Friday, March 18, 2011

ಅಂಗುಲಿಮಾಲನ ಕಥೆ

                                                          ಅಂಗುಲಿಮಾಲನ ಕಥೆ
ಭಗವಾನ್ ಬುದ್ಧ ಇದ್ದ ಕಾಲದಲ್ಲಿಯೇ ಅಂಗುಲಿಮಾಲ ಎನ್ನುವ ಕುಖ್ಯಾತ ದರೋಡೆಕೋರನೂ ಇದ್ದ.ಆತ ಕಾಡಿನಲ್ಲಿ ಹಾದುಹೋಗುತ್ತಿದ್ದ ಜನರನ್ನು ಸುಲಿಗೆ ಮಾಡುತ್ತಿದ್ದ.ಅಷ್ಟೇ ಅಲ್ಲದೆ ಅವರ ಕೈ ಬೆರಳುಗಳನ್ನು ಕತ್ತರಿಸಿ ಅದನ್ನು ತನ್ನ ಕೊರಳಿಗೆ ಹಾರವನ್ನಾಗಿ ಮಾಡಿ ಹಾಕಿಕೊಳ್ಳುತ್ತಿದ್ದ.ಹೀಗಾಗಿಯೇ ಅವನಿಗೆ ಅಂಗುಲಿಮಾಲ ಎನ್ನುವ ಹೆಸರು ಬಂತು.ಹೀಗಿರಲು ಒಮ್ಮೆ ಭಗವಾನ್ ಬುದ್ಧರಿಗೆ ಕಾಡಿನ ಮೂಲಕ ಹಾದುಹೋಗಬೇಕಾಗಿ ಬಂತು.
ಅವರ ಶಿಷ್ಯರೆಲ್ಲರೂ ಭಯಗ್ರಸ್ಥರಾಗಿ ಹಿಂದೆ ಸರಿದರು.ಬುದ್ಧರವರಿಗೂ ಅಂಗುಲಿಮಾಲನ ಬಗ್ಗೆ ತಿಳಿಸಿದರು.ಆದರೆ ಬುದ್ಧ ತಮ್ಮ ನಿರ್ಧಾರದಲ್ಲಿ ಆಚಲರಾಗಿದ್ದರು.ಅವರು ಪ್ರಯಾಣಿಸುತ್ತಿದ್ದಾಗ ಶಿಷ್ಯರು ಹೆದರಿದಂತೆ ಅಂಗುಲಿಮಾಲ ಬುದ್ಧನಿಗೆ ತಡೆ ಒಡ್ಡಿದ.ಆದರೆ ಬುದ್ಧ ನಸುನಗುತ್ತಲೇ ಆತನಿಗೆ ತನ್ನ ಬಳಿ ಇದ್ದ ಎಲ್ಲಾ ವಸ್ತುವನ್ನೂ ನೀಡಿದರು.ಅಂಗುಲಿಮಾಲನಿಗೆ ಆಶ್ಚರ್ಯವೋ ಆಶ್ಚರ್ಯ.
ಆತ ಬುದ್ಧ ಅವರ ಮಾತಿಗೆ ಮನಸೋಲುತ್ತಾನೆ.ನಂತರ ಅವರಿಗೆ ಏನು ಬೇಕೆಂದು ಕೇಳುತ್ತಾನೆ.ಆಗ ಬುದ್ಧ ಅವರು ಎದುರಿಗಿದ್ದ ಮರವನ್ನು ತೋರಿಸಿ ಅದರ ೫ ಎಲೆಗಳನ್ನು ತಂದುಕೊಡುವಂತೆ ಕೇಳುತ್ತಾರೆ.ಅಂಗುಲಿಮಾಲನಿಗೆ ನಗಲು ಬಂದರೂ ಆತ ಎಲೆಗಳನ್ನು ಕಿತ್ತು ತಂದು ಬುದ್ಧನ ಕೈಯಲ್ಲಿ ಇಡುತ್ತಾನೆ.
ನಂತರ ಬುದ್ಧ ಅವರು ಅಂಗುಲಿಮಾಲನ ಬಳಿ ಅವನ್ನೆಲ್ಲ ಮಾತೆ ಸ್ವಸ್ಥಾನದಲ್ಲಿ ಇಡಲು ತಿಳಿಸುತ್ತಾರೆ.ಈಗ ಅಂಗುಲಿಮಾಲನಿಗೆ ಆಘಾತವಾಗುತ್ತದೆ.ಒಮ್ಮೆ ಕಿತ್ತ ಎಲೆಗಳನ್ನು ಮತ್ತೆ ಹೇಗೆ ಮರದಲ್ಲಿ ಇಡಲು ಸಾಧ್ಯ?ಎಂದು ಬುದ್ಧನನ್ನೇ ಪ್ರಶ್ನಿಸುತ್ತಾನೆ.ಆಗ ಬುದ್ಧ ಹೇಳುತ್ತಾನೆ "ಜೀವ ತೆಗೆಯುವುದು ತುಂಬಾ ಸುಲಭ.ಆದರೆ ಜೀವ ನೀಡುವುದು ಅಷ್ಟೇ ಕಷ್ಟ"ಎಂದು ತಿಳಿ ಹೇಳುತ್ತಾರೆ.
ಅವರ ಮಾತಿನ ಅಂತರ್ಯವನ್ನು ಅರ್ಥ ಮಾಡಿಕೊಂಡ ಅಂಗುಲಿಮಾಲ ಅವರ ಶಿಷ್ಯನಾಗುತ್ತಾನೆ.ತನ್ನ ಕೆಟ್ಟ ಕೆಲಸಗಳಿಗೆ ಪಶ್ಚಾತ್ತಾಪ  ಪಡುತ್ತಾನೆ.

No comments:

Post a Comment