ಗತಿಸಿದ ಕಾಲ
ಗತಿಸಿದ ಕಾಲ ಎಂದೂ ಮರಳಿ ಬಾರದು
ಏನೂ ಸಾಧಿಸದೆ ಇರುವ ಕೊರಗು ಮನದಲ್ಲಿ ಇರುವುದು;
ಯಾರೂ ಕಂಡು-ಕೇಳರಿಯದ ಖಾಯಿಲೆಯಿಂದ ಬಳಲುತ್ತಿರುವೆ ನಾನು
ಕಾಲಿಗೆ ಬಲವಿಲ್ಲದ್ದಿದ್ದರೇನಂತೆ?ಕುದುರೆಯಂತೆ ಓಡುತಿಹುದು ಮನವು.
ನಡೆಯಲಾಗುವುದಿಲ್ಲ,ಆದರೂ ನಾನು ನಡೆದು ತೋರಿಸುವ ಕಾಲ ಬಂದಿದೆ
ಯಾರೇನೇ ಅಂದರೂ , ಮುನ್ನುಗ್ಗುತ್ತಲಿರುವೆ ಧೃತಿಗೆಡದೆ;
ಪಾಲಕರ ಉಪಕಾರವನ್ನು ಎಂತು ಮರೆಯಲಿ?
ಸಲಹುತ್ತಿದ್ದಾರೆ ನನ್ನನ್ನು ಜೋಪಾನದಿಂದ ,ತಟ್ಟದಂತೆ ಸಮಸ್ಯೆಗಳ ಸುಳಿ..
No comments:
Post a Comment