ಆನಂದದ ಅನುಭೂತಿ
ಒಮ್ಮೆ ತಾಯಿಯು ಮಗುವಿಗೆ ಊಟ ಮಾಡಿಸುತ್ತಿರುತ್ತಾಳೆ.ಅಲ್ಲೇ ಪಕ್ಕದ ಮರದಲ್ಲೇ ಒಂದು ಗುಬ್ಬಚ್ಚಿ ಸಂಸಾರವೂ ಇರುತ್ತದೆ.ಆ ಹಕ್ಕಿಗಳಿಗೆ ಆವತ್ತು ತಮ್ಮ ಮರಿಗಳಿಗೆ ನೀಡಲು ಏನೂ ಸಿಕ್ಕಿರುವುದಿಲ್ಲ.ಅವುಗಳು ಅತ್ತಿಂದ ಇತ್ತ ಹಾರುತ್ತಿರುತ್ತವೆ.ಇದನ್ನು ಗಮನಿಸಿದ ತಾಯಿ ತನ್ನ ಮಗುವಿನ ಊಟದಲ್ಲಿಯೇ ಸ್ವಲ್ಪ ಭಾಗವನ್ನು ಕೆಳಗೆ ಚೆಲ್ಲುತ್ತಾಳೆ.ಇದನ್ನು ಹಕ್ಕಿಗಳು ಗಮನಿಸುತ್ತವೆ.ಆದರೂ ಅವುಗಳಿಗೆ ಹತ್ತಿರ ಬರಲು ಹೆದರಿಕೆ.
ಆದರೂ ತಾಯಿ ಹಕ್ಕಿ ತನ್ನ ಮರಿಗಳ ಗೋಳಾಟ ನೋಡಲಾಗದೆ ಚೆಲ್ಲಲಾದ ಅನ್ನದ ಬಳಿ ಬರುತ್ತದೆ.ಏನೂ ಅಪಾಯವಿಲ್ಲದನ್ನು ಗಮನಿಸಿ ಅಲ್ಲಿದ್ದ ಅನ್ನವನ್ನು ಹೆಕ್ಕಿಕೊಂಡು ಹೋಗಿ ತನ್ನ ಮರಿಗಳಿಗೆ ಉಣಿಸುತ್ತದೆ.ಈಗ ಮಗುವಿನ ತಾಯಿಗೂ ಸಂತಸ.ತನ್ನ ಮರಿಗಳ ಹಸಿವು ನೀಗಿತೆಂದು ತಾಯಿ ಗುಬ್ಬಿಗೂ ಆನಂದ.ಇದುವೇ ಆನಂದದ ಅನುಭೂತಿ
No comments:
Post a Comment