ಶಿವರಾತ್ರಿಯ ಉಪವಾಸದ ಮಹತ್ವ
ಹಿಂದೆ ಗುಹಾಂಡ ಎಂಬ ಬೇಟೆಗಾರನಿದ್ದ.ಕಾಡಿಗೆ ಹೋಗಿ ಪ್ರಾಣಿಗಳನ್ನು ಬೇಟೆಯಾಡುವುದು ಆತನ ಮುಖ್ಯ ಕೆಲಸ.ಹೀಗೆ ಒಮ್ಮೆ ಆತ ಬೇಟೆಗೆ ಹೋದ ದಿನ ಶಿವರಾತ್ರಿ ಯಾಗಿತ್ತು.ಆದರೆ ಬೇಡನಿಗೆ ಇದರ ಪರಿವೆ ಇರಲಿಲ್ಲ.ಆದರೆ ಆವತ್ತು ಆತನಿಗೆ ಬೇಟೆಯೇ ಸಿಗಲಿಲ್ಲ.ಹೀಗಾಗಿ ಆತ ಕತ್ತಲಾಗುವವರೆಗೂ ಕಾಡಿನಲ್ಲೇ ಇರಬೇಕಾಯಿತು.
ತುಂಬಾ ಕತ್ತಲಾದ ಕಾರಣ ಆತ ಕಾಡಿನಲ್ಲೇ ರಾತ್ರಿಯನ್ನು ಕಳೆಯಲು ನಿರ್ಧರಿಸಿದ .ಕಾಡುಪ್ರಾಣಿಗಳ ಉಪಟಳಕ್ಕೆ ಹೆದರಿ ಆತ ಒಂದು ಮರವನ್ನು ಹತ್ತಿ ಕುಳಿತ.ಆ ಮರ ಬಿಲ್ವ ಪತ್ರೆಯ ಮರವಾಗಿತ್ತು.ಆತ ಮರದಲ್ಲೇ ಕುಳಿತು ರಾತ್ರಿ ಕಳೆಯಲು ನಿರ್ಧರಿಸಿದ.ಆದರೆ ಆ ಮರದ ಬುಡದಲ್ಲಿ ಶಿವಲಿಂಗ ಇದ್ದದ್ದು ಅವನಿಗೆ ತಿಳಿಯಲಿಲ್ಲ.
ಇಡೀ ರಾತ್ರಿ ಆತ ಕಾಡು ಪ್ರಾಣಿಗಳಿಗೆ ಹೆದರಿ ಜಾಗರಣೆಯಲ್ಲೇ ಕಳೆದ.ಬೇಸರವಾಗಿ ಆತ ತಾನು ಕುಳಿತ್ತಿದ್ದ ಬಿಲ್ವ ಮರದ ಎಲೆಗಳನ್ನೇ ಕಿತ್ತು ಕೆಳಗೆ ಹಾಕುತ್ತಿದ್ದ.ಅವು ಅಲ್ಲಿದ್ದ ಶಿವಲಿಂಗದ ಮೇಲೆ ಬೀಳುತ್ತಿದ್ದವು.ಆತ ಇಡಿ ರಾತ್ರಿ ತಿನ್ನಲು ಏನೂ ಇಲ್ಲದೆ ಉಪವಾಸವಿದ್ದ.ಹೀಗೆ ಆತ ರಾತ್ರಿ ಕಳೆದ.ಶಿವರಾತ್ರಿಯಂದು ಆತ ಮಾಡಿದ ಕಾರ್ಯದಿಂದ ಪ್ರಸನ್ನನಾದ ಪರಶಿವನು ಪ್ರತ್ಯಕ್ಷನಾಗಿ ಆತನ ಎಲ್ಲ ಅಪರಾಧವನ್ನು ಮನ್ನಿಸಿ ಆತನಿಗೆ ಮುಕ್ತಿಯನ್ನು ಕರುಣಿಸುತ್ತಾನೆ.ಹೀಗೆ ಶಿವರಾತ್ರಿಯಂದು ಉಪವಾಸ ಮಾಡುವ ಮತ್ತು ಶಿವನಿಗೆ ಪ್ರೀತಿಯನ್ನು ಉಂಟು ಮಾಡಲು ಶಿವನ ನಾಮಸ್ಮರಣೆ ಮಾಡುವ ಕ್ರಮ ಬೆಳೆದು ಬಂತು.
No comments:
Post a Comment