ಯಾರಿಗೆ ಹೇಳಲಿ?
ಹೇಳುವೆನೆಂದರೂ ಯಾರಿಗೆ ಹೇಳಲಿ?
ಮನದ ತಳಮಳವ ಹತ್ತಿಕ್ಕಲಾರದೆ ಹೋಗುತ್ತಿದ್ದೇನೆ ಬಳಲಿ;
ನನ್ನ ವಯಸ್ಸಿನ ಹುಡುಗಿಯರ ಸಾಧನೆಯ ಕಂಡು ಆಗುತ್ತಿದೆ ಬೆರಗು
ಆಸ್ಪತ್ರೆ-ಮನೆ ಇಷ್ಟರಲ್ಲೇ ನನ್ನ ಜೀವನ ಮುಗಿದು ಹೋಗುತ್ತಿದೆಯಲ್ಲಾ ಎಂಬ ಕೊರಗು.
ನನ್ನ ಸ್ಥಿತಿ ನೋಡಿ ಪರರು ನಗುವರೆಂಬ ಸಂಶಯ
ನನಗೂ ಸಹಾನುಭೂತಿ ತೋರಿಸಿ ಎಂಬುದೇ ನನ್ನ ಆಶಯ;
ಎಲ್ಲರಂತೆ ನಾನಿಲ್ಲ ಎಂಬುದು ವಾಸ್ತವ
ಆ ಭಾವನೆಯೇ ಕೊಲ್ಲುತ್ತಿದೆ ನನ್ನ ಮನವ.

No comments:
Post a Comment