ನಿರಾಶವಾದ ಒಳ್ಳೆಯದಲ್ಲ
ತಿಲಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರು.ಬ್ರಿಟಿಶ್ ಸರ್ಕಾರ ಅವರ ಮೇಲೆ ಒಂದು ಕಣ್ಣು ಇಟ್ಟಿತ್ತು.ಹೀಗೆ ಒಮ್ಮೆ ಅವರು ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮನೆಗೆ ಬರುತ್ತಿದ್ದಾಗ ಅವರನ್ನು ಬಂಧಿಸಿ,ದೂರದ ಬರ್ಮಾ ದೇಶದ ಸೆರೆಮನೆಗೆ ಅಟ್ಟಿತು.
ಈಗ ತಿಲಕರು ಅಪರಿಚಿತ ದೇಶದಲ್ಲಿ ಒಬ್ಬಂಟಿಗರು.ಅದೂ ಸೆರೆಮನೆಯಲ್ಲಿ ಅವರನ್ನು ಪ್ರತ್ಯೇಕವಾಗಿ ಇಡಲಾಗಿತ್ತು.ತಿಲಕರಿಗೆ ಒಂಟಿತನ ಕಾಡಲಾರಂಭಿಸಿತು.ಅವರಿಗೆ ಅಸಹಾಯಕತೆ ಎಷ್ಟಿತ್ತು ಎಂದರೆ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅನಿಸುತಿತ್ತು.
ಹೀಗೆ ಇದ್ದಾಗ ಒಮ್ಮೆ ಅವರು ತಮ್ಮ ಕೋಣೆಯಲ್ಲಿ ಇರುವೆ ಸಾಲು ಇದ್ದದ್ದನ್ನು ಗಮನಿಸಿದರು.ಒಂದೇ ಸರಳ ರೇಖೆಯಲ್ಲಿ ಹೋಗುತ್ತಿದ್ದ ಇರುವೆಗಳ ದಾರಿಗೆ ಅಡ್ಡಲಾಗಿ ಅವರು ಒಂದು ಪೆನ್ಸಿಲ್ ಇಟ್ಟರು.ಇರುವೆಗಳಿಗೆ ಏನು ಮಾಡಲು ತೋಚಲಿಲ್ಲ.ಆದರೂ ಕೆಲವು ಇರುವೆಗಳು ಪೆನ್ಸಿಲ್ ಕೆಳಭಾಗದಿಂದ ಮತ್ತು ಕೆಲವು ಪೆನ್ಸಿಲ್ ಹತ್ತಿ ಆ ತಡೆಯನ್ನು ನಿವಾರಿಸಿಕೊಂಡು ಪಯಣಿಸಿದವು
ಇದನ್ನು ಕಂಡ ತಿಲಕರಿಗೆ ಜ್ಞಾನೋದಯವಾಯಿತು.ಅಷ್ಟು ಸಣ್ಣ ಇರುವೆಗಳೇ ತಮ್ಮ ಮುಂದೆ ಇದ್ದ ತಡೆಯನ್ನು ನಿವಾರಿಸಿಕೊಂಡು ಮುಂದಕ್ಕೆ ಪ್ರಯಾಣ ಮುಂದುವರೆಸಿದವು.ತಾವು ಈ ಸಣ್ಣ ಕಷ್ಟಕ್ಕೆ ಅಂಜಿ ಆತ್ಮಹತ್ಯೆಯ ಯೋಚನೆ ಮಾಡುತ್ತಿರುವುದು ತಪ್ಪು ಎಂದೆನಿಸಿತು.
ನೀತಿ: ನಿರಾಶವಾದ ಒಳ್ಳೆಯದಲ್ಲ.
No comments:
Post a Comment