ಹಲ್ವಾವನ್ನು ಹಾಕಿ.ತಣ್ಣಗಾದ ಮೇಲೆ ಅದನ್ನು ಇಷ್ಟ ಬಂದ ಆಕಾರದಲ್ಲಿ ಕತ್ತರಿಸಿ.ಈಗ ಸೇಬು ಹಣ್ಣಿನ ಹಲ್ವಾ ತಿನ್ನಲು ರೆಡಿ.
No comments:
Post a Comment