Thursday, September 7, 2023

ಉಡುಪಿ ಯಲ್ಲೇಕೆ ಹುಲಿವೇಷ ಪ್ರಸಿದ್ಧ?

ಉಡುಪಿಯಲ್ಲಿ ನಿನ್ನೆ ಸೌರ ಮಾನದ ಪ್ರಕಾರ ಕೃಷ್ಣ ಜನ್ಮಾಷ್ಟಮಿ  ಮತ್ತು ಇವತ್ತು ವಿಟ್ಲ ಪಿಂಡಿ..


ವಿಟ್ಲ ಪಿಂಡಿಯ ದಿನ ಉಡುಪಿಯಲ್ಲಿ ಹುಲಿವೇಷ  ಧಾರಿಗಳದ್ದೇ ಅಬ್ಬರ .


ಇದರ ಹಿಂದೆ ಒಂದು ರೋಚಕ ಮತ್ತು ಸತ್ಯ ಘಟನೆ ಇದೆ 


ಅದು ತುಂಬಾ ಹಿಂದೆ ಫಲಿಮಾರು  ಮಠದ ರಘು ಪ್ರವೀರ  ಶ್ರೀ ಗಳ  ಪರ್ಯಾಯ.



ಆಗ ಒಂದು ಹುಲಿಯು ಶ್ರೀಗಳ ಮೆಚ್ಚಿನ ಹಸುವಾಗಿದ್ದ ನರ್ಮದಾ ಎಂಬ ಹಸುವನ್ನು ಕೊಂದು ಹಾಕಿತು.


ಇದರಿಂದ ಆಘಾತ  ಗೊಂಡ ಶ್ರೀಗಳು ಅಂದು ಕೃಷ್ಣ ಪೂಜೆಯನ್ನೂ ಮಾಡದೆ ಧ್ಯಾನಸ್ಥ  ರಾದರು 


ಆಗ ಪವಾಡ ವೆಂಬಂತೆ  ಅದೇ ಹುಲಿಯು ಸ್ವಲ್ಪ ಹೊತ್ತಿನಲ್ಲಿ ಕೃಷ್ಣ ಮಠದ ಎದುರು ಬಂದು ಪ್ರಾಣ ಬಿಟ್ಟಿತು.


ಈ ಶ್ರೀಗಳು  ತುಳು ಭಾಷೆಯಲ್ಲಿ ಪಿಲಿ ಕೊರ್ತಿನಿ ಸ್ವಾಮಿಲು ಎಂದೇ  ಪ್ರಸಿದ್ಧ.


ಅಂದಿನಿಂದ ಸತ್ಯ ಸಂಧ ಹುಲಿ ಮತ್ತು ಶ್ರೀ ಕೃಷ್ಣನ ಪವಾಡ ನೆನೆಯಲು ಊರಿನವರು ಹರಕೆ ರೂಪದಲ್ಲಿ ಹುಲಿ ವೇಷ ಧರಿಸುತ್ತಾರೆ.


ಈಗ ಹುಲಿ ವೇಷ ಹಾಕುವ ತಂಡಗಳೇ ಇವೆ.


ಈ ಪ್ರಾಚೀನ ಮತ್ತು ಜಾನಪದ ಕಲೆಯನ್ನು ಪ್ರೋತ್ಸಾಹಿಸಲು ಉಡುಪಿಯ ವಿವಿಧೆಡೆ ತಂಡಗಳ ಮಧ್ಯೆ ಸ್ಪರ್ಧೆ ನಡೆಯುತ್ತದೆ.


ವಿಟ್ಲ ಪಿಂಡಿ ಯ ದಿನ ಸಾರ್ವಜನಿಕ ಪ್ರದರ್ಶನ ಇರುತ್ತದೆ.



No comments:

Post a Comment