ತಟ್ಟಪ್ಪ ಮಾಡುವುದು ಹೇಗೆ?
ಟಿ.ವಿ.ಯಲ್ಲಿ ನೋಡಿದ ಇದರ ಬಗ್ಗೆ ಇವತ್ತು ಬರೆಯುತ್ತಿದ್ದೇನೆ.ನನಗೆ ತುಂಬಾ ಸುಲಭ ಎನಿಸಿದ ಕಾರಣ ಅದನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಬೇಕಾಗುವ ಸಾಮಗ್ರಿಗಳು
ಕರಿಯಲು ಎಣ್ಣೆ
ತೆಂಗಿನಕಾಯಿ ತುರಿ-ಸ್ವಲ್ಪ
ನೆನಸಿದ ಅಕ್ಕಿ-೩-೪ ಗಂಟೆಗಳಷ್ಟು -ಸ್ವಲ್ಪ
ಬೆಲ್ಲ-ಸ್ವಲ್ಪ
ಚುರುಮುರಿ ಅಥವಾ ಮಂಡಕ್ಕಿ-ಸ್ವಲ್ಪ
ಉಪ್ಪುರುಚಿಗೆ ತಕ್ಕಷ್ಟು
ನೀರು
ಅಕ್ಕಿ ಹಿಟ್ಟು-ಸ್ವಲ್ಪ
ಮಾಡುವ ವಿಧಾನ
ಮೊದಲು ಎಣ್ಣೆಯನ್ನು ಕಾಯಲು ಇಡಿ.ಈ ಸಮಯದಲ್ಲಿ ಒಂದು ಮಿಕ್ಸಿ ಜಾರ್ ಗೆ ನೆನಸಿದ ಅಕ್ಕಿ,ತೆಂಗಿನ ಕಾಯಿ ತುರಿ,ಬೆಲ್ಲ, ಮಂಡಕ್ಕಿ,ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಕಾದಲ್ಲಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಬೇಕು.ನಂತರ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಗಟ್ಟಿಯಾಗಿ ಉಂಡೆಗಳನ್ನಾಗಿ ಮಾಡಬೇಕು.ನಂತರ ಈ ಉಂಡೆಗಳನ್ನು ವಡೆಯಂತೆ ಕೈಯಲ್ಲಿ ತಟ್ಟಿ ನಂತರ ಅದನ್ನು ಕಾದ ಎಣ್ಣೆಯಲ್ಲಿ ಕರಿಯಬೇಕು.ಈಗ ತಟ್ಟಪ್ಪ ತಿನ್ನಲು ರೆಡಿ.
No comments:
Post a Comment