Saturday, April 5, 2014

ಅವಲಕ್ಕಿ ಚುಡಾ ಮಾಡುವ ವಿಧಾನ

ಈ ವಿಧಾನದಲ್ಲಿ ಕುರ್ಲು ( ಕಡ್ಲೆ ಪುರಿ ) ಕೂಡಾ ಅವಲಕ್ಕಿಯ ಬದಲು ಉಪಯೋಗಿಸಬಹುದು .

ಬೇಕಾಗುವ ಸಾಮಗ್ರಿಗಳು 

ನೈಲಾನ್ ಅವಲಕ್ಕಿ
ಕಡ್ಲೆ ಬೀಜ
ಕರಿ ಬೇವಿನ ಸೊಪ್ಪು
ಸ್ವಲ್ಪ ಎಣ್ಣೆ
ಅಚ್ಚ ಖಾರದ ಪುಡಿ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ 

ಮೊದಲು ಒಂದು ಪ್ಯಾನ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ನಂತರ ಕಡ್ಲೆ ಬೀಜ . ಕರಿ ಬೇವಿನ ಸೊಪ್ಪಿನ ಎಸಳು ಮತ್ತು ಖಾರದ ಪುಡಿ ಸೇರಿಸಿ ಹುರಿಯಬೇಕು .
ನಂತರ ಇದಕ್ಕೆ ಅವಲಕ್ಕಿ ಅಥವಾ ಕುರ್ಲು ಹಾಕಿ ಬೆರೆಸಬೇಕು . ಗ್ಯಾಸ್ ಆಫ್ ಮಾಡಿ ಸ್ವಲ್ಪ ಹೊತ್ತು ಬಿಟ್ಟರೆ ಅವಲಕ್ಕಿ ಗರಿ ಗರಿ ಆಗುತ್ತದೆ ಮತ್ತು ಮೇಲಿನ ಸಾಮಗ್ರಿಗಳನ್ನು ಬೆರೆಸಿ ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು .