ನಡೆ-ನುಡಿ ಹೇಗಿರಬೇಕು?
ಮತ್ತೊಬ್ಬರ ಜೊತೆ ಮಾತನಾಡುವಾಗ ಹೇಗೆ ವರ್ತಿಸಬೇಕು?ಎಂಬುದಕ್ಕೆ ಒಂದು ಕಥೆ ಇಲ್ಲಿದೆ.
ಹಿಂದೆ ಭಾರತವನ್ನು ಮುಘಲ್ ದೊರೆ ಹುಮಾಯೂನ್ ಆಳುತ್ತಿದ್ದ ಕಾಲ.ಬಹ್ರಾಂ ಖಾನ್ ಎಂಬುವವನು ಆತನ ಸೇನಾಪತಿ.ಒಮ್ಮೆ ಹುಮಾಯೂನ್ ತನ್ನ ಸೈನ್ಯದ ಬಗ್ಗೆ ಚರ್ಚಿಸಲು ಬಹ್ರಾಂ ಖಾನ್ ಅನ್ನು ತನ್ನ ಬಳಿಗೆ ಕರೆಸಿಕೊಂಡು ಮಾತನಾಡುತ್ತಿದ್ದ.ಆದರೆ ಬಹ್ರಾಂ ಖಾನ್ ರಾಜನನ್ನು ಕಂಡ ತಕ್ಷಣವೇ ತಲೆ ತಗ್ಗಿಸಿದವನು ಮತ್ತೆ ತಲೆ ಮೇಲೆ ಎತ್ತಲೇ ಇಲ್ಲ.ಇದನ್ನು ಗಮನಿಸಿದ ಹುಮಾಯೂನ್ ಗೆ ತನ್ನ ಮಾತಿನ ಕಡೆ ಸೇನಾಪತಿ ಲಕ್ಷ್ಯ ಕೊಡುತ್ತಿಲ್ಲ ಎಂದು ಭಾಸವಾಯಿತು.
ಅವನು ಅದನ್ನು ಸೇನಾಪತಿಗೆ ಹೇಳಿಯೂ ಬಿಟ್ಟ.ಆಗ ಬಹ್ರಾಂ ಖಾನ್ ತಾನು ಧರ್ಮ ಶಾಸ್ತ್ರದಲ್ಲಿ ಹೇಳಿದ ಹಾಗೆ ಮಾಡುತ್ತಿದ್ದೇನೆ ಎಂದು ಉತ್ತರಿಸಿದ.ಕುತೂಹಲಗೊಂಡ ಹುಮಾಯೂನ್ ಅದೇನೆಂದು ಕೇಳಲು ಬಹ್ರಾಂ ಖಾನ್ ಧರ್ಮಶಾಸ್ತ್ರದಲ್ಲಿ ಮೂವರಿಗೆ ಮಾತನಾಡುವಾಗ ಗೌರವ ನೀಡಬೇಕೆಂದು ಇದೆ.
೧.ಧರ್ಮ ಗುರುಗಳು ಮಾತನಾಡುವಾಗ.
೨.ರಾಜ ಅಥವಾ ಇತರ ಉನ್ನತ ಅಧಿಕಾರಿಗಳು ಮಾತನಾಡುವಾಗ.
೩.ಮಹಿಳೆಯರು ಮಾತನಾಡುವಾಗ.
ಈ ಸಂಧರ್ಭಗಳಲ್ಲಿ ವ್ಯಕ್ತಿಯು ಮಾತನಾಡುವ ವ್ಯಕ್ತಿಯ ಕಣ್ಣಿನಲ್ಲಿ ಕಣ್ಣು ಇಟ್ಟು ಮಾತನಾಡದೆ ತಲೆ ತಗ್ಗಿಸಿ ಅವರ ಮಾತು ಕೇಳಿಕೊಂಡು ,ಅವರಿಗೆ ಗೌರವ ತೋರಿಸಬೇಕು ಎಂದನು.

No comments:
Post a Comment