Saturday, October 19, 2013

ಫ್ರೆಂಚ್ ಫ್ರೈ ಮಾಡುವ ವಿಧಾನ

                                     ಫ್ರೆಂಚ್ ಫ್ರೈ ಮಾಡುವ ವಿಧಾನ 

ಬೇಕಾಗುವ ಸಾಮಾನುಗಳು 

ಆಲೂಗಡ್ಡೆ  - ದೊಡ್ಡ ಗಾತ್ರದ್ದು - ಉದ್ದಕ್ಕೆ ಕತ್ತರಿಸಿದ್ದು
ಕಾಳು ಮೆಣಸಿನ ಪುಡಿ ಮತ್ತು ಉಪ್ಪು  - ರುಚಿಗೆ ತಕ್ಕಷ್ಟು
ಕರಿಯಲು ಎಣ್ಣೆ

ಮಾಡುವ ವಿಧಾನ 

ಮೊದಲು ಎಣ್ಣೆ ಬಿಸಿಗಿಡಬೇಕು . ಅದು ಕಾದ ಮೇಲೆ ಅದಕ್ಕೆ ಉದ್ದಕ್ಕೆ ಹೆಚ್ಚಿದ ಆಲೂಗಡ್ಡೆಯ ತುಂಡುಗಳನ್ನು ಹಾಕಿ , ಕೆಂಬಣ್ಣ ಬರುವವರೆಗೆ ಕರಿಯಬೇಕು . ನಂತರ ಒಂದು ಬೌಲ್ ಗೆ ಹಾಕಿ , ನಂತರ ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು . ಬಿಸಿಯಿರುವಾಗಲೇ ತಿಂದರೆ ಚೆನ್ನ .