ಬೆಂಕಿ ಮತ್ತು ಹೊಗೆ
ಒಂದೂರು.ಅಲ್ಲಿ ಒಂದು ಕುಟುಂಬ.ಅಲ್ಲಿ ಗಂಡ,ಹೆಂಡತಿ,ಇಬ್ಬರು ಮಕ್ಕಳು ಇದ್ದರು.ಹೆಂಡತಿಗೆ ಗಂಡ ತನ್ನ ಬಗ್ಗೆ ಅಕ್ಕರೆ ತೋರಿಸುತ್ತಿಲ್ಲವೆಂದು ಅಸಮಾಧಾನ.ಹೀಗಿರುವಾಗ ಒಮ್ಮೆ ಗಂಡ ದೂರದೂರಿಗೆ ಹೋಗಲು ನಿಶ್ಚಯಿಸುತ್ತಾನೆ.ತನ್ನ ಹೆಂಡತಿಯನ್ನು ಕರೆದೊಯ್ಯಲು ನಿರ್ಧರಿಸುತ್ತಾನೆ.ಮಕ್ಕಳನ್ನು ಕೆಲಸದವಳ ಬಳಿ ಬಿಡಲು ನಿರ್ಧರಿಸುತ್ತಾರೆ.ಅವರಿಗೆ ಶಾಲೆ ತಪ್ಪುತ್ತದೆ ಎಂಬ ಕಾರಣಕ್ಕೆ.
ಹೀಗೆ ಅವರು ಒಂದು ದಿನ ಸಂಜೆ ಹೊರಡಲು ನಿಶ್ಚಯಿಸುತ್ತಾರೆ.ಹಾಗೆ ಅವರು ಹೊರಟಾಗ ಟ್ರಾಫಿಕ್ ಸಮಸ್ಯೆ ಇಂದಾಗಿ ತುಂಬಾ ತಡ ಆಗುತ್ತದೆ.ಕೊನೆಗೆ ಅವರು ಮನೆಗೆ ಹಿಂತಿರುಗಲು ನಿಶ್ಚಯಿಸುತ್ತಾರೆ.ಹಾಗೆ ಹಿಂತಿರುವಾಗ ತಮ್ಮ ಮನೆ ಬಳಿಯ ಮನೆ ಬೆಂಕಿ ಅವಘಡಕ್ಕೆ ತುತ್ತಾಗಿರುವುದು ಗೊತ್ತಾಗುತ್ತದೆ.ಗಂಡ ಇಳಿದು ಅದೇನೆಂದು ನೋಡಲು ನಿಶ್ಚಯಿಸುತ್ತಾನೆ.ಆದರೆ ಹೆಂಡತಿ ತಡೆಯುತ್ತಾಳೆ.
ಆದರೂ ಗಂಡ ಬೆಂಕಿ ಹೊತ್ತಿಕೊಂಡ ಮನೆಗೆ ಹೊರಡಲು ಸಿದ್ಧವಾಗುತ್ತಾನೆ.ಅಲ್ಲಿ ಓರ್ವ ಮಹಿಳೆಯ ಕೂಗು ಕೇಳುತ್ತದೆ.ಒಳಗೆ ಮಕ್ಕಳಿದ್ದಾರೆ.ಕಾಪಾಡಿ ಎಂದು.ಕೂಡಲೇ ಗಂಡ ಹಿಂದು-ಮುಂದು ನೋಡದೆ ಮನೆಯೊಳಗೆ ಧಾವಿಸುತ್ತಾನೆ.ಅಲ್ಲಿ ಇಬ್ಬರು ಮಕ್ಕಳು ಬೆಂಕಿಯಲ್ಲಿ ಸಿಲುಕಿ ಹಾಕಿಕೊಂಡಿರುತ್ತಾರೆ.ಆದರೆ ಎಲ್ಲ ಕಡೆ ಹೊಗೆ.ಗಂಡನಿಗೆ ದಾರಿಯೂ ಸರಿಯಾಗಿ ಕಾಣಿಸುವುದಿಲ್ಲ.ಆದರೂ ತನ್ನ ಜೀವದ ಹಂಗು ತೊರೆದು ಆತ ಮಕ್ಕಳನ್ನು ಪಾರು ಮಾಡುತ್ತಾನೆ.
ಮಕ್ಕಳನ್ನು ಹೊರಗೆ ಸುರಕ್ಷಿತವಾಗಿ ಕರೆದು ತರುತ್ತಾನೆ.ಬೆಳಕಿನಲ್ಲಿ ನೋಡಿದಾಗ ಅವರು ಆತನ ಮಕ್ಕಳೇ ಆಗಿರುತ್ತಾರೆ.ಇದು ಅವನ ಆಶ್ಚರ್ಯಕ್ಕೆ ಕಾರಣವಾಗುತ್ತದೆ.ಮನೆಗೆ ಬಂದು ವಿಚಾರಿಸಿದಾಗ ಮನೆಯ ಕೆಲಸದವಳು ಬೆಂಕಿ ಹೊತ್ತಿದ್ದ ಮನೆಯಲ್ಲಿ ಮಕ್ಕಳನ್ನು ಆಟವಾಡಲು ಬಿಟ್ಟಿರುವುದು ತಿಳಿಯುತ್ತದೆ.ಒಂದು ವೇಳೆ ಆತ ಮಕ್ಕಳನ್ನು ರಕ್ಷಿಸದೇ ಹೋಗಿದ್ದರೆ ಆತ ತನ್ನ ಮಕ್ಕಳನ್ನೇ ಕಳೆದುಕೊಳ್ಳಬೇಕಾಗುತ್ತಿತ್ತು
Dear PB
ReplyDeleteVery nice, myself and sister read all your below posts - you are right, Lord ensured that husband was given that "prerana" to rush to the aid of the burning house/mates.
In google I know how to select "kannada" but do not know how in posting comments !! "ajnani" naanu
trust you had nice time with your sweet brother/s.i.law
all the best/rgds/slrao/bangalore
PS: we have 3 cats - did you see the photos I sent? I will send again/rgds