Monday, July 9, 2012

ಹಲಸು ತಿನ್ನುವ ಸೊಗಸು

                                    ಹಲಸು ತಿನ್ನುವ ಸೊಗಸು 


ಈಗ  ಹಲಸಿನ  ಹಣ್ಣಿನ ಸೀಸನ್.. ಹಸಿವಾದಾಗ ಹಲಸು ಎಂಬ ಗಾದೆಯೇ ಇದೆ.. ನಾನೂ ಮೊನ್ನೆ  ಹಲಸಿನ ಹಣ್ಣನ್ನು ತಿನ್ನಲು ಕುಳಿತೆ . ಹಲಸಿನ ಹಣ್ಣನ್ನು ಮೊದಲು ಕತ್ತಿಯಿಂದ ಎರಡು ಭಾಗ ಮಾಡಿ ನಂತರ ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ .ಮಾಡುವುದು .
ಆ ಸಣ್ಣ ಸಣ್ಣ ತುಂದುಗಳಲ್ಲಿರುವ  ಸೋಳೆಗಳನ್ನು ಬೇರ್ಪಡಿಸುವುದು ಮುಂದಿನ ಕೆಲಸ..(ತುಳು - ಕುಜ್ಜೆ  ಹಜಪುಣ ) ಕೈಗೆ ಮೇಣ ಅಂಟದ ಹಾಗೆ ಕೈಗೆ ತೆಂಗಿನ ಎಣ್ಣೆ  ಸವರಿಕೊಳ್ಳಬೇಕು .ನಂತರ ಸೋಳೆಗಳನ್ನು ಅದರ ಸ್ವಸ್ಥಾನದಿಂದ ತೆಗೆದು ಅದರಲ್ಲಿರುವ ಹಲಸಿನ ಬೀಜ (ತುಳು-- ಬೋಳೆ )ವನ್ನು ತೆಗೆದು ಬೇರೆ ಇಡಬೇಕು..
ಹೀಗೆ ಲಭಿಸಿದ ಸೋಳೆಗಳನ್ನು  ಬಾಯಿಗೆ ಹಾಕಿಕೊಂಡು ತಿನ್ನುವುದು ಮುಂದಿನ ಕೆಲಸ .ಹೀಗೆ ಸೋಳೆಗಳನ್ನು ಅವುಗಳ ಸ್ವಸ್ಥಾನದಿಂದ ಬೇರ್ಪದಿಸುವಾಗ ನನಗೆ ಅನಿಸಿದ್ದು -------------
ವಿಷ್ಣುವಿನ ಅವತಾರವಾದ ನರಸಿಂಹ ರಾಕ್ಷಸ ರಾಜ ಹಿರಣ್ಯಕಶಿಪು ವಿನ ವಧೆ ಮಾಡುತ್ತಿರುವಾಗ ನಾನು ತಿಳಿದ ಪ್ರಕಾರ ನರಸಿಂಹ ಹಿರಣ್ಯಕಶಿಪುವಿನ ಹೊಟ್ಟೆಯನ್ನು ಬಗೆದು ಅಲ್ಲಿರುವ ಕರುಳನ್ನು ಹೊರಗೆ ತೆಗೆಯುತ್ತಾನೆ . ಅಂತೆಯೇ ನಾನು ಹಲಸು ತಿನ್ನುವಾಗ ಆ ದೃಶ್ಯ ನನ್ನ ಕಣ್ಣ ಮುಂದೆ ಬರುತ್ತದೆ..
ನಾನು = ನರಸಿಂಹ (!)
ಹಲಸು  = ಹಿರಣ್ಯಕಶಿಪು
ನಾನು ಹಲಸನ್ನು ಬೇರ್ಪಡಿಸುವುದು = ನರಸಿಂಹ ಹಿರಣ್ಯಕಶಿಪುವಿನ ವಧೆ ಮಾಡಿದಂತೆ .

No comments:

Post a Comment