ತೇನ ವಿನಾ ತೃಣಮಪಿ ನ ಚಲತಿ
ಒಂದೂರು.ಅಲ್ಲಿ ಓರ್ವ ಶ್ರೀಮಂತನಿದ್ದ.ಅವನ ಬಳಿ ಎಲ್ಲವೂ ಇತ್ತು.ಆದರೆ ಅವನಿಗೆ ಸಂತಾನ ಭಾಗ್ಯ ಇರಲಿಲ್ಲ.ಇದರಿಂದ ಅವನು ತುಂಬಾ ದುಃಖದಲ್ಲಿದ್ದ.ಅವನು ಮಾಡದ ಪೂಜೆಗಳಿಲ್ಲಹೋಗದ ದೇವಸ್ಥಾನಗಳಿಲ್ಲ.ಕೊನೆಗೂ ಅವನ ಮೊರೆ ದೇವರಿಗೆ ಕೇಳಿಸಿತು.ಅವನಿಗೊಬ್ಬ ಮಗನ ಜನನವಾಯಿತು.
ಶ್ರೀಮಂತನ ಮನೆಯಲ್ಲಿ ಸಂಭ್ರಮವೋ ಸಂಭ್ರಮ.ಬಹಳ ವರುಷಗಳಾದ ಮೇಲೆ ಹುಟ್ಟಿದವನೆಂದು ಅವನನ್ನು ಮುದ್ದು ಮಾಡಿದ್ದೇ ಮಾಡಿದ್ದು.ಹೀಗಿರುವಾಗ ಶ್ರೀಮಂತನ ಮಗ ಸತ್ತು ಹೋಗುತ್ತಾನೆ.ಇದರಿಂದ ಮನೆಯಲ್ಲಿ ಇದ್ದವರೆಲ್ಲರಿಗೂ ಆಘಾತ ಆಯಿತು.
ಊರವರೆಲ್ಲರೂ ತಮ್ಮ ಸಮಾಧಾನ ಹೇಳಲು ಅವನ ಮನೆಗೆ ಬಂದರು.ಆದರೆ ಶ್ರೀಮಂತ ನಿರ್ಲಿಪ್ತನಾಗಿ ಕುಳಿತ್ತಿದ್ದ.ಅವನನ್ನು ಮಾತನಾಡಿಸಿದಾಗ ಆತ ಹೇಳಿದ್ದಿಷ್ಟೇ "ಆ ದೇವನೇ ಮಗನನ್ನು ಕೊಟ್ಟ.ಈಗ ಆತನೇ ಹಿಂದಕ್ಕೆ ಕರೆದುಕೊಂಡ.ಆತನ ಆಟ ಬಲ್ಲವರಾರು?ತೇನ ವಿನಾ ತೃಣಮಪಿ ನ ಚಲತಿ."ಎಂದನು.
No comments:
Post a Comment