ಬಾದಾಮ್ ಕುಲ್ಫಿ ಮಾಡುವುದು ಹೇಗೆ?
ಬಾದಾಮ್ ಕುಲ್ಫಿ ಮಾಡುವುದು ಹೇಗೆ ಎನ್ನುವುದನ್ನು ಒಂದು ಕುಕೆರಿ ಶೋವ್ದಲ್ಲಿ ನೋಡಿ ಕಲಿತಿದ್ದೇನೆ.ಅದನ್ನು ಈಗ ಹಂಚಿಕೊಳ್ಳುವೆ.
ಬೇಕಾಗುವ ಸಾಮಗ್ರಿಗಳು
೪ ಕಪ್ ಹಾಲು
೧ ಕಪ್ ಮಿಲ್ಕ್ ಮೇಡ್
ಚೂರು ಮಾಡಿದ ಬಾದಾಮ್ ಚೂರುಗಳು
ಚೂರು ಮಾಡಿದ ಪಿಸ್ತಾ ಚೂರುಗಳು
ಸ್ವಲ್ಪ ಏಲಕ್ಕಿ ಪುಡಿ
೨ ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್
ನೀರು
ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಹಾಲು ಮತ್ತು ಮಿಲ್ಕ್ ಮೇಡ್ ಅನ್ನು ಸೇರಿಸಿ ಕಾಯಲು ಬಿಡಿ.ಇದೇ ಸಮಯದಲ್ಲಿ ಒಂದು ಪಾತ್ರೆಗೆ ಕಾರ್ನ್ ಫ್ಲೋರ್ ಮತ್ತು ನೀರನ್ನು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ.ಹಾಲು ಕುದಿದು ಗಟ್ಟಿಯಾಗುವ ಹಂತಕ್ಕೆ ಬಂದಾಗ ಅದಕ್ಕೆ ಈ ಕಾರ್ನ್ ಫ್ಲೋರ್ ಮಿಶ್ರಣ ಸೇರಿಸಿ.ಅದನ್ನು ಕದಡುತ್ತಲೇ ಅದಕ್ಕೆ ತುಂಡು ಮಾಡಿದ ಬಾದಾಮ್ ,ಪಿಸ್ತಾ ಚೂರುಗಳನ್ನು ಸೇರಿಸಿ.ಈಗ ಗ್ಯಾಸ್ off ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.ಈಗ ಅದನ್ನು ತಣ್ಣಗಾಗಲು ಬಿಡಿ. ನಂತರ ಅದನ್ನು ಒಂದು ಕುಲ್ಫಿ ಲೋಟೆಗೆ ಹಾಕಿ fridge ನಲ್ಲಿ ಇಡಿ.ಒಂದು ರಾತ್ರಿ ಪೂರ್ತಿ.ಮಾರನೆ ದಿನ ಬೆಳಿಗ್ಗೆ ರುಚಿಯಾದ ಬಾದಾಮ್ ಕುಲ್ಫಿ ತಿನ್ನಲು ರೆಡಿ.
No comments:
Post a Comment