Saturday, March 12, 2011

ವೀರಭದ್ರನ ಜನನ

                                               ವೀರಭದ್ರನ ಜನನ
ಸತಿ ದಕ್ಷ ಪ್ರಜಾಪತಿಯ ಮಗಳು.ಅವಳು ಪ್ರಾಯಕ್ಕೆ ಬಂದಾಗ ದಕ್ಷನು ಆಕೆಯ ವಿವಾಹಕ್ಕಾಗಿ ಸ್ವಯಂವರವನ್ನು ಏರ್ಪಡಿಸುತ್ತಾನೆ.ಅವನು ಎಲ್ಲಾ ದೇವತೆಗಳನ್ನು ಆಹ್ವಾನಿಸುತ್ತಾನೆ.ಆದರೆ ಶಿವನನ್ನು ಬಿಟ್ಟು.ಸತಿಯು ಮನದಲ್ಲೇ ಶಿವನನ್ನು ತನ್ನ ಪತಿಯಾಗಿ ಸ್ವೀಕರಿಸುತ್ತಾಳೆ.ಅವಳು ತನ್ನ ತಂದೆಯ ಬಳಿ ಶಿವನನ್ನು ಮದುವೆಯಾಗುವುದಾಗಿ ತಿಳಿಸುತ್ತಾಳೆ.ಆದರೆ ದಕ್ಷನು ಒಪ್ಪುವುದಿಲ್ಲ.
ಆದರೂ ಸತಿ ಶಿವನನ್ನು ಮದುವೆಯಾಗುತ್ತಾಳೆ.ಕೈಲಾಸಕ್ಕೆ ತೆರಳುತ್ತಾಳೆ.ಈ ಮಧ್ಯೆ ದಕ್ಷನು ಯಾಗ ಮಾಡಲು ಉದ್ದೇಶಿಸುತ್ತಾನೆ.ಆತ ಎಲ್ಲಾ ದೇವತೆಗಳನ್ನು ಆಹ್ವಾನಿಸುತ್ತಾನೆ.ಆದರೆ ಶಿವನಿಗೆ ಆಮಂತ್ರಣ ಇರುವುದಿಲ್ಲ.ಇದು ಸತಿಗೆ ಗೊತ್ತಾಗಿ ಆಕೆಗೆ ಬೇಜಾರಾಗುತ್ತದೆ.ಆಕೆಯು ಯಾಗ ಸ್ಥಳಕ್ಕೆ ತೆರಳಿ ತಂದೆಯ ಬಳಿ ಶಿವನಿಗೂ ಆಮಂತ್ರಣ ನೀಡಲು ವಿನಂತಿಸುತ್ತಾಳೆ.
ದಕ್ಷನು ಒಪ್ಪುವುದಿಲ್ಲ.ಇದರಿಂದ ಅವಮಾನಿತಳಾದ ಸತಿ ಅದೇ ಯಜ್ಞ ಕುಂಡಕ್ಕೆ ಬಿದ್ದು ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ.ಇದು ಶಿವನಿಗೆ ಗೊತ್ತಾಗುತ್ತದೆ.ಕ್ರೋಧದಿಂದ ಆತ ತನ್ನ ಕೂದಲನ್ನು ಕಿತ್ತುಕೊಂಡಾಗ ವೀರಭದ್ರನ ಜನನವಾಗುತ್ತದೆ.ಶಿವನು ವೀರಭದ್ರನಿಗೆ ದಕ್ಷನನ್ನು ಕೊಲ್ಲಲು ಆಜ್ಞಾಪಿಸುತ್ತಾನೆ.ಅಂತೆಯೇ ವೀರಭದ್ರನು ಹೊರಡುತ್ತಾನೆ.ಅವನನ್ನು ತಡೆಯಲು ಯತ್ನಿಸಿದವರನ್ನು ಆತನು ಸಂಹರಿಸುತ್ತಾನೆ.ಅಲ್ಲಿದ್ದ  ದೇವತೆಗಳು ಆತನಿಗೆ ವಿರೋಧ ಉಂಟುಮಾಡಿದಾಗ ಅವರನ್ನೂ ಕೊಲ್ಲುತ್ತಾನೆ.
ನಂತರ ದಕ್ಷನನ್ನೂ ಕೊಲ್ಲುತ್ತಾನೆ.ದೇವತೆಗಳ ಸಂಹಾರದ ಸುದ್ದಿ ಬ್ರಹ್ಮನಿಗೆ ತಿಳಿಯುತ್ತದೆ.ಆತ ಬಂದು ಶಿವನನ್ನು ಪ್ರಸನ್ನಗೊಳಿಸಲು ಸ್ತುತಿಸುತ್ತಾನೆ.ಆಗ ಶಿವನು ಪ್ರಸನ್ನಗೊಂಡು ಎಲ್ಲಾ ದೇವತೆಗಳನ್ನು ಬದುಕಿಸುತ್ತಾನೆ.ದಕ್ಷನ ಶಿರದ  ಜಾಗದಲ್ಲಿ ಮೇಕೆಯ ತಲೆಯನ್ನು ಇಡುತ್ತಾನೆ.ಹೀಗೆ ಜೀವದಾನ ಪಡೆದ ದಕ್ಷ ಮತ್ತೆ ಯಾಗ ಮಾಡಲು ಆರಂಭಿಸುತ್ತಾನೆ.
ಆಗ ವಿಷ್ಣುವು ಬಂದು ಈ ಜಗದಲ್ಲಿ ಶಿವನೇ ಎಲ್ಲದಕ್ಕೂ ಕಾರಣನಾಗಿದ್ದಾನೆ. ಎಂದನು.ಇಗ ದಕ್ಷನು ಯಾಗಕ್ಕೆ ಶಿವನಿಗೂ ಆಮಂತ್ರಣವಿತ್ತು ಯಾಗವನ್ನು ಮುಗಿಸುತ್ತಾನೆ.

No comments:

Post a Comment