Friday, March 4, 2011

ಸಜ್ಜನರ ಸಂಗ

                                                          ಸಜ್ಜನರ  ಸಂಗ
ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ.ಆತನಿಗೆ ಒಬ್ಬನೇ ಮಗ.ಆತನನ್ನು ಕಷ್ಟಗಳ ಅರಿವಾಗದಂತೆಯೇ ಬೆಳೆಸಿದ್ದ ಶ್ರೀಮಂತ.ಹೀಗಿರುವಾಗ ಒಮ್ಮೆ ಆತ ಖಾಯಿಲೆ ಬಿದ್ದು ಸಾವಿನಂಚಿಗೆ ಬರುತ್ತಾನೆ.ಆಗ ಆತ ತನ್ನ ಮಗನನ್ನು ಬಳಿಗೆ ಕರೆದು ನನ್ನ ಸಾವು ಸಮೀಪಿಸುತ್ತಿದೆ.ನನ್ನ ನಂತರ ನೀನು ಯಾವಾಗಲೂ ಸಜ್ಜನರ ಸಹವಾಸವನ್ನೇ ಮಾಡಬೇಕು.ಹಾಗೆಂದು ಮಾತು ಕೊಡು ಎಂದನು.ಮಗನು ಹಾಗೆಯೇ ಆಗಲೆಂದು ಮಾತು ಕೊಟ್ಟನು.ನಂತರ ಶ್ರೀಮಂತ ಸಾವನ್ನಪ್ಪಿದ.
ಆದರೆ ತನ್ನ ಕೈಗೆ ಅಧಿಕಾರ ಬಂದ ನಂತರ ಮಗ ತಂದೆಗೆ ಕೊಟ್ಟ ಮಾತನ್ನು ಮರೆತುಬಿಟ್ಟ.ಆತನ ಸುತ್ತ ಪೋಲಿ ಗೆಳೆಯರು ಹುಟ್ಟಿಕೊಂಡರು,ಅವರು ಇವನ ಹಣಕ್ಕೆ ಮರುಳಾಗಿ ಗೆಳೆಯರಾಗಿ ಬಂದವರು.ಅವರು ಮಗನಿಗೆ ದುಂದುವೆಚ್ಚ ಮಾಡಲು ಪ್ರೇರೇಪಿಸಿದರು..ಹೀಗೆ ಮಗನ ಸಂಪತ್ತೆಲ್ಲವೂ ಅಲ್ಪ ಸಮಯದಲ್ಲೇ ಕರಗಿಹೋಯಿತು.ಈಗ ಅವನು ಬೀದಿಗೆ ಬಿದ್ದ.ಆತ ನಂಬಿದ್ದ ಗೆಳೆಯರು ಅವನಿಗೆ ಕೈಕೊಟ್ಟರು.ಆಗ ಆತನಿಗೆ ತಂದೆ ಹೇಳಿದ್ದ ಮಾತಿನ ಅಂತರ್ಯದ ಅರಿವಾಯಿತು.
ನೀತಿ: ಸಜ್ಜನರ ಸಂಗ ಹೆಜ್ಜೇನು ಸವಿದಂತೆ

1 comment:

  1. Absloutely true, now, in the past and in the future/this moral is the ESSENCE OF ALL SCRIPTURES/BRGDS/SLRAO

    ReplyDelete