ಆಸೆಯೇ ದುಃಖಕ್ಕೆ ಮೂಲ
ಮಿಸ್ಟರ್.ಫ್ರಾಂಕ್ಲಿನ್ ಅವರು ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿದ್ದವರು.
ಒಮ್ಮೆ ಅವರ ಬಳಿ ಓರ್ವ ವ್ಯಕ್ತಿ ತನ್ನ ಮಗನ ಜೊತೆ ಬರುತ್ತಾನೆ.ಆತ ಫ್ರಾಂಕ್ಲಿನ್ ಅವರನ್ನು ಭೇಟಿ ಮಾಡಿ ತನ್ನ ಮಗನನ್ನು ಅವರಿಗೆ ತೋರಿಸಿ ಇವನಿಗೆ ವಿದ್ಯಾಭ್ಯಾಸ ಮಾಡಿಸುವಷ್ಟು ಹಣ ನನ್ನಲಿಲ್ಲ.ನಾನು ಬಹಳ ಕಷ್ಟದಲ್ಲಿ ಇದ್ದೇನೆ ಎಂದು ತನ್ನ ಕಷ್ಟಗಳೆಲ್ಲವನ್ನು ಅವರ ಬಳಿ ಹೇಳಿಕೊಂಡ.
ಫ್ರಾಂಕ್ಲಿನ್ ಅವರು ಎಲ್ಲವನ್ನು ಮೌನವಾಗಿ ಕೇಳಿಸಿಕೊಂಡರು..ನಂತರ ಅವರು ಮೇಜಿನ ಮೇಲಿದ್ದ ಒಂದು ಸೇಬು ಹಣ್ಣನ್ನು ತೆಗೆದು ಆ ಹುಡುಗನಿಗೆ ಕೊಟ್ಟರು.ಆತ ಅದನ್ನು ತನ್ನ ಬಲಕೈಯಲ್ಲಿ ಹಿಡಿದುಕೊಂಡ.ಫ್ರಾಂಕ್ಲಿನ್ ಅವರು ಮತ್ತೊಂದು ಹಣ್ಣನ್ನು ತೆಗೆದು ಆ ಹುಡುಗನಿಗೆ ಕೊಟ್ಟರು.ಈಗ ಆತ ಅದನ್ನು ತನ್ನ ಎಡಕೈಯಲ್ಲಿ ಹಿಡಿದುಕೊಂಡ.ಫ್ರಾಂಕ್ಲಿನ್ ಅವರು ಅಷ್ಟಕ್ಕೇ ಸುಮ್ಮನಾಗದೆ ಆತನಿಗೆ ಮತ್ತೊಂದು ಹಣ್ಣನ್ನು ಕೊಟ್ಟರು.
ಈಗ ಹುಡುಗನಿಗೆ ನಿಜವಾಗಲೂ ಕಷ್ಟವಾಯಿತು.ಆತನಿಗೆ ಹಣ್ಣಿನ ಮೇಲೆ ಆಸೆ.ಆದರೆ ಎರಡೂ ಕೈಗಳಲ್ಲಿ ಮೊದಲೇ ಹಣ್ಣುಗಳನ್ನು ಹಿಡಿದುಕೊಂಡಿದ್ದಾನೆ.ಆದರೂ ಹಣ್ಣನ್ನು ಬಿಡಲು ಮನಸ್ಸಿಲ್ಲ.ಆತ ಹಣ್ಣನ್ನು ಹಿಡಿಯಲು ಯತ್ನಿಸಿದಾಗ ಆತನ ಎರಡೂ ಕೈಯಲ್ಲಿ ಇದ್ದ ಹಣ್ಣು ನೆಲಕ್ಕೆ ಬೀಳುತ್ತವೆ.
ಇದನ್ನೆಲ್ಲಾ ನೋಡುತ್ತಿದ್ದ ಫ್ರಾಂಕ್ಲಿನ್ ಅವರು ತಂದೆಯ ಬಳಿ ನಮಗೆ ಎಷ್ಟು ಪ್ರಾಪ್ತಿಯೋ,ಅಷ್ಟಕ್ಕೇ ತೃಪ್ತಿ ಪಡಬೇಕು.ಇಲ್ಲದಿದ್ದರೆ ನಮಗೆ ಯಾವುದೂ ದಕ್ಕುವುದಿಲ್ಲ . ನಮ್ಮ ಹೆಚ್ಚು ಬೇಕೆಂಬ ಆಸೆಯೇ ಹೆಚ್ಚಿನ ಕಷ್ಟಗಳಿಗೆ ಮೂಲ ಎಂದರು.ಅವರ ಮಾತಿನ ಅಂತರ್ಯವನ್ನು ತಿಳಿದುಕೊಂಡ ತಂದೆ ಅವರಿಗೆ ವಂದಿಸಿ ತನ್ನ ಮಗನ ಜೊತೆ ಅಲ್ಲಿಂದ ಹೊರಟು ಹೋದನು.
No comments:
Post a Comment