ಸಿಟ್ಟನ್ನು ಹೇಗೆ ನಿಯಂತ್ರಿಸುವುದು?
ಹಿಂದೆ ಒಬ್ಬ ಶ್ರೀಮಂತನಿದ್ದ.ಆತನಿಗೆ ಒಬ್ಬಳೇ ಮಗಳು.ತುಂಬಾ ಸುಂದರಿ.ಆದರೆ ಆಕೆಯ ಮೂಗಿನ ತುದಿಯಲ್ಲೇ ಕೋಪ ಮತ್ತು ಸಿಟ್ಟು ಇರುತಿತ್ತು.ಇದು ಶ್ರೀಮಂತನಿಗೆ ಚಿಂತೆಗೆ ಕಾರಣವಾಗಿತ್ತು,ಮಗಳು ಎಲ್ಲರ ಬಳಿಯೂ ಜಗಳ ಕಾಯುತ್ತಿದ್ದಳು.ಎಲ್ಲರೂ ಆಕೆಗೆ ಹೆದರುತ್ತಿದ್ದರು.
ಹೀಗಿರುವಾಗ ಆ ಊರಿಗೆ ಓರ್ವ ಸನ್ಯಾಸಿ ಬಂದ. ತನ್ನ ಮಗಳ ಗುಣವನ್ನು ಸನ್ಯಾಸಿಗೆ ತಿಳಿಸಿ ಪರಿಹಾರ ಒದಗಿಸುವಂತೆ ಶ್ರೀಮಂತ ಮೊರೆಯಿಟ್ಟ.ಆಗ ಸನ್ಯಾಸಿ ನಾಳೆ ನಿನ್ನ ಮಗಳನ್ನು ಒಬ್ಬಳೇ ನನ್ನ ಬಳಿ ಕಳುಹಿಸು ಎಂದು ತಿಳಿಸಿದ.ಶ್ರೀಮಂತ ಆಗಲೆಂದ.
ಮರುದಿನ ಮಗಳು ಒಬ್ಬಳೇ ಸನ್ಯಾಸಿ ಬಳಿ ಹೋದಳು.ಆಮೇಲಿಂದ ಆಕೆಯ ವರ್ತನೆಯೇ ಬದಲಾಯಿತು.ಈಗ ಆಕೆ ಮಿತಭಾಷಿ ಆಗಿದ್ದಾಳೆ.ಸಿಟ್ಟನಂತೂ ಮಾಡುವುದೇ ಇಲ್ಲ.ಇದು ಶ್ರೀಮಂತನಿಗೆ ಆಶ್ಚರ್ಯಕ್ಕೆ ಕಾರಣವಾಯಿತು.ಆತ ಸನ್ಯಾಸಿ ಬಳಿ ಹೋಗಿ ಇದನ್ನು ಹೇಳಿ ಇದರ ರಹಸ್ಯವೇನೆಂದು ಕೇಳಿದ.
ಆಗ ಸನ್ಯಾಸಿ "ನಾನು ನಿನ್ನ ಮಗಳಿಗೆ ಒಂದು ನೀರನ್ನು ನೀಡಿದ್ದೆ.ಸಿಟ್ಟು ಬಂದಾಗ ಆ ನೀರನ್ನು ಬಾಯಿಯಲ್ಲಿ ಇಟ್ಟುಕೊಂಡು ೧೦ ನಿಮಿಷಗಳ ಕಾಲ ಮಾತನಾಡದೆ ಇರಬೇಕೆಂದು ಹೇಳಿದ್ದೆ.ಮಾತೇ ಆಡದೆ ಇದ್ದರೆ ಜಗಳವೆಲ್ಲಿಯದು?ಸಿಟ್ಟೂ ಶಾಂತವಾಗುತ್ತದೆ" ಎಂದನು.
ನೀತಿ:ಮಾತೇ ಮುತ್ತು, ಮಾತೇ ಮೃತ್ಯು.
Thisನೀತಿ:ಮಾತೇ ಮುತ್ತು, ಮಾತೇ ಮೃತ್ಯು. is excellent - I will try to practice this (atleast some times)!!
ReplyDelete