Thursday, March 3, 2011

ಉಡುಪಿ ಅನಂತೇಶ್ವರದ ಕಥೆ

                           ಉಡುಪಿ ಅನಂತೇಶ್ವರದ ಕಥೆ
ಹಿಂದೆ ತುಳುನಾಡನ್ನು ರಾಮಭೋಜ ಎಂಬ ರಾಜನು ಆಳುತ್ತಿದ್ದ.ಒಮ್ಮೆ ಆತನು ಯಾಗ ಮಾಡಲು ಸಂಕಲ್ಪಿಸಿ ಅದಕ್ಕಾಗಿ ಭೂಮಿಯನ್ನು ಅಗೆಯಲು ಆರಂಭಿಸಿದ.ಆಗ ಒಂದು ಘಟಸರ್ಪ ಪಿಕ್ಕಾಸಿಗೆ ಸಿಲುಕಿ ಸತ್ತು ಹೋಯಿತು.ಇದರಿಂದ ರಾಜನಿಗೆ ಸರ್ಪಡೋಷದ ಭೀತಿ ಉಂಟಾಯಿತು.ಆಗ ಕರಾವಳಿಯನ್ನು ಸೃಷ್ಟಿ ಮಾಡಿದ ಪರಶುರಾಮ ಅಲ್ಲೇ ಇದ್ದರು.ಅವರು ರಾಜನಿಗೆ ಅದೊಂದು ಅಸುರ,ಹಾಗಾಗಿ ಸರ್ಪದೋಷದ  ಭಯವಿಲ್ಲ ಎಂದರು.
ಆದರೆ ರಾಜನಿಗೆ ಸಮಾಧಾನವಾಗಲಿಲ್ಲ.ಕೊನೆಗೆ ಆತ ಉಡುಪಿಯ ೪ ದಿಕ್ಕಿನಲ್ಲಿ ೪ ನಾಗ ದೇವಸ್ಥಾನವನ್ನು ಕಟ್ಟಿಸಿದ.ಇಷ್ಟಕ್ಕೂ ಸುಮ್ಮನಾಗದೆ ಉಡುಪಿಯಲ್ಲಿ ಶಿವನ ದೇವಸ್ಥಾನವನ್ನೂ ಕಟ್ಟಿಸಿದ.ಆಗ ಪರಶುರಾಮರು ತಮ್ಮ ಸಾನಿಧ್ಯ ಅಲ್ಲಿ ಇರುವುದಾಗಿ ತಿಳಿಸಿದರು.ಹೀಗಾಗಿ ಆ ದೇವರು ಅನಂತೇಶ್ವರ  ಎಂದು ಪ್ರಸಿದ್ಧವಾಯಿತು.
ಉಡುಪ ಎಂದರೆ ಚಂದ್ರ.ದಕ್ಷ ಪ್ರಜಾಪತಿಯ ಯಾಗಕ್ಕೆ ಅಡ್ಡಿ ಉಂಟುಮಾಡಿದ ತಪ್ಪಿಗೆ ಚಂದ್ರನು ಉಡುಪಿಗೆ ಬಂದು ಕೆರೆಯಲ್ಲಿ ಮುಳುಗಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ.ಅದುವೇ ಈಗ ಚಂದ್ರಮೌಳೀಶ್ವರ ದೇವಸ್ಥಾನ ಇರುವ ಜಾಗ.

1 comment:

  1. I am from Udupi lived there 1945 to 1961 and again 63 to 66 - but did not know this story!

    ReplyDelete