Saturday, September 9, 2023

ಉಡುಪಿಯಲ್ಲಿ ಮೋದಿ !!

 ಮೊನ್ನೆ ವಿಟ್ಲ ಪಿಂಡಿಯ ದಿನ ಉಡುಪಿಯ ರಥಬೀದಿಗೆ ಪ್ರಧಾನಿ ಮೋದಿ ಬಂದಿದ್ದರು.


ನೆರೆದ ಜನರೆಲ್ಲಾ ಮೋದಿ ಜೊತೆ ಸೆಲ್ಫಿ ತಗೊಂಡು ಸಂಭ್ರಮಿಸಿದರೆ ಮೋದಿಯವರು ಜನರಿಗೆ ಕೈ ಬೀಸಿದ್ದೇ ಬೀಸಿದ್ದು  !!!


ನಿಜವಾದ ಮೋದಿ ಇವರಲ್ಲ 


ಅವರಂತೆ ಕಾಣುವ ತದ್ರೂ ಪಿ ಇವರು  !!!


ವಿಟ್ಲ ಪಿಂಡಿಯ ದಿನ ನಡೆದ ಮೆರವಣಿಗೆ ಯಲ್ಲಿ ಪ್ರಥಮ ಬಾರಿಗೆ ಹುಲಿಗಳ ಜೊತೆ ಕಪ್ಪು ಮುಖ ಮತ್ತು ಬಿಳಿ ಮೈ ಹೊಂದಿರುವ ಸಿಂಗ ಳೀಕ ಬಂದಿತ್ತು.


ಮೆರವಣಿಗೆ ಯಲ್ಲಿ ಪೌರಾಣಿಕ ರಾಕ್ಷಸ ವೇಷ ಧಾರಿಗಳ ಜೊತೆ ಹಾಲಿವುಡ್ ಸಿನೆಮಾ ದ ಡ್ರಾಗನ್ ಮತ್ತು ವಿಚಿತ್ರ ಭಯಾನಕ ವೇಷ ಗಳೂ ಇದ್ದವು.


ಕೃಷ್ಣನ ಮೃಣ್ಮಯ ಮೂರ್ತಿಯ ವಿಸರ್ಜನೆ ಆದ ನಂತರ ನಡೆದ ಹುಲಿವೇಷ ಸ್ಪರ್ಧೆ ಯಲ್ಲಿ ಎಲ್ಲಾ ಹುಲಿ ವೇಷ ತಂಡಗಳೂ ಭಾಗವಹಿಸಿ ದ್ದವು.


ಮಹಿಳಾ ಹುಲಿ ವೇಷ ತಂಡ ಹುಲಿ ವೇಷ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ ಪಡೆಯಿತು.

No comments:

Post a Comment