Friday, May 15, 2020

ಕಾಯಿ ಬೆಲ್ಲದ ಉಂಡೆ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು

ತಾಜಾ ಕಾಯಿ ತುರಿ  - ೨ ಕಪ್
ಅಂಟು ಬೆಲ್ಲ - ೧ ಕಪ್
ಏಲಕ್ಕಿ ಪುಡಿ -  ೨ ದೊಡ್ಡ ಚಿಟಿಕೆ
ತುಪ್ಪ - ೧ ದೊಡ್ಡ ಚಮಚ

ಮಾಡುವ ವಿಧಾನ


ಮೊದಲಿಗೆ ಒಂದು ದಪ್ಪ ತಳದ ಪಾತ್ರೆಯಲ್ಲಿ ಕಾಯಿ ತುರಿ ಹಾಕಿ ಹುರಿಯಬೇಕು . ಆದರೆ ಕೆಂಪಗಾಗ ಲು ಬಿಡಬಾರದು . ನಂತರ ಇದಕ್ಕೆ ಬೆಲ್ಲವನ್ನು ಹಾಕಿ ಸರಿಯಾಗಿ ಮಿಶ್ರ ಮಾಡಬೇಕು .

ಮಿಶ್ರಣ ಮುದ್ದೆ ಆಗ ತೊಡಗಿದಾಗ ಏಲಕ್ಕಿ ಪುಡಿ ಸೇರಿಸಿ ಸರಿಯಾಗಿ ಮಿಶ್ರ ಮಾಡಬೇಕು .  ನಂತರ ಒಲೆಯಿಂದ ಕೆಳಗಿಳಿಸಿ ತಣಿಯಲು ಬಿಡಬೇಕು .


ಹದ ಬಿಸಿ ಇರು ವಾಗಲೇ ಕೈಗೆ ತುಪ್ಪ ಸವರಿ ಉಂಡೆ ಕಟ್ಟಬೇಕು.


No comments:

Post a Comment