Sunday, December 8, 2013

ಎಲ್ಲರೊಳಂದಾಗು ಮಂಕುತಿಮ್ಮ !

                           ಎಲ್ಲರೊಳಂದಾಗು ಮಂಕುತಿಮ್ಮ  !

ಇತ್ತೀಚೆಗೆ ನಡೆದ ಘಟನೆ . ಒಂದು ಮೆರವಣಿಗೆ ದಾರಿಯಲ್ಲಿ ಸಾಗುತ್ತಿತ್ತು . ಜನವೋ ಜನ. ಅಲ್ಲೇ ಇರುತ್ತಿದ್ದ ಓರ್ವ ಕಳ್ಳನಿಗೆ ಇದು ಕಳ್ಳತನಕ್ಕೆ ಒಳ್ಳೆಯ ಅವಕಾಶ ಎನಿಸಿತು .
ಅವನೂ ಎಲ್ಲರ ಜೊತೆ ಸೇರಿಕೊಂಡ . ಒಬ್ಬೊಬ್ಬರದೇ ಜೇಬುಗಳ ಪರ್ಸ್ ಕದಿಯುವುದೇ ಅವನ ಕೆಲಸ . ಅವನು ಚಾಣಕ್ಷತನದಿಂದ ಒಬ್ಬೊಬ್ಬರದೇ ಜೇಬು ಕಳ್ಳತನ ಮಾಡಲು ಶುರು ಮಾಡಿದ .
ಆದರೆ ಆತನ ದುರದೃಷ್ಟಕ್ಕೆ ಓರ್ವನಿಗೆ ಇದರ ಸುಳಿವು ಹತ್ತಿತು . ಇದನ್ನರಿತ ಕಳ್ಳ ಅಲ್ಲಿಂದ ತಪ್ಪಿಸಿಕೊಂಡು ಓಡಲು  ಶುರು ಮಾಡಿದ .
ಎಲ್ಲಾ ಕಡೆಯಿಂದನು " ಕಳ್ಳ ! ಕಳ್ಳ ! ಹಿಡಿಯಿರಿ " ಎಂಬ ಕೂಗು . ಕಳ್ಳ ಓಡುತ್ತಿದ್ದಾನೆ . ಜನ ಅವನನ್ನು  ಹಿಂಬಾಲಿಸುತ್ತಿದ್ದಾರೆ . ಕಳ್ಳನಿಗೆ ಓಡಿ ,ಓಡಿ  ಸಾಕಾಯಿತು. ಆತ ಒಂದು ಕಡೆ ಮರೆಯಲ್ಲಿ ಸುಧಾರಿಸಿಕೊಳ್ಳಲು ನಿಂತ . ಇದರ ಅರಿವಿಲ್ಲದ ಜನ " ಕಳ್ಳ , ಕಳ್ಳ  " ಎಂದು ಮುಂದೆ ಸಾಗುತ್ತಿದ್ದಾರೆ.
ಕಳ್ಳನಿಗೆ ಮೋಜೆನಿಸಿತು . ಅವನೂ ಜನರ ಗುಂಪನ್ನು ಸೇರಿಕೊಂಡು " ಕಳ್ಳ , ಕಳ್ಳ ! ಹಿಡಿಯಿರಿ ! " ಎಂದು ಕೂಗುತ್ತಾ ತಾನೂ ಜನರ ಜೊತೆ ಓಡಲಾರಂಭಿಸಿದ  !