Friday, March 4, 2011

ಕೋಕೋ ಬರ್ಫಿ ಮಾಡುವುದು ಹೇಗೆ?

                                 ಕೋಕೋ ಬರ್ಫಿ ಮಾಡುವುದು ಹೇಗೆ?
ಟಿ.ವಿ.ಯಲ್ಲಿ ಪ್ರಸಾರವಾದ ಕೋಕೋ ಬರ್ಫಿ  ಮಾಡುವ ರೀತಿಯನ್ನು ತಿಳಿದುಕೊಳ್ಳೋಣ

ಬೇಕಾಗುವ ಸಾಮಗ್ರಿಗಳು
ಮಿಲ್ಕ್ ಪೌಡರ್ =೧ ಕಪ್
ಕೋಕೋ ಪೌಡರ್-೧ ಕಪ್
೧ ೧/೨ ಕಪ್ ಸಕ್ಕರೆ
ಸ್ವಲ್ಪ ಬೆಣ್ಣೆ
ಏಲಕ್ಕಿ ಪುಡಿ
ಸ್ವಲ್ಪ ಬಾದಾಮಿ ಚೂರುಗಳು ಮತ್ತು ಪಿಸ್ತಾ ಚೂರುಗಳು


ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಮಿಲ್ಕ್ ಪೌಡರ್ ಮತ್ತು ಕೋಕೋ ಪೌಡರ್ ಹಾಕಿ ಚೆನ್ನಾಗಿ ಕಲಸಿ.ನಂತರ ಒಂದು ಪಾತ್ರೆಗೆ ಸಕ್ಕರೆ ಮುಳುಗುವಷ್ಟು ಮಾತ್ರ ನೀರು ಹಾಕಿ ಒಂದೆಳೆ ಪಾಕ ತಯಾರಿಸಿಕೊಳ್ಳಿ.ನಂತರ ಇದಕ್ಕೆ ಕೋಕೋ ಪೌಡರ್ ಮಿಶ್ರಣ ಹಾಕಿ.ಸ್ವಲ್ಪ ಬೆಣ್ಣೆ ಸೇರಿಸಿ.ಇದು ಪಾತ್ರೆಯ ಅಂಚು ಬಿಡುವವರೆಗೆ ಕೈಯಾಡಿಸುತ್ತಾ ಇರಿ.ನಂತರ ಅಂದರೆ ತಳ ಬಿಡುವ ಹಂತಕ್ಕೆ ಬಂದಾಗ ಇದಕ್ಕೆ ಏಲಕ್ಕಿ ಪುಡಿ ಮತ್ತು ಬಾದಾಮಿ ಹಾಗೂ ಪಿಸ್ತಾ ಚೂರುಗಳನ್ನು ಸೇರಿಸಿ.
ನಂತರ ಇದನ್ನು ಒಂದು ತುಪ್ಪ ಸವರಿದ ಪ್ಲೇಟ್ ಗೆ ವರ್ಗಾಯಿಸಿ ಅದು ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.ಈಗ ಕೋಕೋ ಬರ್ಫಿ ತಿನ್ನಲು ರೆಡಿ.

1 comment: