Friday, March 22, 2019

ತುಳು ಗಾದೆ

ನನ್ನ ಮಾತೃ ಭಾಷೆ ತುಳು . ತುಳುವಿಗೆ ಅಧಿಕೃತ ಲಿಪಿ ಇಲ್ಲದ ಕಾರಣ ಕನ್ನಡದಲ್ಲಿ ಬರೆಯುತ್ತಿ ದ್ದೇನೆ .


ಕೋರಿ ಪತ್ಯೆ ರೆ ಬಾರ್ ಬಿರ್ಕೊಡು .


ಕೋರಿ = ಕೋಳಿ
ಪತ್ಯೆ ರೆ  = ಹಿಡಿಯಲು
ಬಾರ್    =  ಭತ್ತ
ಬಿರ್ಕೊಡು  =  ಚೆಲ್ಲ ಬೇಕು


ಇದು ಇವತ್ತಿನ ಕಾಲಕ್ಕೆ ಸೂಕ್ತವಾಗಿ ಅನ್ವ ಯಿ ಸುವ ಗಾದೆ ಮಾತು . ಇದನ್ನೇ ಕಾರ್ಯ ವಾಸಿ ಕತ್ತೆ ಕಾಲು ಹಿಡಿ ಎಂದೂ ಹೇಳಬಹುದು .

ಕೋಳಿ ಗಳಿಗೆ ಭತ್ತದ ಕಾಳು ಗಳೆಂದರೆ ಇಷ್ಟ . ಹೀಗಾಗಿ ಕೋಳಿ ಹಿಡಿಯಲು ಅವುಗಳಿಗೆ ಭತ್ತದ ಕಾಳುಗಳ ಆಮಿಷ ಒಡ್ಡಿ ಅವುಗಳನ್ನು ನಮ್ಮ ಬಳಿ ಬರುವಂತೆ ಮಾಡಿ ಸುಲಭವಾಗಿ ಹಿಡಿಯಬಹುದು.


ಮೇಲ್ನೋಟದ ಅರ್ಥ ಇದು . ನಮ್ಮ ದೈನಂದಿನ ಜೀವನದಲ್ಲೂ ನಮ್ಮ ಕೆಲಸ ತುರ್ತಾಗಿ ಆಗಬೇಕಾದರೆ ಇನ್ನೊಬ್ಬರಿಗೆ ಆಮಿಷ ಒಡ್ಡಿ ನಮ್ಮ ಕೆಲಸವನ್ನು ಸುಲಭದಲ್ಲಿ ಮಾಡಿಕೊಳ್ಳ ಬಹುದು. ಅಂದರೆ ಲಂಚ ನೀಡಿ .

No comments:

Post a Comment