ಇದನ್ನು ನನ್ನ ತಾಯಿ ಜೊತೆ ಅಂತರ್ಜಾಲದಲ್ಲಿ ನೋಡಿದ್ದು.
ಬೇಕಾಗುವ ಸಾಮಗ್ರಿಗಳು
ಹಾಲಿನ ಪುಡಿ 1/4 ಕಪ್
ಹಾಲು 1/2 ಕಪ್
ತುಪ್ಪ 1 ಚಮಚ
ಕ್ಯಾರಟ್ 2, ತುರಿದಿರಬೇಕು
ಸಕ್ಕರೆ 1/4 ಕಪ್
ಮಾಡುವ ವಿಧಾನ
ಮೊದಲಿಗೆ ಹಾಲಿನ ಪುಡಿ ಮತ್ತು ಹಾಲನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಬೇಕು.
ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಂಡು ತುರಿದಿರುವ ಕ್ಯಾರೆಟ್ ಸೇರಿಸಿ 2 ನಿಮಿಷ ದೊಡ್ಡ ಉರಿಯಲ್ಲಿ ಕ್ಯಾರಟ್ ಮೆತ್ತಗಾಗುವ ತನಕ ಹುರಿಯಿರಿ.
ನಂತರ ಉರಿ ಕಡಿಮೆ ಮಾಡಿಕೊಂಡು ಹಾಲಿನ ಪೇಸ್ಟ್ ತಯಾರಿಸಿದ್ದನ್ನು ಸೇರಿಸಿ ಮಗುಚಬೇಕು.
ಇದಕ್ಕೆ ಸಕ್ಕರೆ, 2 ಏಲಕ್ಕಿ ಮತ್ತು ಒಂದು ಚಮಚ ತುಪ್ಪ ಸೇರಿಸಿ ಕೈ ಬಿಡದಂತೆ ಮಗುಚಬೇಕು.
ಎಕ್ಸ್ಟ್ರಾ ನೀರು ಹೋಗುವ ತನಕ ಮಗುಚಬೇಕು. ಆದರೆ ಗಟ್ಟಿಯಾಗಲು ಬಿಡಬಾರದು.
ಈಗ ಕ್ಯಾರಟ್ ಹಲ್ವಾ ರೆಡಿ !!!!
No comments:
Post a Comment