Thursday, March 3, 2011

ಲೋಪಮುದ್ರಾ ಳ ಕಥೆ

                                          ಲೋಪಮುದ್ರಾ ಳ ಕಥೆ
ಲೋಪಮುದ್ರಾ ಇವಳು ಅಗಸ್ತ್ಯ ಋಷಿಯ ಪತ್ನಿ.ಆಕೆ ವಿಧರ್ಭ ರಾಜನ ಮಗಳು .ಅಗಸ್ತ್ಯನು ಲೋಪಮುದ್ರಾಳನ್ನು  ಸೃಷ್ಟಿಸಿದನು.ಅದು ಹೇಗೆಂದರೆ ತನ್ನ ಪತ್ನಿಯು ಸುಂದರವಾಗಿರಬೇಕೆಂದು ಬಯಸಿದ ಅಗಸ್ತ್ಯನು ಪ್ರಾಣಿಗಳ ಉತ್ತಮವಾದ ಅಂಗಗಳನ್ನು ಪಡೆದು ಲೋಪಮುದ್ರಾಳನ್ನು ಸೃಷ್ಟಿಸಿದನು.ಉದಾಹರಣೆಗೆ ಆತನು ಜಿಂಕೆಯಿಂದ ಅದರ ಕಣ್ಣುಗಳನ್ನು  ಪಡೆದನು.
ಹೀಗೆ ಪ್ರತಿ ಪ್ರಾಣಿಯ ಅಂಗವು ಲೋಪವಾಗಿ,ಅದು ಲೋಪಮುದ್ರಾಳಲ್ಲಿ ಸೇರಿಕೊಂಡ ಕಾರಣ ಆಕೆಗೆ ಲೋಪಮುದ್ರಾ ಎನ್ನುವ ಹೆಸರು ಬಂತು.ನಂತರ ಅವಳನ್ನು ಅಗಸ್ತ್ಯನು ವಿದರ್ಭ ರಾಜನ ಬಳಿ ಪಾಲನೆಗಾಗಿ ಬಿಟ್ಟನು.ರಾಜನು ಲೋಪಮುದ್ರಾಳನ್ನು ತನ್ನ ಮಗಳಂತೆಯೇ ಸಾಕಿದನು.
ಲೋಪಮುದ್ರಾ ಪ್ರಾಯಕ್ಕೆ ಬಂದ ಮೇಲೆ ಅಗಸ್ತ್ಯನು ಅವಳನ್ನು ತನಗೆ ಮದುವೆ ಮಾಡಿಕೊಡುವಂತೆ ರಾಜನನ್ನು ಕೇಳಿದನು.ರಾಜನಿಗೆ ಇಷ್ಟವಿಲ್ಲದಿದ್ದರೂ ಲೋಪಮುದ್ರಾಳ ಒತ್ತಾಯಕ್ಕೆ ತಲೆಬಾಗಿ ಆಕೆಯನ್ನು ಅಗಸ್ತ್ಯನಿಗೆ ಮದುವೆ ಮಾಡಿಕೊಟ್ಟನು.
ಹೀಗೆ ಲೋಪಮುದ್ರಾ ಮುನಿ ಅಗಸ್ತ್ಯನ ಹೆಂಡತಿಯಾದಳು.ಆದರೆ ಅಗಸ್ತ್ಯನೋ ಓರ್ವ ಮುನಿ.ತಪಶ್ಚರ್ಯೆಯಲ್ಲಿ ಮುಳುಗಿರುವವನು.ಆತನಿಗೆ ಸಾಂಸಾರಿಕ ಜೀವನದಲ್ಲಿ ಆಸಕ್ತಿಯೇ ಇರುವುದಿಲ್ಲ.ಇದರಿಂದ ರೋಸಿಹೋದ ಲೋಪಮುದ್ರಾ ಅಗಸ್ತ್ಯ ಮುನಿಗೆ ಪದ್ಯದ ಮೂಲಕ ತನ್ನ ಕರ್ತವ್ಯದ ಅರಿವು ಮಾಡಿಕೊಡುತ್ತಾಳೆ.ಇದನ್ನು ಅರಿತ ಅಗಸ್ತ್ಯ ಮುನಿ ತನ್ನನ್ನು ತಿದ್ದಿಕೊಳ್ಳುತ್ತಾನೆ.ನಂತರ ಅವರಿಗೆ ಧೃದಸ್ಯು ಎನ್ನುವ ಮಗನೂ ಹುಟ್ಟುತ್ತಾನೆ.
ನದಿ ಕಾವೇರಿ ಇದು ಲೋಪಮುದ್ರಾಳ ಪುನರ್ಜನ್ಮ ಎಂದು ಹೇಳಲಾಗುತ್ತದೆ.ಅಗಸ್ತ್ಯ ಮುನಿಯ ಕಮಂಡಲುವಿನಿಂದ ಹರಿದ ಜಲರೂಪಿ ಲೋಪಮುದ್ರೆಯೇ ಕಾವೇರಿ ನದಿ.
 

No comments:

Post a Comment