Tuesday, September 2, 2014

ತುಳು ಜೀವನಾನುಭವ

ಕಡಲ್ದ ನೀರ್ ಏಪಲ ಆಜುಜಿ , ಉಡಲ್ದ  ಬ್ಯಾನೆ ಏಪಲ ಮಾಜುಜಿ . 

ಕಡಲ್ದ = ಸಮುದ್ರದ
ನೀರ್ = ನೀರು
ಏಪಲ  = ಯಾವತ್ತೂ
ಆಜುಜಿ = ಆವಿಯಾಗುವುದಿಲ್ಲ .
ಉಡಲ್ದ = ಹೊಟ್ಟೆಯ
ಬ್ಯಾನೆ = ನೋವು
ಮಾಜುಜಿ = ವಾಸಿಯಾಗುವುದಿಲ್ಲ .

ಇದು ಒಂದು ಜೀವನಾನುಭವ . ಹೇಗೆ ಸಮುದ್ರದ ನೀರು ಅಗಾಧವಾಗಿದ್ದರೂ , ಅದರ ಮೇಲೆ ಎಷ್ಟೇ ಸೂರ್ಯನ ಬಿಸಿಲು ಬಿದ್ದು ಆವಿಯಾದರೂ ಅದು ಕಡಿಮೆಯಾಗುವುದಿಲ್ಲವೋ , ಅದೇ ತರಹ ಮನಸ್ಸಿಗಾದ ( ಹೊಟ್ಟೆ ಎಂಬ ಸಾಂಕೇತಿಕ ಅರ್ಥ ) ಗಾಯ ಅಥವಾ ನೋವು ಯಾವತ್ತೂ ಗುಣವಾಗುವುದಿಲ್ಲ .