ತಾಯಿಯೇ ದೇವರು
ಒಂದು ಊರಿನಲ್ಲಿ ಒಂದು ಸಂಸಾರ.ತಂದೆ ಹತ್ತಿರದ ಶಾಲೆಯಲ್ಲಿ ಮೇಷ್ಟ್ರು.ತಾಯಿ ಗೃಹಿಣಿ.ಒಂದು ಸಣ್ಣ ತೊಟ್ಟಿಲ ಮಗುವೂ ಇರುತ್ತದೆ.ಹೀಗಿರಲು ಒಂದು ದಿನ ತಂದೆ ಶಾಲೆಗೆ ಹೋಗುತ್ತಾನೆ.ತಾಯಿ ಮಗುವನ್ನು ತೊಟ್ಟಿಲಲ್ಲಿ ತೂಗುತ್ತಿರುತ್ತಾಳೆ.ಮಗು ಸ್ವಲ್ಪ ಹೊತ್ತಿನಲ್ಲಿ ನಿದ್ದೆ ಮಾಡುತ್ತದೆ.ಅದನ್ನು ಗಮನಿಸಿದ ತಾಯಿ ಬಾವಿಯಿಂದ ನೀರು ಸೇದಿ ತರಲು ತೆರಳುತ್ತಾಳೆ.ಆಗ ಪಕ್ಕದ ಮನೆಗೆ ಬೆಂಕಿ ಹತ್ತಿಕೊಳ್ಳುತ್ತದೆ.
ಕ್ಷಣಮಾತ್ರದಲ್ಲಿ ಅದು ಮಗುವಿದ್ದ ಮನೆಗೂ ಹಬ್ಬುತ್ತದೆ.ತಾಯಿಗೆ ಇದರ ಅರಿವೇ ಇಲ್ಲ.ಮನೆಯು ಬೆಂಕಿಗೆ ತುತ್ತಾಗುತ್ತಿರುವುದನ್ನು ಗಮನಿಸಿದ ನೆರೆಹೊರೆಯ ಜನರು ಅಲ್ಲಿ ಸೇರುತ್ತಾರೆ.ಆದರೆ ಎಲ್ಲರಿಗೂ ಮನೆಯ ಒಳ ಹೋಗಲು ಅಂಜಿಕೆ.
ತನ್ನ ಮನೆಯ ಎದುರು ಜನರು ಸೇರಿರುವುದನ್ನು ಗಮನಿಸಿದ ತಾಯಿ ಓಡೋಡಿ ಬರುತ್ತಾಳೆ.ಮನೆ ಬೆಂಕಿಗೆ ಸಿಲುಕಿರುವುದನ್ನು ಗಮನಿಸುತ್ತಾಳೆ.ತನ್ನ ಮಗು ಮನೆ ಒಳಗೆ ತೊಟ್ಟಿಲಲ್ಲಿ ಮಲಗಿರುವುದು ಆಕೆಗೆ ನೆನಪಾಗುತ್ತದೆ.ಕೂಡಲೇ ಅಲ್ಲಿದ್ದವರ ಬಳಿ ತನ್ನ ಮಗುವನ್ನು ಉಳಿಸುವಂತೆ ಬೇಡುತ್ತಾಳೆ.ಆದರೆ ಯಾರೂ ಅದಕ್ಕೆ ಸಿದ್ಧವಾಗುವುದಿಲ್ಲ.ಬೆಂಕಿ ಜೋರಾಗುತ್ತಲೇ ಇದೆ.ಆದರೆ ಯಾರೂ ಸಹಾಯ ಮಾಡುತ್ತಿಲ್ಲ.
ತಾಯಿಗೆ ಮಗುವಿನದೇ ಚಿಂತೆ.ಆಕೆ ಮಗುವನ್ನು ಕಾಪಾಡಲು ಬೆಂಕಿಯ ಮಧ್ಯಯೇ ಮನೆ ಒಳಗೆ ನುಗ್ಗುತ್ತಾಳೆ.ಹೊಗೆ ಇಂದ ಕಣ್ಣು ಕಾಣದಿದ್ದರೂ ಮಗುವಿನ ತೊಟ್ಟಿಲ ಬಳಿ ಸಾಗುತ್ತಾಳೆ.ಮಲಗಿದ್ದ ಮಗುವನ್ನು ಕೈಯಲ್ಲಿ ಎದೆಗೆ ಅವಚಿಕೊಂಡು ಹೊರಗೆ ಬರುತ್ತಾಳೆ.ಆ ಮಗುವೇ ನಮ್ಮ ಹೆಮ್ಮೆಯ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನವರು.
ನೀತಿ:ತಾಯಿಗಿಂತ ಮಿಗಿಲಾದ ದೇವರಿಲ್ಲ.
No comments:
Post a Comment