Tuesday, March 22, 2011

ಗೆಲುವಿನ ತಂತ್ರ

                                      ಗೆಲುವಿನ ತಂತ್ರ
ಎರಡನೇ ಮಹಾಯುದ್ಧದ ಕಾಲ.ಜಪಾನ್ ಮತ್ತು ಜರ್ಮನಿ ಗಳು ಮಿಕ್ಕೆಲ್ಲಾ ರಾಷ್ಟ್ರಗಳಿಗೆ ಸಡ್ಡು ಹೊಡೆದು ನಿಂತ ಕಾಲವದು.ಹೀಗಿರುವಾಗ ಬ್ರಿಟನ್ ಮತ್ತು ರಷ್ಯಗಳು ಇವುಗಳ ವಿರುದ್ಧ ಹೋರಾಡುತ್ತಿದ್ದವು.ಹೀಗೆ ಯುದ್ಧ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಮಿತ್ರ ರಾಷ್ಟ್ರಗಳ ಸೈನ್ಯವು ಹಿಂದೆ ಸರಿಯಲು ಶುರು ಮಾಡಿತು.ಆಗ ಬ್ರಿಟನ್ನಿನ ಪ್ರಧಾನಿಯಾಗಿದ್ದ ಚರ್ಚಿಲ್ ಅವರು ಇದೂ ಯುದ್ಧ ತಂತ್ರದ ಭಾಗವೇ ಎಂದಿದ್ದರು.
ಆದರೆ ಅವರ ಮಾತನ್ನು ಉಡಾಫೆ ಮಾಡಿದವರೇ ಹೆಚ್ಚು.ಮಿತ್ರ ರಾಷ್ಟ್ರಗಳು ತಮ್ಮ ವೈರಿಗೆ ಹೆದರಿ ಹಿಂದೆ ಸರಿಯುತ್ತಿವೆ ಎಂದೇ ಎಲ್ಲರೂ ಭಾವಿಸಿದ್ದರು.ಜಪಾನ್ ಮತ್ತು ಜರ್ಮನಿಯ ಸೈನಿಕರು ಹಾಗೆ ತಿಳಿದುಕೊಂಡು ಆರಾಮದಲ್ಲಿ ಇದ್ದರು.ಆದರೆ ಸ್ವಲ್ಪ ಸಮಯದ ನಂತರ ಮಿತ್ರ ರಾಷ್ಟ್ರಗಳ ಸೈನಿಕರು ಹಟಾತ್ತನೆ ಜರ್ಮನಿ ಮತ್ತು ಜಪಾನ್ ಸೈನ್ಯದ ಮೇಲೆ ಆಕ್ರಮಣ ಮಾಡಿದರು.ಅವರ ಹುಟ್ಟು ಅಡಗಿಸಿದರು.
ಮುಂದಿದ್ದು ಇತಿಹಾಸ.ಹಿಟ್ಲರನು ಆತ್ಮಹತ್ಯೆ ಮಾಡಿಕೊಂಡದ್ದು ಮತ್ತು ಜಪಾನ್ ಮೇಲೆ ಅಮೇರಿಕಾ ಪರಮಾಣು ಬಾಂಬ್ ಹಾಕಿದ್ದು ಎಲ್ಲರಿಗೂ ತಿಳಿದೇ ಇದೆ.ಇದರಿಂದಾಗಿ ಹಿನ್ನಡೆ ಹೊಂದಬೇಕಾಗಿ ಬಂದರೂ ಪ್ರಯತ್ನ ಕೈ ಬಿಡಬಾರದು ಎಂದು ತಿಳಿಯುತ್ತದೆ.
ನೀತಿ:ಸೋಲೇ ಗೆಲುವಿನ ಸೋಪಾನ


No comments:

Post a Comment