Wednesday, March 16, 2011

ಚಟ್ನಿ ಮಾಡುವುದು ಹೇಗೆ?

                                           ಚಟ್ನಿ ಮಾಡುವುದು ಹೇಗೆ?
ಟಿ.ವಿ.ಯಲ್ಲಿ ನೋಡಿದ ಚಟ್ನಿ ತಯಾರಿಸುವಿಕೆಯ ಬಗ್ಗೆ ಈಗ ತಿಳಿದುಕೊಳ್ಳೋಣ



ಬೇಕಾಗುವ ಸಾಮಗ್ರಿಗಳು
 
ಹಸಿ ಮೆಣಸಿನಕಾಯಿ-೫
ಹಸಿ ತೆಂಗಿನಕಾಯಿ ತುರಿ-೧ ಕಪ್
ಹುರಿಗಡಲೆ-ಸ್ವಲ್ಪ
ಹುಣಸೆ ಹಣ್ಣಿನ ರಸ-ಸ್ವಲ್ಪ
ಕೊತ್ತಂಬರಿ ಸೊಪ್ಪು-ಸ್ವಲ್ಪ
ಶುಂಟಿ ಪೇಸ್ಟ್ -ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ಕರಿಬೇವಿನ ಸೊಪ್ಪು-ಸ್ವಲ್ಪ


ಮಾಡುವ ವಿಧಾನ

ಮೊದಲು ಗ್ಯಾಸ್ ಹೊತ್ತಿಸಿ ಅದರ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ .ಅದರಲ್ಲಿ ಈಗ ಹಸಿ ಮೆಣಸಿನ ಕಾಯಿ ಯನ್ನು ಫ್ರೈ ಮಾಡಿ.ನಂತರ ಬಾಣಲೆ ಖಾಲಿ ಮಾಡಿ ಈಗ ಅದಕ್ಕೆ ತೆಂಗಿನಕಾಯಿ ತುರಿ ಹಾಕಿ ಬಿಸಿ ಮಾಡಿ.ಈಗ ಫ್ರೈ ಮಾಡಿದ ಹಸಿ ಮೆಣಸಿನ ಕಾಯಿ ಮತ್ತು ಬಿಸಿ ಮಾಡಿದ ತೆಂಗಿನ ಕಾಯಿ ತುರಿ ಇವೆರಡನ್ನೂ ಒಂದು ಮಿಕ್ಸಿ ಜಾರ್ ಗೆ ಹಾಕಿ.ನಂತರ ಇದಕ್ಕೆ ಹುರಿಗಡಲೆ,ಹುಣಸೆ ಹಣ್ಣಿನ ರಸ,ಶುಂಟಿ ಪೇಸ್ಟ್,ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕತ್ತರಿಸಿದ ಕರಿಬೇವಿನ ಸೊಪ್ಪು ಹಾಗು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿ.
ಹೀಗೆ ತಯಾರಾದ ಚಟ್ನಿಗೆ ಸಾಸಿವೆಯ ಒಗ್ಗರಣೆ ನೀಡಿ.ಈಗ ದೋಸೆಯ ಜೊತೆ ತಿನ್ನಲು ಚಟ್ನಿ ರೆಡಿ.

No comments:

Post a Comment