Thursday, March 31, 2011

Life is short

                                                     Life is short
King Aja once was seen in a beautiful park in his kingdom with his wife Queen Indumati. They were both seen happily walking in the greens of the park. In the same time,muni Narada was doing rounds in swarga happily singing the bhajans of lord Vishnu carrying his veena. His veena was garlanded with flower garlands. He was walking singing in the sky.
It was a mere coincidence that he came to the spot where the royal couple are having a great time together. Narada was walking in the sky. He was unaware of what is going on in earth. As he came to the spot exactly above the royal couple,the flower garland of his veena has fallen down and it fallen down around the neck of the queen.
As the queen is unaware of this,she fainted.And the impact that it had fallen from the sky,she died immediately. The king was seeing all this but he could not do anything. So,at that time,he realised that LIFE IS SHORT. So,eventhough he lost his wife,he didnt want to marry again. Instead ,he spent his rest of his life in the service of the GOD.
MORAL : LIFE IS VERY SHORT.IT IS IN OUR HAND TO MAKE IT SWEET.

Tuesday, March 29, 2011

ನಿರಾಶವಾದ ಒಳ್ಳೆಯದಲ್ಲ

                                     ನಿರಾಶವಾದ ಒಳ್ಳೆಯದಲ್ಲ
ತಿಲಕರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರು.ಬ್ರಿಟಿಶ್ ಸರ್ಕಾರ ಅವರ ಮೇಲೆ ಒಂದು ಕಣ್ಣು ಇಟ್ಟಿತ್ತು.ಹೀಗೆ ಒಮ್ಮೆ ಅವರು ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮನೆಗೆ ಬರುತ್ತಿದ್ದಾಗ ಅವರನ್ನು ಬಂಧಿಸಿ,ದೂರದ ಬರ್ಮಾ ದೇಶದ ಸೆರೆಮನೆಗೆ ಅಟ್ಟಿತು.
ಈಗ ತಿಲಕರು ಅಪರಿಚಿತ ದೇಶದಲ್ಲಿ ಒಬ್ಬಂಟಿಗರು.ಅದೂ ಸೆರೆಮನೆಯಲ್ಲಿ ಅವರನ್ನು ಪ್ರತ್ಯೇಕವಾಗಿ ಇಡಲಾಗಿತ್ತು.ತಿಲಕರಿಗೆ ಒಂಟಿತನ ಕಾಡಲಾರಂಭಿಸಿತು.ಅವರಿಗೆ ಅಸಹಾಯಕತೆ ಎಷ್ಟಿತ್ತು ಎಂದರೆ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅನಿಸುತಿತ್ತು.
ಹೀಗೆ ಇದ್ದಾಗ ಒಮ್ಮೆ ಅವರು ತಮ್ಮ ಕೋಣೆಯಲ್ಲಿ ಇರುವೆ ಸಾಲು ಇದ್ದದ್ದನ್ನು ಗಮನಿಸಿದರು.ಒಂದೇ ಸರಳ ರೇಖೆಯಲ್ಲಿ ಹೋಗುತ್ತಿದ್ದ ಇರುವೆಗಳ ದಾರಿಗೆ ಅಡ್ಡಲಾಗಿ ಅವರು ಒಂದು ಪೆನ್ಸಿಲ್ ಇಟ್ಟರು.ಇರುವೆಗಳಿಗೆ ಏನು ಮಾಡಲು ತೋಚಲಿಲ್ಲ.ಆದರೂ  ಕೆಲವು ಇರುವೆಗಳು ಪೆನ್ಸಿಲ್ ಕೆಳಭಾಗದಿಂದ ಮತ್ತು ಕೆಲವು ಪೆನ್ಸಿಲ್ ಹತ್ತಿ ಆ ತಡೆಯನ್ನು  ನಿವಾರಿಸಿಕೊಂಡು ಪಯಣಿಸಿದವು
ಇದನ್ನು ಕಂಡ ತಿಲಕರಿಗೆ ಜ್ಞಾನೋದಯವಾಯಿತು.ಅಷ್ಟು ಸಣ್ಣ ಇರುವೆಗಳೇ ತಮ್ಮ ಮುಂದೆ  ಇದ್ದ ತಡೆಯನ್ನು ನಿವಾರಿಸಿಕೊಂಡು ಮುಂದಕ್ಕೆ ಪ್ರಯಾಣ ಮುಂದುವರೆಸಿದವು.ತಾವು ಈ ಸಣ್ಣ ಕಷ್ಟಕ್ಕೆ ಅಂಜಿ ಆತ್ಮಹತ್ಯೆಯ ಯೋಚನೆ ಮಾಡುತ್ತಿರುವುದು ತಪ್ಪು ಎಂದೆನಿಸಿತು.
ನೀತಿ: ನಿರಾಶವಾದ ಒಳ್ಳೆಯದಲ್ಲ.

Obedience and politeness

                                               Obedience and Politeness
Once upon a time,the education was given by gurukuls.Ramu and Shamu are best friends and both of them had the urge to educate themselves.So they joined one of the gurukuls.Both of them were brilliant in studies.Their teacher liked them both.
Now their education is complete.So,their teacher said them so.And he wanted them to use the essence of education for good purpose.
One day,he had a urgent work to attend for in near by village.So,he left the gurukul early in the morning. Ramu and Shamu were not aware of this.So,when both of them got up in morning,they didnt find their teacher.The teacher himself used to allocate work for them.Now , they are in fix about what to do and what not to do.
Finally,both of them decided to sweep the floor of gurukul as they were used to this work.But now came the real trouble.Ramu said he is elder than Shamu and it is not right for him to do the sweeping work.And he wanted Shamu to sweep the floor.
But,Shamu had a different version of story.Eventhough,he is younger to Ramu,he has performed better than Ramu in studies.So,he thinks it is not right for him to sweep the floor as he has excellency in studies over Ramu.He thinks for the most intelligent person like him,sweeping is the inferior job.So,both of them started quarrelling.
So,when the teacher returned to gurukul,he found both of his students quarrelling.He also observed that the gurukul is not tidy.So,he asked his students for reason of fighting.He came to know about the reason.But he didnt say anything.
Instead he started to sweep the floor by himself.He said to students as they think that sweeping work is inferior to their edaucational knowledge,he is doing the work by himself.He said to them NO WORK IS INFERIOR FOR HIM.Then the boys realised their mistake and pleaded for pardon by teacher.And both of them together,sweeped the floor.
Moral : Eventhough we have got education,obedience and politeness are must.

Monday, March 28, 2011

My elbow crutch

                                                     My best friend elbow crutch
My best friend ELBOW CRUTCH
You and me are the perfect MATCH;
Without you,my life would have been MISERABLE
The moral support you are giving me is truly COMMENDABLE.

Saturday, March 26, 2011

South African cricket team

                                             South African Cricket Team
South African cricket team once again proved themselves as CHOKERS
They failed to reach the target set by KIWIS;
They lost the match inspite of having KALLIS
Back home,now they can enjoy watching remaining WORLD CUP MATCHES!

Friday, March 25, 2011

Reason for Durvasa's angryness

                                        Reason for Durvasa's angryness
Durvasa is the son of muni atri and anasuya.The couple were not having any children.So,they were doing many pujas to goda.
One day Lord Brahma and Shiva are arguing over some matter.Shiva was so angry with Brahma as Brahma was not listening to him.All the 3 lokas were distructed by the wrath of Shiva.People are frightened.Shiva returned to kailasa being angry.His partner Parvati complained that because of Shiva's angryness,all the 3 lokas are in distress.
At that time,Shiva realised the effect of his angryness is causing harm to other people.So he decided to drop his angryness in the form of a baby.So,Shiva deposited a portion of his angryness in the stomach of Anasuya as they are hoping for a baby.
Thus born durvasa.As he is born because of Shiva's angryness,durvasa himself is a man with angryness.So,everyone was scared of him and his angryness.Because in angryness,durvasa cursed people and destroyed their lives.At the same time,if the host please him,he blessed them with boons.So,till today,the angry people are compared with Durvasa.

Thursday, March 24, 2011

man's intention

                                          Man's true intention
One day a man was seen waiting outside the door of the education minister's office.Everyone who were passing by,asked the reason with the man.he replied since his village dont have school for children, He wants the govt. to start the school in his village.Everyone was so pleased by the intention of man to start a school in his village.
So,there was a compaign from the people to start the school in man's village.Govt.was pressurised.Finally it approved the project of starting a new school in man's village.Man was very much happy by the decision so he threw out a small party to those who helped him.
He invited all his childhood friends to the party.He had a close friend.He was so surprised that his friend(man)was succeded in taking grant from the govt to start a school in the village.He knew his friend's nature.His friend(man)was not ready to do a little help also to people.Now he is arranging site to start a school for childern!
So,in privacy he asked his friend(man) for the reason of sudden tranformation.He was spell bound by the answer the man gave.the man replied "my daughter is married to a school master.As there is no school in our village,my son in law has to travel a lot to attend for his job.Now school will be opened in our village.Now my son-in-law can work in this village itself.My daughter's family will be infront of our eyes."
Moral-----SELFISH MEN CAN DO ANYTHING POSSIBLE.

Wednesday, March 23, 2011

why parashuram killed kings?

                                         why parashuram killed kings?
it is known that parashuram killed all the existing kshatriyas on earth.here is the reason
parashuram is the son of saint jamadagni and kshatriya origin renuka.once while returning home,he saw his mother crying hysterically.disturbed by this,parashuram asked his mother for reason.at that time,renuka beating her chest 21 times in sorrow explained parashuram that his father was mercilessly killed by the king of their country for no reason.
hearing this,parashuram was so mad in rage that he vowed to eliminate all the kshatriyas on earth.as his mother beated her chest 21 times in sorrow over the death of her husband,parashuram scanned the whole earth 21 times for kshatriyas and killed them.
it was said that he was residing in uttara karnataka.when he returned from his mission,his axe was so bloody from the blood of kshatriyas that he decided to wash it in river water.he saw river malaprabha was flo wing near by and decided to wash his axe in that river.
so when parashuram was cleaning his axe in the river water,the river water turns red by the blood.so when the villagers who were washing their clothes in the river water, exclaimed that "ai,hole".so the place in which parashuram believed to clean his axe is now known as aihole.

ಮದುವೆಯ ಯೋಗ

                                                 ಮದುವೆಯ ಯೋಗ
ಮದುವೆಯ ಯೋಗ ನನಗಿಲ್ಲ
ನನಗೇತಕೆ ಈ ಶಿಕ್ಷೆ?ಕಾರಣ ತಿಳಿಯದಲ್ಲ;
ವಿಧಿ ನಿಯಮದ ವಿರುದ್ಧ ಹೋಗಲು ಸಾಧ್ಯವಿಲ್ಲ ಎನ್ನುವುದೀಗ ಗೊತ್ತಾಗಿದೆ
ಮನದಲ್ಲೇ ಕೊರಗುತ್ತಿರುವೆ,ತಡೆದುಕೊಳ್ಳಲಾರದೆ ಈ ಬಾಧೆ.

Tuesday, March 22, 2011

ಗೆಲುವಿನ ತಂತ್ರ

                                      ಗೆಲುವಿನ ತಂತ್ರ
ಎರಡನೇ ಮಹಾಯುದ್ಧದ ಕಾಲ.ಜಪಾನ್ ಮತ್ತು ಜರ್ಮನಿ ಗಳು ಮಿಕ್ಕೆಲ್ಲಾ ರಾಷ್ಟ್ರಗಳಿಗೆ ಸಡ್ಡು ಹೊಡೆದು ನಿಂತ ಕಾಲವದು.ಹೀಗಿರುವಾಗ ಬ್ರಿಟನ್ ಮತ್ತು ರಷ್ಯಗಳು ಇವುಗಳ ವಿರುದ್ಧ ಹೋರಾಡುತ್ತಿದ್ದವು.ಹೀಗೆ ಯುದ್ಧ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಮಿತ್ರ ರಾಷ್ಟ್ರಗಳ ಸೈನ್ಯವು ಹಿಂದೆ ಸರಿಯಲು ಶುರು ಮಾಡಿತು.ಆಗ ಬ್ರಿಟನ್ನಿನ ಪ್ರಧಾನಿಯಾಗಿದ್ದ ಚರ್ಚಿಲ್ ಅವರು ಇದೂ ಯುದ್ಧ ತಂತ್ರದ ಭಾಗವೇ ಎಂದಿದ್ದರು.
ಆದರೆ ಅವರ ಮಾತನ್ನು ಉಡಾಫೆ ಮಾಡಿದವರೇ ಹೆಚ್ಚು.ಮಿತ್ರ ರಾಷ್ಟ್ರಗಳು ತಮ್ಮ ವೈರಿಗೆ ಹೆದರಿ ಹಿಂದೆ ಸರಿಯುತ್ತಿವೆ ಎಂದೇ ಎಲ್ಲರೂ ಭಾವಿಸಿದ್ದರು.ಜಪಾನ್ ಮತ್ತು ಜರ್ಮನಿಯ ಸೈನಿಕರು ಹಾಗೆ ತಿಳಿದುಕೊಂಡು ಆರಾಮದಲ್ಲಿ ಇದ್ದರು.ಆದರೆ ಸ್ವಲ್ಪ ಸಮಯದ ನಂತರ ಮಿತ್ರ ರಾಷ್ಟ್ರಗಳ ಸೈನಿಕರು ಹಟಾತ್ತನೆ ಜರ್ಮನಿ ಮತ್ತು ಜಪಾನ್ ಸೈನ್ಯದ ಮೇಲೆ ಆಕ್ರಮಣ ಮಾಡಿದರು.ಅವರ ಹುಟ್ಟು ಅಡಗಿಸಿದರು.
ಮುಂದಿದ್ದು ಇತಿಹಾಸ.ಹಿಟ್ಲರನು ಆತ್ಮಹತ್ಯೆ ಮಾಡಿಕೊಂಡದ್ದು ಮತ್ತು ಜಪಾನ್ ಮೇಲೆ ಅಮೇರಿಕಾ ಪರಮಾಣು ಬಾಂಬ್ ಹಾಕಿದ್ದು ಎಲ್ಲರಿಗೂ ತಿಳಿದೇ ಇದೆ.ಇದರಿಂದಾಗಿ ಹಿನ್ನಡೆ ಹೊಂದಬೇಕಾಗಿ ಬಂದರೂ ಪ್ರಯತ್ನ ಕೈ ಬಿಡಬಾರದು ಎಂದು ತಿಳಿಯುತ್ತದೆ.
ನೀತಿ:ಸೋಲೇ ಗೆಲುವಿನ ಸೋಪಾನ


ತಟ್ಟಪ್ಪ ಮಾಡುವುದು ಹೇಗೆ?

                                              ತಟ್ಟಪ್ಪ ಮಾಡುವುದು ಹೇಗೆ?
ಟಿ.ವಿ.ಯಲ್ಲಿ ನೋಡಿದ ಇದರ ಬಗ್ಗೆ ಇವತ್ತು ಬರೆಯುತ್ತಿದ್ದೇನೆ.ನನಗೆ ತುಂಬಾ ಸುಲಭ ಎನಿಸಿದ ಕಾರಣ ಅದನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ.



ಬೇಕಾಗುವ ಸಾಮಗ್ರಿಗಳು
ಕರಿಯಲು ಎಣ್ಣೆ
ತೆಂಗಿನಕಾಯಿ  ತುರಿ-ಸ್ವಲ್ಪ
ನೆನಸಿದ ಅಕ್ಕಿ-೩-೪ ಗಂಟೆಗಳಷ್ಟು -ಸ್ವಲ್ಪ
ಬೆಲ್ಲ-ಸ್ವಲ್ಪ
ಚುರುಮುರಿ ಅಥವಾ ಮಂಡಕ್ಕಿ-ಸ್ವಲ್ಪ
ಉಪ್ಪುರುಚಿಗೆ ತಕ್ಕಷ್ಟು
ನೀರು
ಅಕ್ಕಿ ಹಿಟ್ಟು-ಸ್ವಲ್ಪ


ಮಾಡುವ ವಿಧಾನ
ಮೊದಲು ಎಣ್ಣೆಯನ್ನು ಕಾಯಲು ಇಡಿ.ಈ ಸಮಯದಲ್ಲಿ ಒಂದು ಮಿಕ್ಸಿ ಜಾರ್ ಗೆ ನೆನಸಿದ ಅಕ್ಕಿ,ತೆಂಗಿನ ಕಾಯಿ ತುರಿ,ಬೆಲ್ಲ, ಮಂಡಕ್ಕಿ,ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೇಕಾದಲ್ಲಿ ಸ್ವಲ್ಪ  ನೀರು   ಸೇರಿಸಿ ನುಣ್ಣಗೆ ರುಬ್ಬಬೇಕು.ನಂತರ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ ಗಟ್ಟಿಯಾಗಿ ಉಂಡೆಗಳನ್ನಾಗಿ ಮಾಡಬೇಕು.ನಂತರ ಈ ಉಂಡೆಗಳನ್ನು ವಡೆಯಂತೆ ಕೈಯಲ್ಲಿ ತಟ್ಟಿ ನಂತರ ಅದನ್ನು ಕಾದ ಎಣ್ಣೆಯಲ್ಲಿ ಕರಿಯಬೇಕು.ಈಗ ತಟ್ಟಪ್ಪ ತಿನ್ನಲು ರೆಡಿ.   




Monday, March 21, 2011

life is a gift

                                                   LIFE IS A GIFT FROM GOD
once upon a time dare lived a rich man.aftr many days he was blessed vith d baby boy.all in family were happy.but in a young age only,d baby boy died.rich man's wife was inconsolable.she wept day n night in d memory of her child.but rich man was as usual.
his wife thought her husband is out of his senses in grief.one day she asked him 4 reason.dat time her husband's reply astonished her.her husband replied he had a dream long ago.n he is still thinking abt dat.his wife asked vat d dream was?
rich man said "in my dream i was a king havin lot of children.but all of dem died infront of my own eyes.so now i'm confused whether 2 cry for dem or 4 d son now i hav lost."
at dat time,his wife understud d meaning of her husband's words.its only a lie dat v r griefing 4 our relatives.v hav spent lots of births lik dis.so THIS LIFE IS A GIFT 4M GOD .IT IS HIS WILL 2 TAKE IT 4M US OR RETAIN IT.
MORAL:LIFE IS A GIFT 4M GOD.

how 2 prepare raita?

                                preparation of raita
dis was telecasted in T.V.i found it easy n i'm givin d details


ingredients needed----
curd
grated cocunut
green chillies(finely chopped)
onions(finely chopped)
salt to taste
all r required in d proposition ,we want 2 prepare d raita.if raita quantity is less,den lesser amounts of ingredients r required.


method-----
firstly take  curd in a bowl n beat it so dat it is free flowing.aftr dis,add grated cocunut 2 it.mix it .den add green chillies,onions(all r finely chopped).den lastly add salt 2 taste.now raita is ready 2 taste.

Sunday, March 20, 2011

Loyality

                                                   Loyality
once upon a time dare was a thief lived in a village.but he didnt tell villagers dat he's a thief.he said dat he is doin business in foraway place.n  he has 2 go dare in nights also.n villagers didnt doubt him.he had a pet dog.he luked aftr it very well.
nearby thief's house,dare was rich man's house.n even he had a dog.he loved his dog.thief's dog n rich man's dog r frnds.dey wud share deir feelings vith each other.one day there was burglary in rich man's house.no one was known 2 dat one.even his dog also.
rich man was very angry vith his dog.he beated it severly 4 not informing him.he didnt giv fud also 2 it.so dis dog met thief's dog n told whole story n wept.by cing his frnd's plight,thief's dog felt very sad.thief's dog dcided 2 help d other dog.
it returned home n was surprised 2 c dat his master had looted rich man's house.n he arranged all d looted things in his house.thief's dog felt angry over his master.but vat he can do?so next day ,ven he met rich man's dog he informed him dat he knows d culprit of burglary of his master's house.
rich man's dog was very happy.he urged d other dog 2 name d culprit.but thief's dog said it wont.surprised ,rich man's dog asked 4 reason.dat time thief's dog said dat"i am loyal 2 my master.my master looted ur master's house.but i vil not allow u 2 tell dis 2 anyone.though he is a thief,he is my master.n i cant betray him"
MORAL:LOYALITY IS MOST IMPORTANT QUALITY IN LIFE

Breaking newz!

                                             BREAKING NEWS
pakistan has won a important match
They correctly guessed d action of pitch;
pakistan has come up clean 4m  d shadows of spot fixing...
thanks to Electricity Board for allowing me 2 watch d game without load shedding!

Saturday, March 19, 2011

ಮಾನವೀಯತೆ

                                   ಮಾನವೀಯತೆ
ಇದು ಬಾಬು ರಾಜೇಂದ್ರ ಪ್ರಸಾದ್ ಅವರು ನಮ್ಮ ರಾಷ್ಟ್ರದ ರಾಷ್ಟ್ರಪತಿಯಾಗಿದ್ದಾಗ ನಡೆದ ಘಟನೆ.ಅವರು ತುಂಬಾ ಸರಳ ವ್ಯಕ್ತಿತ್ವ ಹೊಂದಿದ್ದರು.ಅವರನ್ನು ನೋಡಿದರೆ ಅವರು ರಾಷ್ಟ್ರಪತಿ ಎಂದು ಹೇಳಲು ಸಾಧ್ಯವಿರಲಿಲ್ಲ.ಹೀಗೆ ಒಂದು ದಿನ ಒಮ್ಮೆ ಅವರಿಗೆ ರೈಲಿನಲ್ಲಿ ತಮ್ಮ ಊರಿಗೆ ಪ್ರಯಾಣಿಸಬೇಕಾಗಿ ಬಂತು.ಅವರು ಸಾಮಾನ್ಯ ದರ್ಜೆಯಲ್ಲೇ ಪ್ರಯಾಣಿಸುತ್ತಿದ್ದರು.ಇಂದಿನ ರಾಜಕಾರಣಿಗಳಂತಲ್ಲ
ಆದರೆ ಆಗ ಬೇಸಗೆ ಕಾಲ.ತುಂಬಾ ಸೆಕೆ.ರೈಲು ಒಂದು ನಿಲ್ದಾಣದಲ್ಲಿ ನಿಂತಾಗ ಜನರು ನೀರಿಗಾಗಿ ಅಂಗಡಿಗೆ ಅಲೆಯುತ್ತಿದ್ದರು.ಆದರೆ ಎಲ್ಲಾ ನೀರಿನ ಸಂಗ್ರಹ ಮುಗಿದಿತ್ತು.ಹೀಗಾಗಿ ಜನರು ತಮ್ಮಲ್ಲೇ ಕಚ್ಚಾಡುತ್ತಿದ್ದರು.ಹೀಗಿರುವಾಗಲೇ ರಾಜೇಂದ್ರ ಪ್ರಸಾದ್ ಅವರ ಪಕ್ಕದಲ್ಲಿ ಕುಳಿತ್ತಿದ್ದ ಮಹಿಳೆಯ ಮಗು ನೀರಿಗಾಗಿ ಅಳಲು ಪ್ರಾರಂಭಿಸಿತು.ಮಹಿಳೆಯ ಬಳಿ ನೀರು ಇರಲಿಲ್ಲ.
ಅವಳಿಗೆ ಏನು ಮಾಡಬೇಕೆಂದೇ ತೋಚಲಿಲ್ಲ.ಆಗ ರಾಜೇಂದ್ರ ಪ್ರಸಾದ್ ಅವರು ತಮ್ಮ ಬಳಿ ಇದ್ದ ನೀರನ್ನು ಆ ಮಹಿಳೆಗೆ
ನೀಡಿದರು.ಅದು ಅವರ ಬಳಿ ಇದ್ದ ಸ್ವಲ್ಪವೇ ನೀರು.ಮಹಿಳೆ  ಮೊದಲು ಹಿಂಜರಿದರೂ ರಾಜೇಂದ್ರ ಪ್ರಸಾದ್ ಅವರ ಆಗ್ರಹಕ್ಕೆ ಮಣಿದು ನೀರನ್ನು ತೆಗೆದುಕೊಂಡು ಮಗುವಿಗೆ ಕುಡಿಸಿದಳು.ಮಗು ಶಾಂತವಾಯಿತು.ಆಗ ರಾಜೇಂದ್ರ ಪ್ರಸಾದ್ ಅವರ ಸಹ ಪ್ರಯಾಣಿಕರಲ್ಲಿ ಒಬ್ಬ ಅವರನ್ನು ಪ್ರಶ್ನಿಸಿದ.
"ನಿಮ್ಮ ಬಳಿ ಇರುವ ಸ್ವಲ್ಪ ನೀರನ್ನೂ ಮಗುವಿಗೆ ಕೊಟ್ಟಿರಿ.ಇನ್ನು ನೀರು ಸಿಗುವುದಿಲ್ಲ.ಏಕೆ ಹೀಗೆ ಮಾಡಿದಿರಿ?"ಎಂದನು.ಆಗ ರಾಜೇಂದ್ರ ಪ್ರಸಾದ್ ಅವರು "ಮಗುವಿಗೆ ಕುಡಿಯಲು ನೀರಿನ ಅವಶ್ಯಕತೆ ತುಂಬಾ ಇತ್ತು.ನಾನು ತಡೆದು ಕೂರಬಲ್ಲೆ.ಆದರೆ ಮಗು?ಮಾನವೀಯತೆಯಿಂದ ನಾನು ನೀರನ್ನು ನೀಡಿದೆ"ಎಂದರು.ಆ ಸಹಪ್ರಯಾಣಿಕನಿಗೆ ಅವರು ಭಾರತದ ರಾಷ್ಟ್ರಪತಿ ಎಂದು ತಿಳಿದು ಅವನ ಬಾಯಿಯಿಂದ ಮಾತೇ ಹೊರಡಲಿಲ್ಲ.

Friday, March 18, 2011

ಆನಂದದ ಅನುಭೂತಿ

                                           ಆನಂದದ ಅನುಭೂತಿ
ಒಮ್ಮೆ ತಾಯಿಯು ಮಗುವಿಗೆ ಊಟ ಮಾಡಿಸುತ್ತಿರುತ್ತಾಳೆ.ಅಲ್ಲೇ ಪಕ್ಕದ ಮರದಲ್ಲೇ ಒಂದು ಗುಬ್ಬಚ್ಚಿ ಸಂಸಾರವೂ ಇರುತ್ತದೆ.ಆ ಹಕ್ಕಿಗಳಿಗೆ ಆವತ್ತು ತಮ್ಮ ಮರಿಗಳಿಗೆ ನೀಡಲು ಏನೂ ಸಿಕ್ಕಿರುವುದಿಲ್ಲ.ಅವುಗಳು ಅತ್ತಿಂದ ಇತ್ತ ಹಾರುತ್ತಿರುತ್ತವೆ.ಇದನ್ನು ಗಮನಿಸಿದ ತಾಯಿ ತನ್ನ ಮಗುವಿನ ಊಟದಲ್ಲಿಯೇ ಸ್ವಲ್ಪ ಭಾಗವನ್ನು ಕೆಳಗೆ ಚೆಲ್ಲುತ್ತಾಳೆ.ಇದನ್ನು ಹಕ್ಕಿಗಳು ಗಮನಿಸುತ್ತವೆ.ಆದರೂ ಅವುಗಳಿಗೆ ಹತ್ತಿರ ಬರಲು ಹೆದರಿಕೆ.
ಆದರೂ ತಾಯಿ ಹಕ್ಕಿ ತನ್ನ ಮರಿಗಳ ಗೋಳಾಟ ನೋಡಲಾಗದೆ ಚೆಲ್ಲಲಾದ ಅನ್ನದ ಬಳಿ ಬರುತ್ತದೆ.ಏನೂ ಅಪಾಯವಿಲ್ಲದನ್ನು ಗಮನಿಸಿ ಅಲ್ಲಿದ್ದ ಅನ್ನವನ್ನು ಹೆಕ್ಕಿಕೊಂಡು ಹೋಗಿ ತನ್ನ ಮರಿಗಳಿಗೆ ಉಣಿಸುತ್ತದೆ.ಈಗ ಮಗುವಿನ ತಾಯಿಗೂ ಸಂತಸ.ತನ್ನ ಮರಿಗಳ ಹಸಿವು ನೀಗಿತೆಂದು ತಾಯಿ ಗುಬ್ಬಿಗೂ ಆನಂದ.ಇದುವೇ ಆನಂದದ ಅನುಭೂತಿ

ತಾಯಿಯೇ ದೇವರು

                                ತಾಯಿಯೇ ದೇವರು
ಒಂದು ಊರಿನಲ್ಲಿ ಒಂದು ಸಂಸಾರ.ತಂದೆ ಹತ್ತಿರದ ಶಾಲೆಯಲ್ಲಿ ಮೇಷ್ಟ್ರು.ತಾಯಿ ಗೃಹಿಣಿ.ಒಂದು ಸಣ್ಣ ತೊಟ್ಟಿಲ ಮಗುವೂ ಇರುತ್ತದೆ.ಹೀಗಿರಲು ಒಂದು ದಿನ ತಂದೆ ಶಾಲೆಗೆ ಹೋಗುತ್ತಾನೆ.ತಾಯಿ ಮಗುವನ್ನು ತೊಟ್ಟಿಲಲ್ಲಿ ತೂಗುತ್ತಿರುತ್ತಾಳೆ.ಮಗು ಸ್ವಲ್ಪ ಹೊತ್ತಿನಲ್ಲಿ ನಿದ್ದೆ ಮಾಡುತ್ತದೆ.ಅದನ್ನು ಗಮನಿಸಿದ ತಾಯಿ ಬಾವಿಯಿಂದ ನೀರು ಸೇದಿ ತರಲು ತೆರಳುತ್ತಾಳೆ.ಆಗ ಪಕ್ಕದ ಮನೆಗೆ ಬೆಂಕಿ ಹತ್ತಿಕೊಳ್ಳುತ್ತದೆ.
ಕ್ಷಣಮಾತ್ರದಲ್ಲಿ ಅದು ಮಗುವಿದ್ದ ಮನೆಗೂ ಹಬ್ಬುತ್ತದೆ.ತಾಯಿಗೆ ಇದರ ಅರಿವೇ ಇಲ್ಲ.ಮನೆಯು ಬೆಂಕಿಗೆ ತುತ್ತಾಗುತ್ತಿರುವುದನ್ನು ಗಮನಿಸಿದ ನೆರೆಹೊರೆಯ ಜನರು ಅಲ್ಲಿ ಸೇರುತ್ತಾರೆ.ಆದರೆ ಎಲ್ಲರಿಗೂ ಮನೆಯ ಒಳ ಹೋಗಲು ಅಂಜಿಕೆ.
ತನ್ನ ಮನೆಯ ಎದುರು ಜನರು ಸೇರಿರುವುದನ್ನು ಗಮನಿಸಿದ ತಾಯಿ ಓಡೋಡಿ ಬರುತ್ತಾಳೆ.ಮನೆ ಬೆಂಕಿಗೆ ಸಿಲುಕಿರುವುದನ್ನು  ಗಮನಿಸುತ್ತಾಳೆ.ತನ್ನ ಮಗು ಮನೆ ಒಳಗೆ ತೊಟ್ಟಿಲಲ್ಲಿ ಮಲಗಿರುವುದು ಆಕೆಗೆ ನೆನಪಾಗುತ್ತದೆ.ಕೂಡಲೇ ಅಲ್ಲಿದ್ದವರ ಬಳಿ ತನ್ನ ಮಗುವನ್ನು ಉಳಿಸುವಂತೆ ಬೇಡುತ್ತಾಳೆ.ಆದರೆ ಯಾರೂ ಅದಕ್ಕೆ ಸಿದ್ಧವಾಗುವುದಿಲ್ಲ.ಬೆಂಕಿ ಜೋರಾಗುತ್ತಲೇ ಇದೆ.ಆದರೆ ಯಾರೂ ಸಹಾಯ ಮಾಡುತ್ತಿಲ್ಲ.
ತಾಯಿಗೆ ಮಗುವಿನದೇ ಚಿಂತೆ.ಆಕೆ ಮಗುವನ್ನು ಕಾಪಾಡಲು ಬೆಂಕಿಯ ಮಧ್ಯಯೇ ಮನೆ ಒಳಗೆ ನುಗ್ಗುತ್ತಾಳೆ.ಹೊಗೆ ಇಂದ ಕಣ್ಣು ಕಾಣದಿದ್ದರೂ ಮಗುವಿನ ತೊಟ್ಟಿಲ ಬಳಿ ಸಾಗುತ್ತಾಳೆ.ಮಲಗಿದ್ದ ಮಗುವನ್ನು ಕೈಯಲ್ಲಿ ಎದೆಗೆ ಅವಚಿಕೊಂಡು ಹೊರಗೆ ಬರುತ್ತಾಳೆ.ಆ ಮಗುವೇ ನಮ್ಮ ಹೆಮ್ಮೆಯ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ನವರು.
ನೀತಿ:ತಾಯಿಗಿಂತ ಮಿಗಿಲಾದ ದೇವರಿಲ್ಲ.

ಅಂಗುಲಿಮಾಲನ ಕಥೆ

                                                          ಅಂಗುಲಿಮಾಲನ ಕಥೆ
ಭಗವಾನ್ ಬುದ್ಧ ಇದ್ದ ಕಾಲದಲ್ಲಿಯೇ ಅಂಗುಲಿಮಾಲ ಎನ್ನುವ ಕುಖ್ಯಾತ ದರೋಡೆಕೋರನೂ ಇದ್ದ.ಆತ ಕಾಡಿನಲ್ಲಿ ಹಾದುಹೋಗುತ್ತಿದ್ದ ಜನರನ್ನು ಸುಲಿಗೆ ಮಾಡುತ್ತಿದ್ದ.ಅಷ್ಟೇ ಅಲ್ಲದೆ ಅವರ ಕೈ ಬೆರಳುಗಳನ್ನು ಕತ್ತರಿಸಿ ಅದನ್ನು ತನ್ನ ಕೊರಳಿಗೆ ಹಾರವನ್ನಾಗಿ ಮಾಡಿ ಹಾಕಿಕೊಳ್ಳುತ್ತಿದ್ದ.ಹೀಗಾಗಿಯೇ ಅವನಿಗೆ ಅಂಗುಲಿಮಾಲ ಎನ್ನುವ ಹೆಸರು ಬಂತು.ಹೀಗಿರಲು ಒಮ್ಮೆ ಭಗವಾನ್ ಬುದ್ಧರಿಗೆ ಕಾಡಿನ ಮೂಲಕ ಹಾದುಹೋಗಬೇಕಾಗಿ ಬಂತು.
ಅವರ ಶಿಷ್ಯರೆಲ್ಲರೂ ಭಯಗ್ರಸ್ಥರಾಗಿ ಹಿಂದೆ ಸರಿದರು.ಬುದ್ಧರವರಿಗೂ ಅಂಗುಲಿಮಾಲನ ಬಗ್ಗೆ ತಿಳಿಸಿದರು.ಆದರೆ ಬುದ್ಧ ತಮ್ಮ ನಿರ್ಧಾರದಲ್ಲಿ ಆಚಲರಾಗಿದ್ದರು.ಅವರು ಪ್ರಯಾಣಿಸುತ್ತಿದ್ದಾಗ ಶಿಷ್ಯರು ಹೆದರಿದಂತೆ ಅಂಗುಲಿಮಾಲ ಬುದ್ಧನಿಗೆ ತಡೆ ಒಡ್ಡಿದ.ಆದರೆ ಬುದ್ಧ ನಸುನಗುತ್ತಲೇ ಆತನಿಗೆ ತನ್ನ ಬಳಿ ಇದ್ದ ಎಲ್ಲಾ ವಸ್ತುವನ್ನೂ ನೀಡಿದರು.ಅಂಗುಲಿಮಾಲನಿಗೆ ಆಶ್ಚರ್ಯವೋ ಆಶ್ಚರ್ಯ.
ಆತ ಬುದ್ಧ ಅವರ ಮಾತಿಗೆ ಮನಸೋಲುತ್ತಾನೆ.ನಂತರ ಅವರಿಗೆ ಏನು ಬೇಕೆಂದು ಕೇಳುತ್ತಾನೆ.ಆಗ ಬುದ್ಧ ಅವರು ಎದುರಿಗಿದ್ದ ಮರವನ್ನು ತೋರಿಸಿ ಅದರ ೫ ಎಲೆಗಳನ್ನು ತಂದುಕೊಡುವಂತೆ ಕೇಳುತ್ತಾರೆ.ಅಂಗುಲಿಮಾಲನಿಗೆ ನಗಲು ಬಂದರೂ ಆತ ಎಲೆಗಳನ್ನು ಕಿತ್ತು ತಂದು ಬುದ್ಧನ ಕೈಯಲ್ಲಿ ಇಡುತ್ತಾನೆ.
ನಂತರ ಬುದ್ಧ ಅವರು ಅಂಗುಲಿಮಾಲನ ಬಳಿ ಅವನ್ನೆಲ್ಲ ಮಾತೆ ಸ್ವಸ್ಥಾನದಲ್ಲಿ ಇಡಲು ತಿಳಿಸುತ್ತಾರೆ.ಈಗ ಅಂಗುಲಿಮಾಲನಿಗೆ ಆಘಾತವಾಗುತ್ತದೆ.ಒಮ್ಮೆ ಕಿತ್ತ ಎಲೆಗಳನ್ನು ಮತ್ತೆ ಹೇಗೆ ಮರದಲ್ಲಿ ಇಡಲು ಸಾಧ್ಯ?ಎಂದು ಬುದ್ಧನನ್ನೇ ಪ್ರಶ್ನಿಸುತ್ತಾನೆ.ಆಗ ಬುದ್ಧ ಹೇಳುತ್ತಾನೆ "ಜೀವ ತೆಗೆಯುವುದು ತುಂಬಾ ಸುಲಭ.ಆದರೆ ಜೀವ ನೀಡುವುದು ಅಷ್ಟೇ ಕಷ್ಟ"ಎಂದು ತಿಳಿ ಹೇಳುತ್ತಾರೆ.
ಅವರ ಮಾತಿನ ಅಂತರ್ಯವನ್ನು ಅರ್ಥ ಮಾಡಿಕೊಂಡ ಅಂಗುಲಿಮಾಲ ಅವರ ಶಿಷ್ಯನಾಗುತ್ತಾನೆ.ತನ್ನ ಕೆಟ್ಟ ಕೆಲಸಗಳಿಗೆ ಪಶ್ಚಾತ್ತಾಪ  ಪಡುತ್ತಾನೆ.

Wednesday, March 16, 2011

ಚಟ್ನಿ ಮಾಡುವುದು ಹೇಗೆ?

                                           ಚಟ್ನಿ ಮಾಡುವುದು ಹೇಗೆ?
ಟಿ.ವಿ.ಯಲ್ಲಿ ನೋಡಿದ ಚಟ್ನಿ ತಯಾರಿಸುವಿಕೆಯ ಬಗ್ಗೆ ಈಗ ತಿಳಿದುಕೊಳ್ಳೋಣ



ಬೇಕಾಗುವ ಸಾಮಗ್ರಿಗಳು
 
ಹಸಿ ಮೆಣಸಿನಕಾಯಿ-೫
ಹಸಿ ತೆಂಗಿನಕಾಯಿ ತುರಿ-೧ ಕಪ್
ಹುರಿಗಡಲೆ-ಸ್ವಲ್ಪ
ಹುಣಸೆ ಹಣ್ಣಿನ ರಸ-ಸ್ವಲ್ಪ
ಕೊತ್ತಂಬರಿ ಸೊಪ್ಪು-ಸ್ವಲ್ಪ
ಶುಂಟಿ ಪೇಸ್ಟ್ -ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ಕರಿಬೇವಿನ ಸೊಪ್ಪು-ಸ್ವಲ್ಪ


ಮಾಡುವ ವಿಧಾನ

ಮೊದಲು ಗ್ಯಾಸ್ ಹೊತ್ತಿಸಿ ಅದರ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ .ಅದರಲ್ಲಿ ಈಗ ಹಸಿ ಮೆಣಸಿನ ಕಾಯಿ ಯನ್ನು ಫ್ರೈ ಮಾಡಿ.ನಂತರ ಬಾಣಲೆ ಖಾಲಿ ಮಾಡಿ ಈಗ ಅದಕ್ಕೆ ತೆಂಗಿನಕಾಯಿ ತುರಿ ಹಾಕಿ ಬಿಸಿ ಮಾಡಿ.ಈಗ ಫ್ರೈ ಮಾಡಿದ ಹಸಿ ಮೆಣಸಿನ ಕಾಯಿ ಮತ್ತು ಬಿಸಿ ಮಾಡಿದ ತೆಂಗಿನ ಕಾಯಿ ತುರಿ ಇವೆರಡನ್ನೂ ಒಂದು ಮಿಕ್ಸಿ ಜಾರ್ ಗೆ ಹಾಕಿ.ನಂತರ ಇದಕ್ಕೆ ಹುರಿಗಡಲೆ,ಹುಣಸೆ ಹಣ್ಣಿನ ರಸ,ಶುಂಟಿ ಪೇಸ್ಟ್,ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕತ್ತರಿಸಿದ ಕರಿಬೇವಿನ ಸೊಪ್ಪು ಹಾಗು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನುಣ್ಣಗೆ ರುಬ್ಬಿ.
ಹೀಗೆ ತಯಾರಾದ ಚಟ್ನಿಗೆ ಸಾಸಿವೆಯ ಒಗ್ಗರಣೆ ನೀಡಿ.ಈಗ ದೋಸೆಯ ಜೊತೆ ತಿನ್ನಲು ಚಟ್ನಿ ರೆಡಿ.

Monday, March 14, 2011

ಬೆಂಕಿ ಮತ್ತು ಹೊಗೆ

                                          ಬೆಂಕಿ ಮತ್ತು ಹೊಗೆ
ಒಂದೂರು.ಅಲ್ಲಿ ಒಂದು ಕುಟುಂಬ.ಅಲ್ಲಿ ಗಂಡ,ಹೆಂಡತಿ,ಇಬ್ಬರು ಮಕ್ಕಳು ಇದ್ದರು.ಹೆಂಡತಿಗೆ ಗಂಡ ತನ್ನ ಬಗ್ಗೆ ಅಕ್ಕರೆ ತೋರಿಸುತ್ತಿಲ್ಲವೆಂದು ಅಸಮಾಧಾನ.ಹೀಗಿರುವಾಗ ಒಮ್ಮೆ ಗಂಡ ದೂರದೂರಿಗೆ ಹೋಗಲು ನಿಶ್ಚಯಿಸುತ್ತಾನೆ.ತನ್ನ ಹೆಂಡತಿಯನ್ನು ಕರೆದೊಯ್ಯಲು ನಿರ್ಧರಿಸುತ್ತಾನೆ.ಮಕ್ಕಳನ್ನು ಕೆಲಸದವಳ ಬಳಿ ಬಿಡಲು ನಿರ್ಧರಿಸುತ್ತಾರೆ.ಅವರಿಗೆ ಶಾಲೆ ತಪ್ಪುತ್ತದೆ ಎಂಬ ಕಾರಣಕ್ಕೆ.
ಹೀಗೆ ಅವರು ಒಂದು ದಿನ ಸಂಜೆ ಹೊರಡಲು ನಿಶ್ಚಯಿಸುತ್ತಾರೆ.ಹಾಗೆ ಅವರು ಹೊರಟಾಗ ಟ್ರಾಫಿಕ್ ಸಮಸ್ಯೆ ಇಂದಾಗಿ ತುಂಬಾ ತಡ  ಆಗುತ್ತದೆ.ಕೊನೆಗೆ ಅವರು ಮನೆಗೆ ಹಿಂತಿರುಗಲು ನಿಶ್ಚಯಿಸುತ್ತಾರೆ.ಹಾಗೆ ಹಿಂತಿರುವಾಗ ತಮ್ಮ ಮನೆ ಬಳಿಯ ಮನೆ ಬೆಂಕಿ ಅವಘಡಕ್ಕೆ ತುತ್ತಾಗಿರುವುದು ಗೊತ್ತಾಗುತ್ತದೆ.ಗಂಡ ಇಳಿದು ಅದೇನೆಂದು ನೋಡಲು ನಿಶ್ಚಯಿಸುತ್ತಾನೆ.ಆದರೆ ಹೆಂಡತಿ ತಡೆಯುತ್ತಾಳೆ.
ಆದರೂ ಗಂಡ ಬೆಂಕಿ ಹೊತ್ತಿಕೊಂಡ ಮನೆಗೆ ಹೊರಡಲು ಸಿದ್ಧವಾಗುತ್ತಾನೆ.ಅಲ್ಲಿ ಓರ್ವ ಮಹಿಳೆಯ ಕೂಗು ಕೇಳುತ್ತದೆ.ಒಳಗೆ ಮಕ್ಕಳಿದ್ದಾರೆ.ಕಾಪಾಡಿ ಎಂದು.ಕೂಡಲೇ ಗಂಡ ಹಿಂದು-ಮುಂದು ನೋಡದೆ ಮನೆಯೊಳಗೆ ಧಾವಿಸುತ್ತಾನೆ.ಅಲ್ಲಿ ಇಬ್ಬರು ಮಕ್ಕಳು ಬೆಂಕಿಯಲ್ಲಿ ಸಿಲುಕಿ ಹಾಕಿಕೊಂಡಿರುತ್ತಾರೆ.ಆದರೆ ಎಲ್ಲ ಕಡೆ ಹೊಗೆ.ಗಂಡನಿಗೆ ದಾರಿಯೂ ಸರಿಯಾಗಿ ಕಾಣಿಸುವುದಿಲ್ಲ.ಆದರೂ ತನ್ನ ಜೀವದ ಹಂಗು ತೊರೆದು ಆತ ಮಕ್ಕಳನ್ನು ಪಾರು ಮಾಡುತ್ತಾನೆ.
ಮಕ್ಕಳನ್ನು ಹೊರಗೆ ಸುರಕ್ಷಿತವಾಗಿ ಕರೆದು ತರುತ್ತಾನೆ.ಬೆಳಕಿನಲ್ಲಿ ನೋಡಿದಾಗ ಅವರು ಆತನ ಮಕ್ಕಳೇ ಆಗಿರುತ್ತಾರೆ.ಇದು ಅವನ ಆಶ್ಚರ್ಯಕ್ಕೆ ಕಾರಣವಾಗುತ್ತದೆ.ಮನೆಗೆ ಬಂದು ವಿಚಾರಿಸಿದಾಗ ಮನೆಯ ಕೆಲಸದವಳು ಬೆಂಕಿ ಹೊತ್ತಿದ್ದ ಮನೆಯಲ್ಲಿ ಮಕ್ಕಳನ್ನು ಆಟವಾಡಲು ಬಿಟ್ಟಿರುವುದು ತಿಳಿಯುತ್ತದೆ.ಒಂದು ವೇಳೆ ಆತ ಮಕ್ಕಳನ್ನು ರಕ್ಷಿಸದೇ ಹೋಗಿದ್ದರೆ ಆತ ತನ್ನ ಮಕ್ಕಳನ್ನೇ ಕಳೆದುಕೊಳ್ಳಬೇಕಾಗುತ್ತಿತ್ತು

Saturday, March 12, 2011

ವೀರಭದ್ರನ ಜನನ

                                               ವೀರಭದ್ರನ ಜನನ
ಸತಿ ದಕ್ಷ ಪ್ರಜಾಪತಿಯ ಮಗಳು.ಅವಳು ಪ್ರಾಯಕ್ಕೆ ಬಂದಾಗ ದಕ್ಷನು ಆಕೆಯ ವಿವಾಹಕ್ಕಾಗಿ ಸ್ವಯಂವರವನ್ನು ಏರ್ಪಡಿಸುತ್ತಾನೆ.ಅವನು ಎಲ್ಲಾ ದೇವತೆಗಳನ್ನು ಆಹ್ವಾನಿಸುತ್ತಾನೆ.ಆದರೆ ಶಿವನನ್ನು ಬಿಟ್ಟು.ಸತಿಯು ಮನದಲ್ಲೇ ಶಿವನನ್ನು ತನ್ನ ಪತಿಯಾಗಿ ಸ್ವೀಕರಿಸುತ್ತಾಳೆ.ಅವಳು ತನ್ನ ತಂದೆಯ ಬಳಿ ಶಿವನನ್ನು ಮದುವೆಯಾಗುವುದಾಗಿ ತಿಳಿಸುತ್ತಾಳೆ.ಆದರೆ ದಕ್ಷನು ಒಪ್ಪುವುದಿಲ್ಲ.
ಆದರೂ ಸತಿ ಶಿವನನ್ನು ಮದುವೆಯಾಗುತ್ತಾಳೆ.ಕೈಲಾಸಕ್ಕೆ ತೆರಳುತ್ತಾಳೆ.ಈ ಮಧ್ಯೆ ದಕ್ಷನು ಯಾಗ ಮಾಡಲು ಉದ್ದೇಶಿಸುತ್ತಾನೆ.ಆತ ಎಲ್ಲಾ ದೇವತೆಗಳನ್ನು ಆಹ್ವಾನಿಸುತ್ತಾನೆ.ಆದರೆ ಶಿವನಿಗೆ ಆಮಂತ್ರಣ ಇರುವುದಿಲ್ಲ.ಇದು ಸತಿಗೆ ಗೊತ್ತಾಗಿ ಆಕೆಗೆ ಬೇಜಾರಾಗುತ್ತದೆ.ಆಕೆಯು ಯಾಗ ಸ್ಥಳಕ್ಕೆ ತೆರಳಿ ತಂದೆಯ ಬಳಿ ಶಿವನಿಗೂ ಆಮಂತ್ರಣ ನೀಡಲು ವಿನಂತಿಸುತ್ತಾಳೆ.
ದಕ್ಷನು ಒಪ್ಪುವುದಿಲ್ಲ.ಇದರಿಂದ ಅವಮಾನಿತಳಾದ ಸತಿ ಅದೇ ಯಜ್ಞ ಕುಂಡಕ್ಕೆ ಬಿದ್ದು ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ.ಇದು ಶಿವನಿಗೆ ಗೊತ್ತಾಗುತ್ತದೆ.ಕ್ರೋಧದಿಂದ ಆತ ತನ್ನ ಕೂದಲನ್ನು ಕಿತ್ತುಕೊಂಡಾಗ ವೀರಭದ್ರನ ಜನನವಾಗುತ್ತದೆ.ಶಿವನು ವೀರಭದ್ರನಿಗೆ ದಕ್ಷನನ್ನು ಕೊಲ್ಲಲು ಆಜ್ಞಾಪಿಸುತ್ತಾನೆ.ಅಂತೆಯೇ ವೀರಭದ್ರನು ಹೊರಡುತ್ತಾನೆ.ಅವನನ್ನು ತಡೆಯಲು ಯತ್ನಿಸಿದವರನ್ನು ಆತನು ಸಂಹರಿಸುತ್ತಾನೆ.ಅಲ್ಲಿದ್ದ  ದೇವತೆಗಳು ಆತನಿಗೆ ವಿರೋಧ ಉಂಟುಮಾಡಿದಾಗ ಅವರನ್ನೂ ಕೊಲ್ಲುತ್ತಾನೆ.
ನಂತರ ದಕ್ಷನನ್ನೂ ಕೊಲ್ಲುತ್ತಾನೆ.ದೇವತೆಗಳ ಸಂಹಾರದ ಸುದ್ದಿ ಬ್ರಹ್ಮನಿಗೆ ತಿಳಿಯುತ್ತದೆ.ಆತ ಬಂದು ಶಿವನನ್ನು ಪ್ರಸನ್ನಗೊಳಿಸಲು ಸ್ತುತಿಸುತ್ತಾನೆ.ಆಗ ಶಿವನು ಪ್ರಸನ್ನಗೊಂಡು ಎಲ್ಲಾ ದೇವತೆಗಳನ್ನು ಬದುಕಿಸುತ್ತಾನೆ.ದಕ್ಷನ ಶಿರದ  ಜಾಗದಲ್ಲಿ ಮೇಕೆಯ ತಲೆಯನ್ನು ಇಡುತ್ತಾನೆ.ಹೀಗೆ ಜೀವದಾನ ಪಡೆದ ದಕ್ಷ ಮತ್ತೆ ಯಾಗ ಮಾಡಲು ಆರಂಭಿಸುತ್ತಾನೆ.
ಆಗ ವಿಷ್ಣುವು ಬಂದು ಈ ಜಗದಲ್ಲಿ ಶಿವನೇ ಎಲ್ಲದಕ್ಕೂ ಕಾರಣನಾಗಿದ್ದಾನೆ. ಎಂದನು.ಇಗ ದಕ್ಷನು ಯಾಗಕ್ಕೆ ಶಿವನಿಗೂ ಆಮಂತ್ರಣವಿತ್ತು ಯಾಗವನ್ನು ಮುಗಿಸುತ್ತಾನೆ.

Friday, March 11, 2011

ಬಿಲ್ಲಿ ಬೆಕ್ಕಿನ ಸುಳಿವಿಲ್ಲ

                                       ಬಿಲ್ಲಿ ಬೆಕ್ಕಿನ ಸುಳಿವಿಲ್ಲ
ಕಂಪೌಂಡ್ ಮೇಲೆ ಬಿಲ್ಲಿ ಬೆಕ್ಕಿನ ಸುಳಿವಿಲ್ಲ
ಏನೋ ಒಂದು ಬಗೆಯ ಶೂನ್ಯತೆ ಆವರಿಸಿದೆ ಮನದಲ್ಲೆಲ್ಲ;
ಕರೆದಾಗಲೆಲ್ಲಾ ಹಿಂದೆ ತಿರುಗಿ ನನ್ನನ್ನು ನೋಡಿ ನಗುತ್ತಿತ್ತು
ಆದರೂ ಬೇರೆ ಬೆಕ್ಕಿನ ಜೊತೆ ಜಗಳವಾಡಿ ಪರೀಕ್ಷಿಸುತ್ತಿದೆ ತನ್ನ ತಾಕತ್ತು!

Wednesday, March 9, 2011

ಬೆಂಡೆಕಾಯಿಯ ಗಟ್ಟಿ ಬಜೆ ಮಾಡುವುದು

                               ಬೆಂಡೆಕಾಯಿಯ ಗಟ್ಟಿ ಬಜೆ ಮಾಡುವುದು
ಟಿ.ವಿ.ಯಲ್ಲಿ ನೋಡಿದ ಬೆಂಡೆಕಾಯಿಯ ಗಟ್ಟಿ ಬಜೆ ಮಾಡುವುದನ್ನು ತಿಳಿದುಕೊಳ್ಳೋಣ.


ಬೇಕಾಗುವ ಸಾಮಗ್ರಿಗಳು
ಕಡಲೆ ಹಿಟ್ಟು-೧ ಕಪ್
ಉಪ್ಪು-ರುಚಿಗೆ ತಕ್ಕಷ್ಟು
ಸ್ವಲ್ಪ ಇಂಗು
ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ-೨ ರಿಂದ ೩
ಸಣ್ಣದಾಗಿ ಹೆಚ್ಚಿದ ಬೆಂಡೆಕಾಯಿ-೩ ರಿಂದ ೪
ಕರಿಯಲು ಎಣ್ಣೆ


ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು,ಉಪ್ಪು,ಇಂಗು,ಹಸಿ ಮೆಣಸಿನಕಾಯಿ,ಬೆಂಡೆಕಾಯಿ  ಮತ್ತು ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲಸಬೇಕು.ನಂತರ ಇದರಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಬೇಕು.ಈ ಹೊತ್ತಿನಲ್ಲಿ ಎಣ್ಣೆ ಕಾಯಲು ಇಡಬೇಕು.ಕಾದ ಎಣ್ಣೆಗೆ ಹೀಗೆ ಮಾಡಿಟ್ಟ ಉಂಡೆಗಳನ್ನು ಹಾಕಿ (ಬಜೆ) ಕರೆಯಬೇಕು.ಈಗ ಬೆಂಡೆಕಾಯಿಯ ಬಜೆ ತಿನ್ನಲು ರೆಡಿಯಾಗಿದೆ.

ಕಬಂಧ

                                                 ಕಬಂಧ
ಹಿಂದೆ ವಿಶ್ವಾವಸು ಎಂಬ ಗಂಧರ್ವ ಇದ್ದನು.ಆತ ಒಮ್ಮೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಅಮರತ್ವದ ವರವನ್ನು ಪಡೆದುಕೊಂಡನು.ಹೀಗೆ ತಾನು ಪಡೆದ ವರದ ಪ್ರಭಾವದಿಂದ ಹಾಗೂ ಇನ್ನು ತನ್ನನ್ನು ಯಾರೂ ಸೋಲಿಸಲಾರರು ಎಂಬ ಅಹಂಭಾವದಿಂದ ಮದೋನ್ಮತ್ತನಾದ ವಿಶ್ವಾವಸು ಇಂದ್ರನ ಮೇಲೆಯೇ ಯುದ್ಧಕ್ಕೆ ಬರುತ್ತಾನೆ.ಇದರಿಂದ ಕೋಪಗೊಂಡ ಇಂದ್ರ ತನ್ನ ವಜ್ರಾಯುಧದಿಂದ ವಿಶ್ವಾವಸುವಿನ ತಲೆ ಯನ್ನು ಆತನ ಶರೀರಕ್ಕೆ ಬರುವಂತೆ ಮಾಡುತ್ತಾನೆ.ಈಗ ವಿಶ್ವಾವಸು ಒಂದು ಕಣ್ಣು,೨ ಉದ್ದನೆಯ ಕೈಗಳು ಮತ್ತು ಶರೀರದಲ್ಲಿರುವ ತಲೆ ಇವುಗಳಿಂದಾಗಿ ಭಯಂಕರವಾಗಿ ಕಾಣುತ್ತಿರುತ್ತಾನೆ.
ಆಗ ಬುದ್ಧಿ ಬಂದ ವಿಶ್ವಾವಸು ತನಗೆ ಶಾಪವಿಮೋಚನೆ ಮಾಡಬೇಕೆಂದು ಇಂದ್ರನ ಬಳಿ ಬೇಡಿಕೊಂಡಾಗ ಇಂದ್ರ ಯಾವಾಗ ರಾಮನು ಆತನ ಉದ್ದವಾದ ಕೈಗಳನ್ನು ಕತ್ತರಿಸುತ್ತಾನೋ,ಆಗ ಅವನಿಗೆ ಶಾಪ ವಿಮೋಚನೆ ಆಗುವುದೆಂದು ತಿಳಿಸುತ್ತಾನೆ.ಇದಾದ ನಂತರ ಕಬಂಧ ಅರಣ್ಯಕ್ಕೆ ತೆರಳಿ ಅಲ್ಲಿ ರಾಮನ ಆಗಮನಕ್ಕೆ ಕಾಯುತ್ತಿರುತ್ತಾನೆ.ಆದರೆ ತನ್ನ ಹಿಂಸಾ ಪ್ರವೃತ್ತಿ ಅನ್ನು ಬಿಡಲಾಗದೆ ಅಲ್ಲಿದ್ದ ಸಾಧು-ಸಂತರನ್ನು ಹೆದರಿಸುತ್ತಿರುತ್ತಾನೆ.
ಹೀಗೆ ಕಾಲ ಉರುಳಿ ರಾವಣ ಸೀತೆಯನ್ನು ಅಪಹರಿಸುತ್ತಾನೆ.ರಾಮ ಸೀತೆಯನ್ನು ಹುಡುಕಿಕೊಂಡು ಕಬಂಧ ಇರುವ ಅರಣ್ಯಕ್ಕೆ ಬರುತ್ತಾನೆ.ಆದರೆ ಕಬಂಧನಿಗೆ ರಾಮನ ಪರಿಚಯವಿಲ್ಲ.ತನಗೆ ತಿನ್ನಲು ಆಹಾರ ಸಿಕ್ಕಿತೆಂದು ಸಂತಸಗೊಂಡ ಕಬಂಧ ಒಂದು ಕೈಯಲ್ಲಿ ರಾಮನನ್ನೂ,ಇನ್ನೊಂದು ಕೈಯಲ್ಲಿ ಲಕ್ಷ್ಮಣನನ್ನೂ ಹಿಡಿದುಕೊಳ್ಳುತ್ತಾನೆ.ಆತನ ಹಿಡಿತದಿಂದ ತಪ್ಪಿಸಿಕೊಳ್ಳಲು ರಾಮ-ಲಕ್ಷ್ಮಣರು ಬಹಳ ಹೆಣಗಾಡುತ್ತಾರೆ
ಕೊನೆಗೆ ರಾಮ ಕಬಂಧನ ಎರಡೂ ಕೈಗಳನ್ನು ಕತ್ತರಿಸುತ್ತಾನೆ.ಆಗ ಕಬಂಧ ಅವರಾರೆಂದು ಪ್ರಶ್ನಿಸಲು ತಾವು ರಾಮ-ಲಕ್ಷ್ಮಣ ರು ಎಂದು ಉತ್ತರಿಸಲು ಕಬಂಧನ ಶಾಪ ವಿಮೋಚನೆ ಆಗುತ್ತದೆ.ನಂತರ ಕಬಂಧ ರಾಮನಿಗೆ ಅಲ್ಲೇ ಅಡಗಿಕೊಂಡಿದ್ದ ಸುಗ್ರೀವನ ಬಗ್ಗೆ ತಿಳಿಸಿ,ಆತನ ಸಹಾಯದಿಂದ ಸೀತೆಯನ್ನು ಹುಡುಕಲು ತಿಳಿಸುತ್ತಾನೆ.ಹೀಗೆ ಭದ್ರವಾದ ಹಿಡಿತ ಹೊಂದಿರುವವರಿಗೆ ಕಬಂಧ ಬಾಹು ಎಂಬ ಹೆಸರು ಬಂತು.

Tuesday, March 8, 2011

ಸಿಟ್ಟನ್ನು ಹೇಗೆ ನಿಯಂತ್ರಿಸುವುದು?

                             ಸಿಟ್ಟನ್ನು ಹೇಗೆ ನಿಯಂತ್ರಿಸುವುದು?
ಹಿಂದೆ ಒಬ್ಬ ಶ್ರೀಮಂತನಿದ್ದ.ಆತನಿಗೆ ಒಬ್ಬಳೇ ಮಗಳು.ತುಂಬಾ ಸುಂದರಿ.ಆದರೆ ಆಕೆಯ ಮೂಗಿನ ತುದಿಯಲ್ಲೇ ಕೋಪ ಮತ್ತು ಸಿಟ್ಟು ಇರುತಿತ್ತು.ಇದು ಶ್ರೀಮಂತನಿಗೆ ಚಿಂತೆಗೆ ಕಾರಣವಾಗಿತ್ತು,ಮಗಳು ಎಲ್ಲರ ಬಳಿಯೂ ಜಗಳ ಕಾಯುತ್ತಿದ್ದಳು.ಎಲ್ಲರೂ ಆಕೆಗೆ ಹೆದರುತ್ತಿದ್ದರು.
ಹೀಗಿರುವಾಗ ಆ ಊರಿಗೆ ಓರ್ವ ಸನ್ಯಾಸಿ ಬಂದ. ತನ್ನ ಮಗಳ ಗುಣವನ್ನು ಸನ್ಯಾಸಿಗೆ ತಿಳಿಸಿ ಪರಿಹಾರ ಒದಗಿಸುವಂತೆ ಶ್ರೀಮಂತ ಮೊರೆಯಿಟ್ಟ.ಆಗ ಸನ್ಯಾಸಿ ನಾಳೆ ನಿನ್ನ ಮಗಳನ್ನು ಒಬ್ಬಳೇ ನನ್ನ ಬಳಿ ಕಳುಹಿಸು ಎಂದು ತಿಳಿಸಿದ.ಶ್ರೀಮಂತ ಆಗಲೆಂದ.
ಮರುದಿನ ಮಗಳು ಒಬ್ಬಳೇ ಸನ್ಯಾಸಿ ಬಳಿ ಹೋದಳು.ಆಮೇಲಿಂದ ಆಕೆಯ ವರ್ತನೆಯೇ ಬದಲಾಯಿತು.ಈಗ ಆಕೆ ಮಿತಭಾಷಿ ಆಗಿದ್ದಾಳೆ.ಸಿಟ್ಟನಂತೂ ಮಾಡುವುದೇ ಇಲ್ಲ.ಇದು ಶ್ರೀಮಂತನಿಗೆ ಆಶ್ಚರ್ಯಕ್ಕೆ ಕಾರಣವಾಯಿತು.ಆತ ಸನ್ಯಾಸಿ ಬಳಿ ಹೋಗಿ ಇದನ್ನು ಹೇಳಿ ಇದರ ರಹಸ್ಯವೇನೆಂದು ಕೇಳಿದ.
ಆಗ ಸನ್ಯಾಸಿ "ನಾನು ನಿನ್ನ ಮಗಳಿಗೆ ಒಂದು ನೀರನ್ನು ನೀಡಿದ್ದೆ.ಸಿಟ್ಟು ಬಂದಾಗ ಆ ನೀರನ್ನು ಬಾಯಿಯಲ್ಲಿ ಇಟ್ಟುಕೊಂಡು ೧೦ ನಿಮಿಷಗಳ ಕಾಲ ಮಾತನಾಡದೆ ಇರಬೇಕೆಂದು ಹೇಳಿದ್ದೆ.ಮಾತೇ ಆಡದೆ ಇದ್ದರೆ ಜಗಳವೆಲ್ಲಿಯದು?ಸಿಟ್ಟೂ ಶಾಂತವಾಗುತ್ತದೆ" ಎಂದನು.
ನೀತಿ:ಮಾತೇ ಮುತ್ತು, ಮಾತೇ ಮೃತ್ಯು.

ಆತ್ಮವಿಶ್ವಾಸ

                                                      ಆತ್ಮವಿಶ್ವಾಸ
ಒಂದು ದಾರಿಯಲ್ಲಿ ಒಂದು ಗರಿಕೆ ಹುಲ್ಲು ಬೆಳೆಯುತ್ತಿತ್ತು.ಆದರೆ ಅದನ್ನು ಗಮನಿಸದೆ ಅದನ್ನು ತುಳಿದೇ ಜನರು ಓಡಾಡುತ್ತಿದ್ದರು.ಹುಲ್ಲಿಗೆ ತಲೆ ಎತ್ತಿ ನಿಲ್ಲಲೂ ಆಗುತ್ತಿರಲಿಲ್ಲ.ಈ ಹುಲ್ಲಿನ ಕಷ್ಟವನ್ನು ಅಲ್ಲೇ ಮರದ ಮೇಲಿರುತ್ತಿದ್ದ ಒಂದು ಕಾಗೆ ದಿನವೂ ನೋಡುತ್ತಿತ್ತು.
ಆ ಕಾಗೆಗೆ ಈ ಹುಲ್ಲಿನ ಸ್ಥಿತಿಯು ಬಹಳ ಮೋಜೆನಿಸಿತು.ಅದು ಒಮ್ಮೆ ಹುಲ್ಲಿನ ಬಳಿ ಬಂದು ಅಪಹಾಸ್ಯ ಮಾಡಿ ನಕ್ಕಿತು."ನಿನ್ನಿಂದ ಬದುಕಲು ಸಾಧ್ಯವಿಲ್ಲ.ಪ್ರತಿ ಒಬ್ಬರೂ ನಿನ್ನನ್ನು ತುಳಿದು ಮುಂದೆ ಹೋಗುತ್ತಿದ್ದಾರೆ.ಆದರೂ ನೀನು ಇಲ್ಲೇ ಯಾಕೆ ಇರುವಿ?"ಎಂದು ದಿನವೂ ಅದರ ಸ್ಥಿತಿ ಬಗ್ಗೆ ಹಾಸ್ಯ ಮಾಡುತ್ತಿತ್ತು.ಆದರೆ ಹುಲ್ಲು ಒಂದು ದಿನವೂ ಕಾಗೆಗೆ ಮಾರುತ್ತರ ನೀಡಲಿಲ್ಲ.
ಹೀಗಿರುವಾಗ ಒಮ್ಮೆ ಕಾಗೆಗೆ ಎಲ್ಲೋ ಪ್ರಯಾಣ ಮಾಡಬೇಕಾಗಿ ಬಂತು.ಅದು ಸುಮಾರು ದಿನ ಊರಿನಲ್ಲಿ ಇರಲಿಲ್ಲ.ನಂತರ ಹಿಂದಿರುಗಿದಾಗ ಅದು ಮಾಡಿದ ಮೊದಲ ಕೆಲಸವೇ ಹುಲ್ಲಿನ ಸ್ಥಿತಿ ಏನಾಗಿದೆ ಎಂದು ನೋಡುವುದು.ಆದರೆ ಆಶ್ಚರ್ಯದ ವಿಷಯವೇನೆಂದರೆ ಈಗ ಆ ದಾರಿ ಪೂರ್ತಿ ಹುಲ್ಲಿನಿಂದ ಆವೃತವಾಗಿತ್ತು.
ಇದನ್ನು ಕಂಡ ಕಾಗೆಗೆ ಆಶ್ಚರ್ಯವೋ ಆಶ್ಚರ್ಯ.ಅದು ಹುಲ್ಲುಗಾವಲಿನ ಮೇಲೆ ಅಡ್ಡಾಡುತ್ತಿತ್ತು.ಈಗ ಅಲ್ಲಿ ಚಿಕ್ಕ ಮಕ್ಕಳು ಸಂಭ್ರಮದಿಂದ ಆಡುತ್ತಿದ್ದರು.ಆ ಹುಲ್ಲುಗಳಲ್ಲೇ ವಯಸ್ಸಾದಂತೆ ಕಾಣುತ್ತಿದ್ದ ಒಂದು ಹುಲ್ಲು ಕಾಗೆಯನ್ನು ಗುರುತಿಸಿ ಮಾತಿಗೆಳೆಯಿತು.
"ನೋಡಿದೆಯಾ ಕಾಕಣ್ಣ!ಅಂದು ನಾನು ಬದುಕುವುದೇ ಕಷ್ಟವೆಂದು ಹೇಳುತ್ತಿದ್ದೆ.ಆದರೀಗ ನನ್ನ ಸಂತತಿಯೇ ಎಷ್ಟೊಂದಾಗಿದೆ.ಯಾರನ್ನೂ ಹಾಗೆ ಕೀಳಾಗಿ ನೋಡಬಾರದು.ಅವರಲ್ಲೂ ಒಂದಲ್ಲ ಒಂದು ಶಕ್ತಿಯು ಅಡಗಿರುತ್ತದೆ.ಸಮಯ ಬಂದಾಗ ಅದು ಹೊರಕ್ಕೆ ಬಂದೇ ಬರುತ್ತದೆ"ಎಂದಿತು.
ಆಗ ಹುಲ್ಲಿನ ಆತ್ಮ ವಿಶ್ವಾಸದ ನುಡಿಗಳನ್ನು ಕೇಳಿ ಕಾಗೆ ನಾಚಿ ತಲೆ ತಗ್ಗಿಸಿತು.
ನೀತಿ:ಯಾರೂ ಕೀಳಲ್ಲ.

Sunday, March 6, 2011

ಶತಕದ ಸಂಭ್ರಮ

                                            ಶತಕದ ಸಂಭ್ರಮ

ಕ್ರಿಕೆಟ್ ಮೈದಾನದಲ್ಲಿ ಹರಿಸಿದಂತೆ ತೆಂಡೂಲ್ಕರ್ ರನ್ನುಗಳ ಹೊಳೆ
ನನ್ನ ಬ್ಲಾಗ್ ನಲ್ಲಿ ಆಗುತ್ತಿದೆ ನೂರರವರೆಗಿನ ಲೇಖನಗಳ ಸುರಿಮಳೆ;
ನನ್ನ ಸುಖ-ದುಃಖ ಹಂಚಿಕೊಳ್ಳಲು ಇದೊಂದು ಮುಕ್ತ ವೇದಿಕೆ
ನನ್ನ ಬ್ಲಾಗ್ ಓದಿದವರು ನನ್ನ ಭಾವನೆ ಅರಿತುಕೊಳ್ಳಲಿ ಎನ್ನುವುದೇ ನನ್ನ ಬೇಡಿಕೆ.




Friday, March 4, 2011

ಸಜ್ಜನರ ಸಂಗ

                                                          ಸಜ್ಜನರ  ಸಂಗ
ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದ.ಆತನಿಗೆ ಒಬ್ಬನೇ ಮಗ.ಆತನನ್ನು ಕಷ್ಟಗಳ ಅರಿವಾಗದಂತೆಯೇ ಬೆಳೆಸಿದ್ದ ಶ್ರೀಮಂತ.ಹೀಗಿರುವಾಗ ಒಮ್ಮೆ ಆತ ಖಾಯಿಲೆ ಬಿದ್ದು ಸಾವಿನಂಚಿಗೆ ಬರುತ್ತಾನೆ.ಆಗ ಆತ ತನ್ನ ಮಗನನ್ನು ಬಳಿಗೆ ಕರೆದು ನನ್ನ ಸಾವು ಸಮೀಪಿಸುತ್ತಿದೆ.ನನ್ನ ನಂತರ ನೀನು ಯಾವಾಗಲೂ ಸಜ್ಜನರ ಸಹವಾಸವನ್ನೇ ಮಾಡಬೇಕು.ಹಾಗೆಂದು ಮಾತು ಕೊಡು ಎಂದನು.ಮಗನು ಹಾಗೆಯೇ ಆಗಲೆಂದು ಮಾತು ಕೊಟ್ಟನು.ನಂತರ ಶ್ರೀಮಂತ ಸಾವನ್ನಪ್ಪಿದ.
ಆದರೆ ತನ್ನ ಕೈಗೆ ಅಧಿಕಾರ ಬಂದ ನಂತರ ಮಗ ತಂದೆಗೆ ಕೊಟ್ಟ ಮಾತನ್ನು ಮರೆತುಬಿಟ್ಟ.ಆತನ ಸುತ್ತ ಪೋಲಿ ಗೆಳೆಯರು ಹುಟ್ಟಿಕೊಂಡರು,ಅವರು ಇವನ ಹಣಕ್ಕೆ ಮರುಳಾಗಿ ಗೆಳೆಯರಾಗಿ ಬಂದವರು.ಅವರು ಮಗನಿಗೆ ದುಂದುವೆಚ್ಚ ಮಾಡಲು ಪ್ರೇರೇಪಿಸಿದರು..ಹೀಗೆ ಮಗನ ಸಂಪತ್ತೆಲ್ಲವೂ ಅಲ್ಪ ಸಮಯದಲ್ಲೇ ಕರಗಿಹೋಯಿತು.ಈಗ ಅವನು ಬೀದಿಗೆ ಬಿದ್ದ.ಆತ ನಂಬಿದ್ದ ಗೆಳೆಯರು ಅವನಿಗೆ ಕೈಕೊಟ್ಟರು.ಆಗ ಆತನಿಗೆ ತಂದೆ ಹೇಳಿದ್ದ ಮಾತಿನ ಅಂತರ್ಯದ ಅರಿವಾಯಿತು.
ನೀತಿ: ಸಜ್ಜನರ ಸಂಗ ಹೆಜ್ಜೇನು ಸವಿದಂತೆ

ಕೋಕೋ ಬರ್ಫಿ ಮಾಡುವುದು ಹೇಗೆ?

                                 ಕೋಕೋ ಬರ್ಫಿ ಮಾಡುವುದು ಹೇಗೆ?
ಟಿ.ವಿ.ಯಲ್ಲಿ ಪ್ರಸಾರವಾದ ಕೋಕೋ ಬರ್ಫಿ  ಮಾಡುವ ರೀತಿಯನ್ನು ತಿಳಿದುಕೊಳ್ಳೋಣ

ಬೇಕಾಗುವ ಸಾಮಗ್ರಿಗಳು
ಮಿಲ್ಕ್ ಪೌಡರ್ =೧ ಕಪ್
ಕೋಕೋ ಪೌಡರ್-೧ ಕಪ್
೧ ೧/೨ ಕಪ್ ಸಕ್ಕರೆ
ಸ್ವಲ್ಪ ಬೆಣ್ಣೆ
ಏಲಕ್ಕಿ ಪುಡಿ
ಸ್ವಲ್ಪ ಬಾದಾಮಿ ಚೂರುಗಳು ಮತ್ತು ಪಿಸ್ತಾ ಚೂರುಗಳು


ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ಮಿಲ್ಕ್ ಪೌಡರ್ ಮತ್ತು ಕೋಕೋ ಪೌಡರ್ ಹಾಕಿ ಚೆನ್ನಾಗಿ ಕಲಸಿ.ನಂತರ ಒಂದು ಪಾತ್ರೆಗೆ ಸಕ್ಕರೆ ಮುಳುಗುವಷ್ಟು ಮಾತ್ರ ನೀರು ಹಾಕಿ ಒಂದೆಳೆ ಪಾಕ ತಯಾರಿಸಿಕೊಳ್ಳಿ.ನಂತರ ಇದಕ್ಕೆ ಕೋಕೋ ಪೌಡರ್ ಮಿಶ್ರಣ ಹಾಕಿ.ಸ್ವಲ್ಪ ಬೆಣ್ಣೆ ಸೇರಿಸಿ.ಇದು ಪಾತ್ರೆಯ ಅಂಚು ಬಿಡುವವರೆಗೆ ಕೈಯಾಡಿಸುತ್ತಾ ಇರಿ.ನಂತರ ಅಂದರೆ ತಳ ಬಿಡುವ ಹಂತಕ್ಕೆ ಬಂದಾಗ ಇದಕ್ಕೆ ಏಲಕ್ಕಿ ಪುಡಿ ಮತ್ತು ಬಾದಾಮಿ ಹಾಗೂ ಪಿಸ್ತಾ ಚೂರುಗಳನ್ನು ಸೇರಿಸಿ.
ನಂತರ ಇದನ್ನು ಒಂದು ತುಪ್ಪ ಸವರಿದ ಪ್ಲೇಟ್ ಗೆ ವರ್ಗಾಯಿಸಿ ಅದು ತಣ್ಣಗಾದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ.ಈಗ ಕೋಕೋ ಬರ್ಫಿ ತಿನ್ನಲು ರೆಡಿ.

Thursday, March 3, 2011

ಉಡುಪಿ ಅನಂತೇಶ್ವರದ ಕಥೆ

                           ಉಡುಪಿ ಅನಂತೇಶ್ವರದ ಕಥೆ
ಹಿಂದೆ ತುಳುನಾಡನ್ನು ರಾಮಭೋಜ ಎಂಬ ರಾಜನು ಆಳುತ್ತಿದ್ದ.ಒಮ್ಮೆ ಆತನು ಯಾಗ ಮಾಡಲು ಸಂಕಲ್ಪಿಸಿ ಅದಕ್ಕಾಗಿ ಭೂಮಿಯನ್ನು ಅಗೆಯಲು ಆರಂಭಿಸಿದ.ಆಗ ಒಂದು ಘಟಸರ್ಪ ಪಿಕ್ಕಾಸಿಗೆ ಸಿಲುಕಿ ಸತ್ತು ಹೋಯಿತು.ಇದರಿಂದ ರಾಜನಿಗೆ ಸರ್ಪಡೋಷದ ಭೀತಿ ಉಂಟಾಯಿತು.ಆಗ ಕರಾವಳಿಯನ್ನು ಸೃಷ್ಟಿ ಮಾಡಿದ ಪರಶುರಾಮ ಅಲ್ಲೇ ಇದ್ದರು.ಅವರು ರಾಜನಿಗೆ ಅದೊಂದು ಅಸುರ,ಹಾಗಾಗಿ ಸರ್ಪದೋಷದ  ಭಯವಿಲ್ಲ ಎಂದರು.
ಆದರೆ ರಾಜನಿಗೆ ಸಮಾಧಾನವಾಗಲಿಲ್ಲ.ಕೊನೆಗೆ ಆತ ಉಡುಪಿಯ ೪ ದಿಕ್ಕಿನಲ್ಲಿ ೪ ನಾಗ ದೇವಸ್ಥಾನವನ್ನು ಕಟ್ಟಿಸಿದ.ಇಷ್ಟಕ್ಕೂ ಸುಮ್ಮನಾಗದೆ ಉಡುಪಿಯಲ್ಲಿ ಶಿವನ ದೇವಸ್ಥಾನವನ್ನೂ ಕಟ್ಟಿಸಿದ.ಆಗ ಪರಶುರಾಮರು ತಮ್ಮ ಸಾನಿಧ್ಯ ಅಲ್ಲಿ ಇರುವುದಾಗಿ ತಿಳಿಸಿದರು.ಹೀಗಾಗಿ ಆ ದೇವರು ಅನಂತೇಶ್ವರ  ಎಂದು ಪ್ರಸಿದ್ಧವಾಯಿತು.
ಉಡುಪ ಎಂದರೆ ಚಂದ್ರ.ದಕ್ಷ ಪ್ರಜಾಪತಿಯ ಯಾಗಕ್ಕೆ ಅಡ್ಡಿ ಉಂಟುಮಾಡಿದ ತಪ್ಪಿಗೆ ಚಂದ್ರನು ಉಡುಪಿಗೆ ಬಂದು ಕೆರೆಯಲ್ಲಿ ಮುಳುಗಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ.ಅದುವೇ ಈಗ ಚಂದ್ರಮೌಳೀಶ್ವರ ದೇವಸ್ಥಾನ ಇರುವ ಜಾಗ.

ಶಿವರಾತ್ರಿಯ ಉಪವಾಸದ ಮಹತ್ವ

                                          ಶಿವರಾತ್ರಿಯ ಉಪವಾಸದ ಮಹತ್ವ
ಹಿಂದೆ  ಗುಹಾಂಡ ಎಂಬ ಬೇಟೆಗಾರನಿದ್ದ.ಕಾಡಿಗೆ ಹೋಗಿ ಪ್ರಾಣಿಗಳನ್ನು ಬೇಟೆಯಾಡುವುದು ಆತನ ಮುಖ್ಯ ಕೆಲಸ.ಹೀಗೆ ಒಮ್ಮೆ ಆತ ಬೇಟೆಗೆ ಹೋದ ದಿನ ಶಿವರಾತ್ರಿ ಯಾಗಿತ್ತು.ಆದರೆ ಬೇಡನಿಗೆ ಇದರ ಪರಿವೆ ಇರಲಿಲ್ಲ.ಆದರೆ ಆವತ್ತು ಆತನಿಗೆ ಬೇಟೆಯೇ ಸಿಗಲಿಲ್ಲ.ಹೀಗಾಗಿ ಆತ ಕತ್ತಲಾಗುವವರೆಗೂ ಕಾಡಿನಲ್ಲೇ ಇರಬೇಕಾಯಿತು.
ತುಂಬಾ ಕತ್ತಲಾದ ಕಾರಣ ಆತ ಕಾಡಿನಲ್ಲೇ ರಾತ್ರಿಯನ್ನು ಕಳೆಯಲು ನಿರ್ಧರಿಸಿದ .ಕಾಡುಪ್ರಾಣಿಗಳ  ಉಪಟಳಕ್ಕೆ ಹೆದರಿ ಆತ ಒಂದು ಮರವನ್ನು ಹತ್ತಿ ಕುಳಿತ.ಆ ಮರ ಬಿಲ್ವ ಪತ್ರೆಯ ಮರವಾಗಿತ್ತು.ಆತ ಮರದಲ್ಲೇ ಕುಳಿತು  ರಾತ್ರಿ ಕಳೆಯಲು ನಿರ್ಧರಿಸಿದ.ಆದರೆ ಆ ಮರದ ಬುಡದಲ್ಲಿ ಶಿವಲಿಂಗ ಇದ್ದದ್ದು ಅವನಿಗೆ ತಿಳಿಯಲಿಲ್ಲ.
ಇಡೀ ರಾತ್ರಿ ಆತ ಕಾಡು ಪ್ರಾಣಿಗಳಿಗೆ ಹೆದರಿ ಜಾಗರಣೆಯಲ್ಲೇ ಕಳೆದ.ಬೇಸರವಾಗಿ ಆತ ತಾನು ಕುಳಿತ್ತಿದ್ದ ಬಿಲ್ವ ಮರದ ಎಲೆಗಳನ್ನೇ ಕಿತ್ತು ಕೆಳಗೆ ಹಾಕುತ್ತಿದ್ದ.ಅವು ಅಲ್ಲಿದ್ದ ಶಿವಲಿಂಗದ ಮೇಲೆ ಬೀಳುತ್ತಿದ್ದವು.ಆತ ಇಡಿ ರಾತ್ರಿ ತಿನ್ನಲು ಏನೂ ಇಲ್ಲದೆ ಉಪವಾಸವಿದ್ದ.ಹೀಗೆ ಆತ ರಾತ್ರಿ ಕಳೆದ.ಶಿವರಾತ್ರಿಯಂದು ಆತ ಮಾಡಿದ ಕಾರ್ಯದಿಂದ ಪ್ರಸನ್ನನಾದ ಪರಶಿವನು ಪ್ರತ್ಯಕ್ಷನಾಗಿ ಆತನ ಎಲ್ಲ ಅಪರಾಧವನ್ನು ಮನ್ನಿಸಿ ಆತನಿಗೆ ಮುಕ್ತಿಯನ್ನು ಕರುಣಿಸುತ್ತಾನೆ.ಹೀಗೆ ಶಿವರಾತ್ರಿಯಂದು ಉಪವಾಸ ಮಾಡುವ ಮತ್ತು ಶಿವನಿಗೆ ಪ್ರೀತಿಯನ್ನು ಉಂಟು ಮಾಡಲು ಶಿವನ ನಾಮಸ್ಮರಣೆ ಮಾಡುವ ಕ್ರಮ ಬೆಳೆದು ಬಂತು.

ಲೋಪಮುದ್ರಾ ಳ ಕಥೆ

                                          ಲೋಪಮುದ್ರಾ ಳ ಕಥೆ
ಲೋಪಮುದ್ರಾ ಇವಳು ಅಗಸ್ತ್ಯ ಋಷಿಯ ಪತ್ನಿ.ಆಕೆ ವಿಧರ್ಭ ರಾಜನ ಮಗಳು .ಅಗಸ್ತ್ಯನು ಲೋಪಮುದ್ರಾಳನ್ನು  ಸೃಷ್ಟಿಸಿದನು.ಅದು ಹೇಗೆಂದರೆ ತನ್ನ ಪತ್ನಿಯು ಸುಂದರವಾಗಿರಬೇಕೆಂದು ಬಯಸಿದ ಅಗಸ್ತ್ಯನು ಪ್ರಾಣಿಗಳ ಉತ್ತಮವಾದ ಅಂಗಗಳನ್ನು ಪಡೆದು ಲೋಪಮುದ್ರಾಳನ್ನು ಸೃಷ್ಟಿಸಿದನು.ಉದಾಹರಣೆಗೆ ಆತನು ಜಿಂಕೆಯಿಂದ ಅದರ ಕಣ್ಣುಗಳನ್ನು  ಪಡೆದನು.
ಹೀಗೆ ಪ್ರತಿ ಪ್ರಾಣಿಯ ಅಂಗವು ಲೋಪವಾಗಿ,ಅದು ಲೋಪಮುದ್ರಾಳಲ್ಲಿ ಸೇರಿಕೊಂಡ ಕಾರಣ ಆಕೆಗೆ ಲೋಪಮುದ್ರಾ ಎನ್ನುವ ಹೆಸರು ಬಂತು.ನಂತರ ಅವಳನ್ನು ಅಗಸ್ತ್ಯನು ವಿದರ್ಭ ರಾಜನ ಬಳಿ ಪಾಲನೆಗಾಗಿ ಬಿಟ್ಟನು.ರಾಜನು ಲೋಪಮುದ್ರಾಳನ್ನು ತನ್ನ ಮಗಳಂತೆಯೇ ಸಾಕಿದನು.
ಲೋಪಮುದ್ರಾ ಪ್ರಾಯಕ್ಕೆ ಬಂದ ಮೇಲೆ ಅಗಸ್ತ್ಯನು ಅವಳನ್ನು ತನಗೆ ಮದುವೆ ಮಾಡಿಕೊಡುವಂತೆ ರಾಜನನ್ನು ಕೇಳಿದನು.ರಾಜನಿಗೆ ಇಷ್ಟವಿಲ್ಲದಿದ್ದರೂ ಲೋಪಮುದ್ರಾಳ ಒತ್ತಾಯಕ್ಕೆ ತಲೆಬಾಗಿ ಆಕೆಯನ್ನು ಅಗಸ್ತ್ಯನಿಗೆ ಮದುವೆ ಮಾಡಿಕೊಟ್ಟನು.
ಹೀಗೆ ಲೋಪಮುದ್ರಾ ಮುನಿ ಅಗಸ್ತ್ಯನ ಹೆಂಡತಿಯಾದಳು.ಆದರೆ ಅಗಸ್ತ್ಯನೋ ಓರ್ವ ಮುನಿ.ತಪಶ್ಚರ್ಯೆಯಲ್ಲಿ ಮುಳುಗಿರುವವನು.ಆತನಿಗೆ ಸಾಂಸಾರಿಕ ಜೀವನದಲ್ಲಿ ಆಸಕ್ತಿಯೇ ಇರುವುದಿಲ್ಲ.ಇದರಿಂದ ರೋಸಿಹೋದ ಲೋಪಮುದ್ರಾ ಅಗಸ್ತ್ಯ ಮುನಿಗೆ ಪದ್ಯದ ಮೂಲಕ ತನ್ನ ಕರ್ತವ್ಯದ ಅರಿವು ಮಾಡಿಕೊಡುತ್ತಾಳೆ.ಇದನ್ನು ಅರಿತ ಅಗಸ್ತ್ಯ ಮುನಿ ತನ್ನನ್ನು ತಿದ್ದಿಕೊಳ್ಳುತ್ತಾನೆ.ನಂತರ ಅವರಿಗೆ ಧೃದಸ್ಯು ಎನ್ನುವ ಮಗನೂ ಹುಟ್ಟುತ್ತಾನೆ.
ನದಿ ಕಾವೇರಿ ಇದು ಲೋಪಮುದ್ರಾಳ ಪುನರ್ಜನ್ಮ ಎಂದು ಹೇಳಲಾಗುತ್ತದೆ.ಅಗಸ್ತ್ಯ ಮುನಿಯ ಕಮಂಡಲುವಿನಿಂದ ಹರಿದ ಜಲರೂಪಿ ಲೋಪಮುದ್ರೆಯೇ ಕಾವೇರಿ ನದಿ.
 

Tuesday, March 1, 2011

ಸೇಬಿನ ಹಲ್ವಾ ಮಾಡುವುದು ಹೇಗೆ?

                                       ಸೇಬಿನ ಹಲ್ವಾ ಮಾಡುವುದು ಹೇಗೆ?
ಇವತ್ತು ಸೇಬು ಹಣ್ಣಿನಿಂದ ಹಲ್ವಾ ಮಾಡುವುದನ್ನು ತಿಳಿದುಕೊಳ್ಳೋಣ



ಬೇಕಾಗುವ ಸಾಮಗ್ರಿಗಳು:
ತುಂಡು ಮಾಡಿದ ಸೇಬು ಹಣ್ಣುಗಳು-೪
ಪಾಕ ಮಾಡಲು ಬೆಲ್ಲ
ಹುರಿದ ಚಿರೋಟಿ ರವೆ-೧ ಕಪ್
ಕಾಯಿಸಿ ತಣಿಸಿದ ಹಾಲು-೧ ಕಪ್
ಸ್ವಲ್ಪ ಏಲಕ್ಕಿ ಪುಡಿ
ಸ್ವಲ್ಪ ತುಪ್ಪ
ಸ್ವಲ್ಪ ಗೋಡಂಬಿ





ಮಾಡುವ ವಿಧಾನ
ಮೊದಲು ಕುದಿಯುತ್ತಿರುವ ನೀರಿಗೆ ತುಂಡು ಮಾಡಿದ ಸೇಬು ಹಣ್ಣುಗಳನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಲು ಬಿಡಿ.ನಂತರ ಹೀಗೆ ಬೆಂದ ಸೇಬು ಹಣ್ಣುಗಳನ್ನು ಒಂದು ಪಾತ್ರೆಗೆ ಹಾಕಿ ನೀರಿನ ಅಂಶ ಎಲ್ಲಾ ತೆಗೆದು ಸರಿಯಾಗಿ ಮ್ಯಾಶ್ ಮಾಡಿ.ನಂತರ ಬೆಲ್ಲದ ಪಾಕ(ಬೆಲ್ಲದ ಪರಿಮಳ ಬರುವವರೆಗೆ)ತಯಾರಿಸಿ.
ಈಗ ಮ್ಯಾಶ್ ಮಾಡಿದ ಸೇಬು ಹಣ್ಣುಗಳನ್ನು ಈ ಬೆಲ್ಲದ ಪಾಕಕ್ಕೆ ಸೇರಿಸಿ.ನಂತರ ಕೈ ಆಡಿಸುತ್ತಲೇ ಇದಕ್ಕೆ ಮೊದಲೇ ಹುರಿದ ರವೆ.ಹಾಲು ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ.ಈಗ ಅದನ್ನು ಹಲ್ವಾ ಪಾತ್ರೆ ಬಿಟ್ಟು ಬರುವವರೆಗೆ ಕುದಿಸಿ.ಹಲ್ವಾ ಪಾತ್ರೆಯ ಅಂಚು ಬಿಡುತ್ತಿರುವಾಗ ಅದಕ್ಕೆ ತುಪ್ಪ ಮತ್ತು ಹಸಿ ಗೋಡಂಬಿಯನ್ನು ಸೇರಿಸಿ.
ನಂತರ ಒಂದು ಪ್ಲೇಟ್ ಗೆ ತುಪ್ಪ ಸವರಿ ಅದರಲ್ಲಿ ತಯಾರಾದ ಸೇಬಿನ ಹಲ್ವಾವನ್ನು ಹಾಕಿ.ತಣ್ಣಗಾದ ಮೇಲೆ ಅದನ್ನು ಇಷ್ಟ ಬಂದ ಆಕಾರದಲ್ಲಿ  ಕತ್ತರಿಸಿ.ಈಗ ಸೇಬು ಹಣ್ಣಿನ ಹಲ್ವಾ ತಿನ್ನಲು ರೆಡಿ.