ಬೆಂಡೆಕಾಯಿಯ ಗಟ್ಟಿ ಬಜೆ ಮಾಡುವುದು
ಟಿ.ವಿ.ಯಲ್ಲಿ ನೋಡಿದ ಬೆಂಡೆಕಾಯಿಯ ಗಟ್ಟಿ ಬಜೆ ಮಾಡುವುದನ್ನು ತಿಳಿದುಕೊಳ್ಳೋಣ.
ಬೇಕಾಗುವ ಸಾಮಗ್ರಿಗಳು
ಕಡಲೆ ಹಿಟ್ಟು-೧ ಕಪ್
ಉಪ್ಪು-ರುಚಿಗೆ ತಕ್ಕಷ್ಟು
ಸ್ವಲ್ಪ ಇಂಗು
ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ-೨ ರಿಂದ ೩
ಸಣ್ಣದಾಗಿ ಹೆಚ್ಚಿದ ಬೆಂಡೆಕಾಯಿ-೩ ರಿಂದ ೪
ಕರಿಯಲು ಎಣ್ಣೆ
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು,ಉಪ್ಪು,ಇಂಗು,ಹಸಿ ಮೆಣಸಿನಕಾಯಿ,ಬೆಂಡೆಕಾಯಿ ಮತ್ತು ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಬೇಕು.ನಂತರ ಇದರಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಬೇಕು.ಈ ಹೊತ್ತಿನಲ್ಲಿ ಎಣ್ಣೆ ಕಾಯಲು ಇಡಬೇಕು.ಕಾದ ಎಣ್ಣೆಗೆ ಹೀಗೆ ಮಾಡಿಟ್ಟ ಉಂಡೆಗಳನ್ನು ಹಾಕಿ (ಬಜೆ) ಕರೆಯಬೇಕು.ಈಗ ಬೆಂಡೆಕಾಯಿಯ ಬಜೆ ತಿನ್ನಲು ರೆಡಿಯಾಗಿದೆ.
No comments:
Post a Comment