Thursday, July 31, 2025

ನನ್ನದಲ್ಲದ ಕವಿತೆ

 

ಖ್ಯಾತ ಹನಿಕವಿ ದುಂಡಿರಾಜ್ ಹೇಳಿದ್ದು   ------



ಪ್ರತಿಭೆ ಇದ್ದರೂ ಪ್ರಚಾರ ಸಿಗದವರು

ಎಲೆ ಮರೆಯ ಕಾಯಿ

ಊಟಕ್ಕೆ ಕರೆದು ಏನೂ ಬಡಿಸದೆ ಇದ್ದರೆ

ಎಲೆ ಮುಂದೆ ಕಾಯಿ   !!!!!


----------------------------------------


ಅತ್ತೆ ಉಪಚಾರ ಅಳಿಯನಿಗೆ


ಇನ್ನೂ ಒಂದು ಜಿಲೇಬಿ ಹಾಕಲೇ ?


ವಿಧಿ ಇಲ್ಲದೆ ತಿಂದ ಅಳಿಯ ಮಾಡಿದ ಗಿನ್ನಿಸ್ ದಾಖಲೆ  !!!!!




----------------------------------------


ಸದಾ ಭುಸುಗುಡುತ್ತಿದ್ದ ಬಾಸ್

ನಗುತ್ತಿದ್ದಾರೆ, ಅರಳಿದೆ ಮನ


ಇದಕ್ಕೆಲ್ಲ ಕಾರಣವಿಷ್ಟೇ

ಆಪ್ತ ಸಹಾಯಕಿಯ ಆಗಮನ     !!!!!!

No comments:

Post a Comment